ETV Bharat / state

ಪತ್ನಿಯ ವೇತನಕ್ಕಾಗಿ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ ಪತಿ: ಆರೋಪಿ ವಿರುದ್ಧ ಪ್ರಕರಣ ದಾಖಲು - ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

ಖಾಸಗಿ ಕ್ಷಣಗಳನ್ನ ಚಿತ್ರೀಕರಿಸಿಕೊಂಡು ಪತ್ನಿಯ ವೇತನಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಪತಿಯ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Husband blackmailed wife for salary
ಪತ್ನಿಯ ವೇತನಕ್ಕಾಗಿ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ ಪತಿ: ಆರೋಪಿ ವಿರುದ್ಧ ಪ್ರಕರಣ ದಾಖಲು
author img

By ETV Bharat Karnataka Team

Published : Oct 7, 2023, 1:24 PM IST

Updated : Oct 7, 2023, 2:30 PM IST

ಬೆಂಗಳೂರು: 10 ಲಕ್ಷ ರೂ ಹಣ ಹಾಗೂ ವೇತನ ನೀಡದಿದ್ದರೆ ಖಾಸಗಿ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದಾಗಿ ಪತ್ನಿಗೆ ಪತಿಯೇ ಬೆದರಿಕೆ ಹಾಕಿದ ವಿಚಿತ್ರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ 28 ವರ್ಷದ ಮಹಿಳೆಯೊಬ್ಬರು ನೀಡಿರುವ ದೂರಿನ ಅನ್ವಯ ಆಕೆಯ ಪತಿ ಹಾಗೂ ಆತನ ಪೋಷಕರ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಇರುವುದೇನು?: ದೂರು ಕೊಟ್ಟ ಮಹಿಳೆ ಜೊತೆಗೆ ಆಕೆಯ ಪತಿ 2022 ನವೆಂಬರ್​ನಲ್ಲಿ ವಿವಾಹವಾಗಿದ್ದ ನಂತರ ನವ ವಿವಾಹಿತರು ಹನಿಮೂನ್‌ಗೆ ಥಾಯ್ಲೆಂಡ್​ಗೆ ಹೋಗಿದ್ದಾಗ, ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸುತ್ತಿದ್ದ ಆತ, ಅದೇ ರೀತಿಯಲ್ಲಿ ತನ್ನೊಂದಿಗೆ ವರ್ತಿಸುವಂತೆ ದೂರುದಾರಳಿಗೆ ಕಿರುಕುಳ ಕೊಟ್ಟಿದ್ದ ನಂತೆ. ಅಲ್ಲದೇ ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ಅಲ್ಲದೇ ಚಿಕ್ಕಮಗಳೂರಿನ ತನ್ನ ಮನೆಯಲ್ಲಿ ಪೋಷಕರಿಲ್ಲದ ಸಮಯದಲ್ಲಿ ಪತ್ನಿಯೊಂದಿಗೆ ದೈಹಿಕ ಸಂಪರ್ಕ ಹೊಂದಲು ಇಚ್ಚಿಸಿದ್ದ. ಆ ಸಂದರ್ಭದಲ್ಲಿ ಆಕೆಗೆ ತಿಳಿಯದಂತೆ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದ.

ವಿವಾಹಕ್ಕೂ ಮೊದಲು ತಾನು ಸ್ವಂತ ಕನಸ್ಟ್ರಕ್ಷನ್‌ ಕಂಪನಿ ಹೊಂದಿದ್ದೇನೆ ಎಂದಿದ್ದ ಆರೋಪಿಯ ಮಾತು ನಂಬಿದ್ದ ದೂರುದಾರೆ ಮಹಿಳೆ ಮದುವೆಯಾಗಿದ್ದಳು. ಕೆಲ ದಿನಗಳ ನಂತರ ಆರೋಪಿ ನಿರುದ್ಯೋಗಿ ಎಂಬುದು ಪತ್ನಿಗೆ ತಿಳಿದು ಬಂದಿದೆ. ಆದರೆ, ಅದರ ಬಗ್ಗೆ ಪ್ರಶ್ನಿಸಿದಾಗ ಆತ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ಈ ನಡುವೆ ಪತ್ನಿಯ ವೇತನವನ್ನು ತನ್ನ ಖಾತೆಗೆ ವರ್ಗಾವಣೆ ಮಾಡುವಂತೆ ಹಾಗೂ ತವರು ಮನೆಯಿಂದ 10 ಲಕ್ಷ ರೂ. ತರುವಂತೆ ಪೀಡಿಸಿದ್ದ. ಇಲ್ಲದಿದ್ದರೆ, ಖಾಸಗಿ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ. ಜೊತೆಗೆ ಖಾಸಗಿ ದೃಶ್ಯ ಸೆರೆ ಹಿಡಿದಿರುವುದನ್ನು ಯಾರ ಬಳಿಯೂ ಹೇಳದಂತೆ ಬೆದರಿಸಿದ್ದ ಎಂದು ನೊಂದ ಮಹಿಳೆ ತನ್ನ ದೂರಿನಲ್ಲಿ ಆರೋಪ ಮಾಡಿದ್ದಾಳೆ.

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ವಾಹನ: ಮೂವರು ಕಾರ್ಮಿಕರ ಸಾವು, ಐವರಿಗೆ ಗಾಯ

ವಿವಾಹಿತ ಮಹಿಳೆಗೆ ದುಡ್ಡಿಗಾಗಿ ಬ್ಲ್ಯಾಕ್​ಮೇಲ್​ ಮಾಡಿದ್ದ ಆರೋಪ: ಮತ್ತೊಂದೆಡೆ, ವಿವಾಹಿತ ಮಹಿಳೆಯ ವಿಶ್ವಾಸವನ್ನು ಗಳಿಸಿ ಲೈಂಗಿಕವಾಗಿ ಬಳಸಿಕೊಂಡ ಪುತ್ತೂರಿನ ವ್ಯಕ್ತಿಯೊಬ್ಬ, ಕೊನೆಗೆ ಮಹಿಳೆಯನ್ನೇ ಬ್ಲ್ಯಾಕ್​ಮೇಲ್ ಮಾಡಿ ಹಣ ಕೀಳಲು ಯತ್ನಿಸಿದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮಹಿಳಾ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣವೊಂದು ದಾಖಲಾಗಿತ್ತು. ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ ಭಟ್ ಮಾಣಿಲ ಆರೋಪಿ.

ದೂರು ನೀಡಿದ ಮಹಿಳೆಯು, ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಕ್ಲಬ್​ಹೌಸ್ ಆ್ಯಪ್‌ನಲ್ಲಿ ಹಾಡುತ್ತಿದ್ದರು. 2020ರಲ್ಲಿ ಆ್ಯಪ್ ಮೂಲಕವೇ ಆರೋಪಿಯ ಪರಿಚಯ ಆಗಿತ್ತು. 2023ರ ಜನವರಿ ತಿಂಗಳಲ್ಲಿ ಆರೋಪಿ ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿ ಲಾಡ್ಜ್​ಯೊಂದರಲ್ಲಿ ರೂಮ್​ ಮಾಡಿದ್ದನು. ಅಲ್ಲಿ ಮಹಿಳೆಯ ಮೇಲೆ ಆರೋಪಿ ಲೈಂಗಿಕ ಹಲ್ಲೆ ನಡೆಸಿದ್ದಾನೆ. ಅದೇ ಲಾಡ್ಜ್​ನಲ್ಲಿ ಈ ಘಟನೆಯು ಮತ್ತೊಮ್ಮೆ ಜರುಗಿದೆ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

Last Updated : Oct 7, 2023, 2:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.