ETV Bharat / state

ಶೀಲ ಶಂಕಿಸಿ ಪತ್ನಿ ಹತ್ಯೆ ಪ್ರಕರಣ, ಆರೋಪಿ ಪತಿ ಅಂದರ್: ಬಂಧಿಸದಿದ್ದರೆ ಆಗುತ್ತಿತ್ತಾ ಇನ್ನೆರಡು ಮರ್ಡರ್? - ಪತಿಯಿಂದಲೇ ಪತ್ನಿ ಹತ್ಯೆ

ಕೊಲೆ ಮಾಡಿದ್ದ ಆರೋಪಿ ನೇರವಾಗಿ ಧರ್ಮಸ್ಥಳಕ್ಕೆ ತೆರಳಿದ್ದ. ಬಳಿಕ ಅಲ್ಲಿಂದ ಮರಳಿದ್ದು, ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಯನ್ನ ಬಂಧಿಸಲಾಗಿದೆ. ಪತ್ನಿಗೆ ತಂಗಿಯ ಗಂಡನೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ..

husband-arrested-for-killing-his-wife-in-bangalore
ತ್ರಿಬಲ್ ಮರ್ಡರ್​​ ಕೇಸ್​​ನಲ್ಲಿ ಜೈಲುಸೇರಿದ್ದ ಪತಿ ಮತ್ತೆ ಅರೆಸ್ಟ್​
author img

By

Published : Sep 25, 2021, 4:26 PM IST

Updated : Sep 25, 2021, 5:34 PM IST

ಬೆಂಗಳೂರು : ಪತಿಯಿಂದಲೇ ಪತ್ನಿ ಹತ್ಯೆ ಪ್ರಕರಣದ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾಂತರಾಜು ಬಂಧಿತ ಆರೋಪಿ. ಸೆಪ್ಟೆಂಬರ್ 23ರಂದು ಪತ್ನಿಯ ಶೀಲ ಶಂಕಿಸಿದ್ದ ಆಕೆಯ ಪತಿ ಕತ್ತು ಸೀಳಿ ಕೊಲೆ ಮಾಡಿದ್ದ.

ಕೊಲೆ ಮಾಡಿದ್ದ ಆರೋಪಿ ನೇರವಾಗಿ ಧರ್ಮಸ್ಥಳಕ್ಕೆ ತೆರಳಿದ್ದ. ಬಳಿಕ ಅಲ್ಲಿಂದ ಮರಳಿದ್ದು, ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಯನ್ನ ಬಂಧಿಸಲಾಗಿದೆ. ಪತ್ನಿಗೆ ತಂಗಿಯ ಗಂಡನೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಜೊತೆಗೆ ತಂಗಿ ಗಂಡನನ್ನೂ ಸೇರಿ ಇನ್ನೋರ್ವ ಸಂಬಂಧಿಯ ಹತ್ಯೆಗೆ ಯೋಜನೆ ರೂಪಸಿದ್ದ ಎಂಬುದು ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ ಎಂಬ ಮಾಹಿತಿ ದೊರಕಿದೆ. ಇದಿಷ್ಟೇ ಅಲ್ಲ, 2005ರಲ್ಲಿ ವಕೀಲರೊಬ್ಬರ ಕುಟುಂಬಸ್ಥರ ತ್ರಿವಳಿ ಕೊಲೆ ಪ್ರಕರಣದಲ್ಲೂ ಜೈಲು ಸೇರಿದ್ದ ಈತ ಬಳಿಕ ಬಿಡುಗಡೆಯಾಗಿದ್ದ.

ಓದಿ: ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಐವರು ವಿದ್ಯಾರ್ಥಿಗಳು ಸೇರಿ ಆರು ಮಂದಿ ದುರ್ಮರಣ

Last Updated : Sep 25, 2021, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.