ETV Bharat / state

ಬೇವು ಬೆಲ್ಲ ಖರೀದಿ ಮಧ್ಯೆ ಸಿಲಿಕಾನ್​ ಸಿಟಿ ಮಾರ್ಕೆಟ್​ಗಳಲ್ಲಿ ಸೋಂಕಿನ ಅಬ್ಬರ! - ಬೆಂಗಳೂರು ಮಾರ್ಕೆಟ್​ ನ್ಯೂಸ್​

ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಕೋವಿಡ್​ ಕೇಸ್​ಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿದೆ. ಆದರೆ, ಇದಕ್ಕೆ ಕೇರ್​ ಮಾಡದ ಸಿಲಿಕಾನ್​ ಸಿಟಿ ಮಂದಿ ಹಬ್ಬಕ್ಕೆ ವಸ್ತುಗಳನ್ನು ಕೊಳ್ಳಲು ಕೋವಿಡ್​ ರೂಲ್ಸ್​ಗಳನ್ನೇ ಬ್ರೇಕ್​ ಮಾಡಿ ಸಾಗಾರೋಪಾದಿಯಲ್ಲಿ ದಾಂಗುಡಿ ಇಟ್ಟಿದ್ದಾರೆ.

Huge crowd in a bengaluru  market flouting all norms
ವಸ್ತುಗಳನ್ನು ಕೊಳ್ಳಲು ಹರಿದು ಬಂದ ಜನಸಾಗರ
author img

By

Published : Apr 13, 2021, 11:44 AM IST

ಬೆಂಗಳೂರು : ಸಿಲಿಕಾನ್​ ಸಿಟಿ ಒಂದರಲ್ಲೇ ನಿತ್ಯ 6 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ದಾಖಲಾಗ್ತಿದ್ರೂ ಇದಕ್ಕೆ ತಲೆಕೆಡಿಸಿಕೊಳ್ಳದ ಜನ ಹಬ್ಬದ ಸಂಭ್ರಮದಲ್ಲಿದ್ದು, ಯುಗಾದಿ ಹಬ್ಬಕ್ಕೆ ವಸ್ತುಗಳನ್ನು ಕೊಳ್ಳಲು ಮಾರ್ಕೆಟ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ವಸ್ತುಗಳನ್ನು ಕೊಳ್ಳಲು ಹರಿದು ಬಂದ ಜನಸಾಗರ

ನಗರದ ಕೆ ಆರ್ ಮಾರ್ಕೆಟ್‌ನಲ್ಲಿ ಹಬ್ಬಕ್ಕೆ ಜನ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ. ಹಬ್ಬಕ್ಕೆ ಬೇಕಾಗುವಂತಹ ಬೇವು ಬೆಲ್ಲ, ಮಾವಿನ ಎಲೆಗಳು, ಹೂವು- ಹಣ್ಣುಗಳ ವ್ಯಾಪಾರ ಜೋರಾಗಿಯೇ ನಡೆಯುತ್ತಿದ್ದು, ಜನಜಂಗುಳಿಯ ನಡುವೆ ಜನರು ಸಾಮಾಜಿಕ‌ ಅಂತರದ ಅರ್ಥವನ್ನೇ ಮರೆತಿದ್ದಾರೆ.

ಇದರ ನಡುವೆ ಬಸ್ ಮುಷ್ಕರ ಕೂಡ ಮುಂದುವರೆದಿದ್ದು, ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿದೆ. ಆಟೋಗಳು, ದ್ವಿಚಕ್ರ ವಾಹನಗಳು ಮತ್ತು ಸಣ್ಣ ಗೂಡ್ಸ್ ಗಾಡಿಗಳ ಸಂಚಾರ ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.