ETV Bharat / state

ಅಂಗನವಾಡಿ ಕಾರ್ಯಕರ್ತೆಯರಿಂದ ಬೃಹತ್ ಬೆಂಗಳೂರು ಚಲೋ, ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ - ಸಚಿವೆ ಶಶಿಕಲಾ ಜೊಲ್ಲೆ

ಪಿಂಚಣಿ ಸೌಲಭ್ಯ ನೀಡಬೇಕು, ಗೌರವ ಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ತಕ್ಷಣವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಶಶಿಕಲಾ ಜೊಲ್ಲೆ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.

huge-bangalore-chalo
ಬೃಹತ್ ಬೆಂಗಳೂರು ಚಲೋ
author img

By

Published : Mar 2, 2021, 2:28 PM IST

ಬೆಂಗಳೂರು: ಸರ್ಕಾರದ ವಿರುದ್ದ ಬಂಡೆದ್ದ ಅಂಗನವಾಡಿ ಕಾರ್ಯಕರ್ತೆಯರು ಸಹಸ್ರಾರು ಸಂಖ್ಯೆಯ ಮಹಿಳೆಯರು ಬೆಂಗಳೂರು ಚಲೋ ನಡೆಸಿದ್ದಾರೆ. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ಎಐಟಿಯುಸಿ ವತಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೃಹತ್ ಬೆಂಗಳೂರು ಚಲೋ

ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ವಿವಿಧ ಜಿಲ್ಲೆಗಳ ಸಹಸ್ರಾರು ಕಾರ್ಯಕರ್ತೆಯರು ರ್ಯಾಲಿ ನಡೆಸಿದ ಹಿನ್ನೆಲೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೇಲೆ ವಾಹನ ದಟ್ಟಣೆ ಉಂಟಾಯಿತು. ರ್ಯಾಲಿ ಬಳಿಕ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ, ಎಮ್ ಜಯಮ್ಮ, ಪಿಂಚಣಿ ಸೌಲಭ್ಯ ನೀಡಬೇಕು, ಗೌರವ ಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ತಕ್ಷಣವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಶಶಿಕಲಾ ಜೊಲ್ಲೆ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಬೇಕೆಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು:

1)ಪಿಂಚಣಿ ಸೌಲಭ್ಯ- 2011 ರಲ್ಲಿ ಜಾರಿಗೆ ತಂದ ಎನ್​​ಪಿಎಸ್ ಯೋಜನೆಗೆ 2015 ರಿಂದ ನೇಮಕಾತಿಯಾದವರನ್ನು ಯಾರಿಗೂ ಈ ಯೋಜನೆಗೆ ನೋಂದಾಯಿಸಿಲ್ಲ. 2015 ರ ನಂತರ ನಿವೃತ್ತಿಯಾದ 2250 ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಲ್ಲಿಯವರೆಗೆ ಇಡಿಗಂಟು ಹಣವನ್ನೂ ಬಿಡುಗಡೆ ಮಾಡಿಲ್ಲ. ಹಾಗೂ ಈ ನಿವೃತ್ತ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ತಿಂಗಳ ಕನಿಷ್ಠ ರೂ. 5000 ಪಿಂಚಣಿ ಸೌಲಭ್ಯ ನೀಡಬೇಕು, ಎಲ್​​ಐಸಿ ಆಧಾರಿತ ಪಿಂಚಣಿ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.

2) ಸೇವಾ ಹಿರಿತನ ಆಧಾರದಲ್ಲಿ ಗೌರವಧನ ದೀರ್ಘ ಸೇವೆ ಸಲ್ಲಿಸಿದವರು, ಹಾಗೂ ಹೊಸದಾಗಿ ಸೇವೆಗೆ ಸೇರಿದವರಿಗೆ ಒಂದೇ ಮೊತ್ತದ ಗೌರವಧನ ನೀಡಲಾಗ್ತಿದ್ದು, ಗೋವಾ ಮಾದರಿಯಲ್ಲಿ ಸೇವಾ ಹಿರಿತನದ ಆಧಾರದಲ್ಲಿ ಗೌರವ ಧನ ಜಾರಿ ಮಾಡಬೇಕೆಂದು ಬೇಡಿಕೆ ಸಲ್ಲಿಸಿದರು.

3) ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು, ಇ.ಎಸ್.ಐ ಸೌಲಭ್ಯ ಕೊಡಬೇಕು, ವೈದ್ಯಕೀಯ ರಜೆ ನೀಡಬೇಕೆಂದು ಒತ್ತಾಯಿಸಿದರು.

4) ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲು ಇಚ್ಛಿಸಿರುವ ಎಲ್.ಕೆ.ಜಿ., ಯು.ಕೆ.ಜಿಯನ್ನು ಅಂಗನವಾಡಿ ಕೇಂದ್ರಗಳಲ್ಲೇ ಆರಂಭಿಸಿ, ಐಸಿಡಿಎಸ್ ಯೋಜನೆ ಉಳಿಸಬೇಕು ಎಂದು ಬೇಡಿಕೆ ಸಲ್ಲಿಸಿದರು.

5) ಮಿನಿ ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ ಕೇಂದ್ರಗಳನ್ನಾಗಿ ಮಾಡಿ, ಸಹಾಯಕಿಯರನ್ನು ನೀಡಿ, ಕಾರ್ಯಕರ್ತೆಯರ ಗೌರವಧನದ ಮೊತ್ತ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

6) ಕಾರ್ಯಕರ್ತೆಯರನ್ನು ಬಿ.ಎಲ್.ಒ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಯೋಜನೇತರ ಸರ್ವೇ ಕೆಲಸಗಳಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

7) ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, 30 ಲಕ್ಷ ಪರಿಹಾರ ತುರ್ತಾಗಿ ವಿತರಿಸಬೇಕೆಂದು ಒತ್ತಾಯಿಸಿದರು.

8) ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಸೇರಿದ ಆದೇಶ ಪ್ರತಿಯಲ್ಲಿ ತಾತ್ಕಾಲಿಕ ನೇಮಕಾತಿ ಇರುವುದನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.