ETV Bharat / state

ಹೆಚ್​ಎಸ್​ಆರ್​ಪಿ ಅಳವಡಿಕೆ ಸಮಯ ವಿಸ್ತರಣೆ: ಫೆ. 17ರ ವರೆಗೆ ಅವಕಾಶಕ್ಕೆ ಸಾರಿಗೆ ಇಲಾಖೆ ನಿರ್ಧಾರ - ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್​

HSRP Implementation Time Extension: ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್​ ಅಳವಡಿಸುವಂತೆ ಆದೇಶ ಹೊರಡಿಸಿದ್ದ ರಾಜ್ಯ ಸಾರಿಗೆ ಇಲಾಖೆ ನವೆಂಬರ್​ 17ಕ್ಕೆ ಅಂತಿಮ ಗಡುವು ನೀಡಿತ್ತು.

HSRP Implementation Time Extension
ಹೆಚ್​ಎಸ್​ಆರ್​ಪಿ ಅಳವಡಿಕೆ ಸಮಯ ವಿಸ್ತರಣೆ
author img

By ETV Bharat Karnataka Team

Published : Nov 14, 2023, 1:22 PM IST

ಬೆಂಗಳೂರು: 2019ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅತಿ ಸುರಕ್ಷಿತ ನೋಂದಣಿ ಫಲಕ (ಹೆಚ್.ಎಸ್.ಆರ್.ಪಿ) ಅಳವಡಿಕೆಗೆ ನೀಡಲಾಗಿದ್ದ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದ್ದು, ವಾಹನ ಸವಾರರು ತರಾತುರಿಯಿಲ್ಲದೆ ಹೆಚ್.ಎಸ್.ಆರ್.ಪಿ ಅಳವಡಿಸಿಕೊಳ್ಳಬಹುದಾಗಿದೆ.

ಹೈ ಸೆಕ್ಯುರಿಟಿ ನೋಂದಣಿ ಫಲಕ ಅಳವಡಿಕೆ ಸಮಯದ ಡೆಡ್​ಲೈನ್​ಗೆ ಕಡೆಯ ಮೂರು ದಿನ ಬಾಕಿ ಇದ್ದು, ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್​ ಅಳವಡಿಸಿಕೊಳ್ಳದೆ ಆತಂಕಕ್ಕೆ ಸಿಲುಕಿರುವ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದೆ. ನವೆಂಬರ್ 17 ಕ್ಕೆ ಅಂತಿಮ ಗಡುವು ಇದ್ದರೂ, ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಕೆ ಕಾರ್ಯ ನಡೆಯದಿರುವುದರಿಂದಾಗಿ ವಾಹನ ಮಾಲೀಕರನ್ನು ದೃಷ್ಟಿಯಲ್ಲಿರಿಸಿಕೊಂಡು ಮತ್ತೊಂದು ಅವಕಾಶ ನೀಡಬೇಕು ಎನ್ನುವ ನಿರ್ಧಾರಕ್ಕೆ ಸಾರಿಗೆ ಇಲಾಖೆ ಬಂದಿದೆ. ಹಾಗಾಗಿ ನವೆಂಬರ್ 17ಕ್ಕೆ ಬದಲಾಗಿ 2024ರ ಫೆಬ್ರವರಿ 17ಕ್ಕೆ ಡೆಡ್ ಲೈನ್ ನಿಗದಿಪಡಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ಹೆಚ್​ಎಸ್​ಆರ್​ಪಿ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆದರೆ ಕೆಲವರು ಕೋರ್ಟ್​ಗೆ ಹೋಗಿದ್ದರಿಂದ ವಿಳಂಬವಾಗಿದೆ. ಇನ್ನು ಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿದೆ. ಆದ್ದರಿಂದ ವಾಹನ ಮಾಲೀಕರ ಹಿತದೃಷ್ಟಿಯಿಂದಾಗಿ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲು ನಿರ್ಧರಿಸಿದ್ದೇವೆ. 2024ರ ಫೆಬ್ರವರಿ 17ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಿದ್ದೇವೆ. ಇನ್ನು ಮೂರು ತಿಂಗಳ ಕಾಲ ದಂಡ ಶುಲ್ಕವಿಲ್ಲದೆ ಹೆಚ್​ಎಸ್​ಆರ್​ಪಿ ಅಳವಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಅಳವಡಿಸಿಲ್ಲವೇ..ಕೂಡಲೇ ಅಳವಡಿಸಿ.!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.