ETV Bharat / state

ಯಾವ ವಿಜಯೇಂದ್ರ ಬಂದ್ರೂ ಏನೂ ಆಗಲ್ಲ, ನಮ್ಮ ಅಭ್ಯರ್ಥಿಯೇ ಗೆಲ್ತಾರೆ: ಎಚ್.ಪಿ.ಸುಬ್ಬಾರೆಡ್ಡಿ - Ishwar Khandre

ಬಸವಕಲ್ಯಾಣದ ಜೆಡಿಎಸ್​ ಮುಖಂಡ ಎಚ್.ಪಿ.ಸುಬ್ಬಾರೆಡ್ಡಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

dsd
ಎಚ್.ಪಿ.ಸುಬ್ಬಾರೆಡ್ಡಿ ಕಾಂಗ್ರೆಸ್ ಸೇರ್ಪಡೆ
author img

By

Published : Nov 18, 2020, 2:03 PM IST

ಬೆಂಗಳೂರು: ಯಾವ ವಿಜಯೇಂದ್ರ ಬಂದರೂ ಏನೂ ಆಗಲ್ಲ. ನಾನು ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರ್ತೇನೆ. ಅಲ್ಲಿಯವರೆಗೂ ಇತ್ತ ಮುಖ ಹಾಕಲ್ಲ ಎಂದು ಕಾಂಗ್ರೆಸ್​ ಸೇರ್ಪಡೆಯಾದ ಬಸವಕಲ್ಯಾಣದ ಎಚ್.ಪಿ.ಸುಬ್ಬಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಚ್.ಪಿ.ಸುಬ್ಬಾರೆಡ್ಡಿ ಕಾಂಗ್ರೆಸ್ ಸೇರ್ಪಡೆ

ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಮಾತನಾಡಿದ ಅವರು, ನಾನು ಯಾವುದೇ ಆಕಾಂಕ್ಷೆಯಿಲ್ಲದೇ ಕಾಂಗ್ರೆಸ್​​ ಸೇರ್ಪಡೆಯಾಗಿದ್ದೇನೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದೇನೆ. 128 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇನೆ ಎಂದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಸವಕಲ್ಯಾಣ ಕ್ಷೇತ್ರದಲ್ಲಿಯೇ ಇದ್ದು ಜನರ ಸೇವೆ ಮಾಡಿರುವ ಸುಬ್ಬಾರೆಡ್ಡಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಒಂದು ಬಾರಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ ಅನುಭವವಿದೆ. ಈಗ ಸ್ವಯಂ ಪ್ರೇರಣೆಯಿಂದ ಯಾವುದೇ ಷರತ್ತಿಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ತತ್ವಾದರ್ಶ ಒಪ್ಪಿ ಬಂದಿದ್ದಾರೆ. ಪಕ್ಷದ ರಾಜ್ಯ ನಾಯಕರನ್ನು ಭೇಟಿಯಾಗಿ ಅವರ ಸಮ್ಮತಿ ಪಡೆದು ಸೇರ್ಪಡೆ ಆಗಿದ್ದು, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಬಲ ಲಭಿಸಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.