ETV Bharat / state

ವೈವಿಧ್ಯತೆಗಳಿರುವ ದೇಶದಲ್ಲಿ ಏಕರೂಪತೆ ತರಲು ಹೇಗೆ ಸಾಧ್ಯ : ಕೃಷ್ಣಬೈರೇಗೌಡ ಪ್ರಶ್ನೆ

ನಮ್ಮ ದೇಶ ಹಲವು ವೈವಿದ್ಯತೆಗಳಿಂದ ಕೂಡಿದೆ, ಇದೇ ದೇಶದ ಐಕ್ಯತೆ. ವೈವಿಧ್ಯತೆಯನ್ನು ನಾವು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಹೀಗಾಗಿ ದೇಶದಲ್ಲಿ ಏಕರೂಪತೆ ತರಲು ಹೇಗೆ ಸಾಧ್ಯ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಸದನದಲ್ಲಿ ಪ್ರಶ್ನಿಸಿದ್ದಾರೆ.

former minister Krishna Bairegowda
ಮಾಜಿ ಸಚಿವ ಕೃಷ್ಣಬೈರೇಗೌಡ
author img

By

Published : Mar 11, 2020, 3:29 AM IST

ಬೆಂಗಳೂರು: ಹಲವು ವೈವಿಧ್ಯತೆಗಳಿಂದ ಕೂಡಿರುವುದೇ ನಮ್ಮ ದೇಶದ ಐಕ್ಯತೆ. ಏಕ ರೂಪವೇ ಬೇರೆ, ಐಕ್ಯತೆಯೇ ಬೇರೆ. ವೈವಿಧ್ಯತೆಯನ್ನು ಸಂಭ್ರಮದಿಂದ ಆಚರಿಸುತ್ತೇವೆ. ಹೀಗಾಗಿ ದೇಶದಲ್ಲಿ ಏಕರೂಪತೆ ಹೇಗೆ ತರಲು ಸಾಧ್ಯ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ಸದನದಲ್ಲಿ ಪ್ರಶ್ನಿಸಿದ್ದಾರೆ.

ವಿಧಾನಸಭೆಯಲ್ಲಿ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾಷೆ, ಸಂಸ್ಕೃತಿ, ಆಹಾರ, ಉಡುಗೆ, ತೊಡಿಗೆ, ಆಚಾರ, ವಿಚಾರ, ಸಂಪ್ರದಾಯಗಳ ವೈವಿಧ್ಯತೆಯಿಂದ ಕೂಡಿರುವುದೇ ಭಾರತದ ಶಕ್ತಿ ಎಂದರು. ದೇಶದಲ್ಲಿನ ಹಲವು ಸಮಸ್ಯೆಗಳಿಗೆ ಅನುಷ್ಠಾನ ಮಾಡುವವರೇ ಕಾರಣ ಹೊರತು ಸಂವಿಧಾನವಲ್ಲ.

ವೈವಿಧ್ಯತೆಗಳಿರುವ ದೇಶದಲ್ಲಿ ಏಕರೂಪತೆ ತರಲು ಹೇಗೆ ಸಾಧ್ಯ

ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಗುಂಡು ಸೂಜಿ, ಅಕ್ಕಿ, ಜೋಳವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಈಗ ಕೃಷಿ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಾಕ್ಷರತೆ, ಕೈಗಾರಿಕೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ವಿಶ್ವದಲ್ಲಿ 5 ಅಥವಾ 6 ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ಇದಕ್ಕೆ ನಮ್ಮ ಸಂವಿಧಾನ ದಾರಿ ದೀಪವಾಗಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ 70 ವರ್ಷಗಳ ಕಾಲ ಸಂವಿಧಾನ ಉಳಿದಿರುವುದು ಶೇ.10ರಷ್ಟು ರಾಷ್ಟ್ರಗಳಲ್ಲಿ ಮಾತ್ರ. ಸರಾಸರಿ 18 ವರ್ಷಕ್ಕೆ ಸಂವಿಧಾನ ಬದಲಾಗುತ್ತಿರುವ ನಿದರ್ಶನಗಳಿವೆ. ಪೋಲ್ಯಾಂಡ್ 10 ಬಾರಿ ಸಂವಿಧಾನ ಬದಲಾವಣೆ ಮಾಡಿದೆ.

ಅದೇ ರೀತಿ ಗ್ರೀಸ್ 13, ಪ್ರಾನ್ಸ್ 16, ವೆನಿಜುವೆಲ 26, ಪಾಕಿಸ್ತಾನ 4 , ಶ್ರೀಲಂಕಾ 3, ಥಾಯ್​ಲ್ಯಾಂಡ್ 20 ಬಾರಿ ಸಂವಿಧಾನ ಬದಲಾವಣೆ ಮಾಡಿದೆ ಎಂದು ಸದನಕ್ಕೆ ತಿಳಿಸಿದರು. ಭಾರತ ವೈವಿಧ್ಯತೆಯಿಂದ ಕೂಡಿರುವವರೆಗೂ ಒಂದಾಗಿಯೇ ಉಳಿಯುತ್ತದೆ. ವೈವಿಧ್ಯತೆಯನ್ನು ಹತ್ತಿಕ್ಕಿದ್ದರೆ ಒಂದಾಗಿರುವುದು ಕಷ್ಟ. ನಮ್ಮ ದೇಶ ಹಲವು ಧರ್ಮ, ಸಂಪ್ರದಾಯಗಳ ಜತೆ ಗುರುತಿಸಿಕೊಂಡಿದೆ. ಹೀಗಾಗಿ ಏಕ ರೂಪತೆ ಹೇಗೆ ತರಲು ಸಾಧ್ಯ ಎಂದು ಹೇಳಿದರು.

ಇಸ್ಟೋನಿಯಾ ದೇಶದಲ್ಲಿ 14 ಲಕ್ಷ ಜನಸಂಖ್ಯೆ ಇದೆ. 26 ಪಕ್ಷಗಳಿವೆ. ಏಕ ಪಕ್ಷ ಬಹುಮತ ಗಳಿಸಲು ಸಾಧ್ಯವಿಲ್ಲ. ಅಂತಹ ಸಣ್ಣ ರಾಷ್ಟ್ರದಲ್ಲೂ ಏಕ ರೂಪತೆ ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವದ ನೆಲೆಗಟ್ಟಿನ ಮೇಲೆ ರೂಪಿತವಾಗಿರುವ ನಮ್ಮ ರಾಷ್ಟ್ರದಲ್ಲಿ ಏಕರೂಪತೆ ಸಾಧ್ಯವಾಗಿಸುವುದು ಮೂರ್ಖತನದ ಪರಮಾವಧಿಯಾಗಲಿದೆ ಎಂದರು.

ಇಸ್ರೇಲ್‍ನಲ್ಲೂ ಕೂಡ ಏಕರೂಪತೆ ಸಾಧ್ಯವಿಲ್ಲ. ನಮ್ಮಲ್ಲೂ ಮುನೇಶ್ವರ, ಸರ್ಕಲ್ ಮಾರಮ್ಮ, ಪ್ಲೇಗ್ ಮಾರಮ್ಮ, ಕರುಮಾರಿಯಮ್ಮ ದೇವರುಗಳನ್ನು ಪೂಜಿಸುತ್ತೇವೆ. ಇವರೆಲ್ಲ ಹಿಂದುಗಳಲ್ಲವೆ ? ಎಲ್ಲರನ್ನೂ ಭಾರತೀಯರೆಂದು ಪರಿಗಣಿಸಿ. ಅವರ ತನವನ್ನು ಗೌರವಿಸಿ ಕೂಡಿ ಬಾಳಬೇಕೆ ಹೊರೆತು ಹತ್ತಿಕ್ಕಬಾರದು. ಸಂವಿಧಾನದ ಮೂಲ ಆಶಯಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಸಂವಿಧಾನಕ್ಕೆ ಸಲ್ಲಿಸುವ ಗೌರವ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.