ETV Bharat / state

ಲಕ್ಷಾಂತರ ರೂಪಾಯಿಯೊಂದಿಗೆ ಅಮೆರಿಕನ್ ಡಾಲರ್ ಕದ್ದೊಯ್ದಿದ್ದ ಖದೀಮರರು ಅಂದರ್

ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣ ಆರೋಪಿಗಳನ್ನು ಬಂಧಿಸಲಾಗಿದೆ.

theft Accused arrest
ಖದೀಮರು ಅಂದರ್​
author img

By

Published : Aug 8, 2021, 11:53 AM IST

ಬೆಂಗಳೂರು : ಮನೆಗೆ ನುಗ್ಗಿ ಹಣ ದೋಚಿ ಪರಾರಿಯಾಗಿದ್ದ ಖದೀಮರನ್ನು ಬಂಧಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಟೆರೆಸ್ ಬಾಗಿಲ ಮೂಲಕ ಒಳನುಗ್ಗಿದ ಖದೀಮರು, ಅಮೆರಿಕನ್ ಡಾಲರ್ ಸೇರಿದಂತೆ ಹಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮನೆಯವರು ದೂರು ದಾಖಲಿಸಿದ್ದರು.

House theft Accused arrested in Bengaluru
ಬಂಧಿತರಿಂದ ವಶಪಡಿಸಿಕೊಂಡ ನಗದು

ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ದೀಪಕ್ ಠಾಕೂರ್, ಸುರೇಶ್ ಬಹದ್ದೂರ್, ಕಮಲ್ ಬಹದ್ದೂರ್, ರಮೇಶ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಓದಿ : ಚರಂಡಿಗಳ ಚಂಬರ್‌ಗೆ ಅಳವಡಿಸಿದ್ದ ಕಬ್ಬಿಣದ ಗ್ರೇಟಿಂಗ್ ಕಳ್ಳತನ: 6 ಮಂದಿ ಬಂಧನ

ಬಂಧಿತರಿಂದ 18.40 ಲಕ್ಷ ರೂ. ನಗದು ಹಾಗು 3 ಸಾವಿರ ಅಮೆರಿಕನ್ ಡಾಲರ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 380ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಮಾಗಡಿ ರಸ್ತೆ ಇನ್​ಸ್ಪೆಕ್ಟರ್ ಜಿ.ಟಿ ಶ್ರೀನಿವಾಸ್ ಮತ್ತು ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.