ETV Bharat / state

ಕದ್ದ ಮಾಲನ್ನು ಮಾರುತ್ತಿದ್ದ ವೇಳೆ ಸಿಕ್ಕಿಬಿದ್ದ ಕುಖ್ಯಾತ ಮನೆಗಳ್ಳರು! - ಮನೆಗಳ್ಳರ ಬಂಧನ

ಕದ್ದ ಬಂಗಾರವನ್ನು ರಾಜಾರೋಷವಾಗಿ ಸಾರ್ವಜನಿಕ‌ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದ ಮನೆಗಳ್ಳರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

House robbers arrest
ಮನೆಗಳ್ಳರ ಬಂಧನ
author img

By

Published : Feb 24, 2021, 2:37 PM IST

ಬೆಂಗಳೂರು‌: ಹೆಬ್ಬಾಳ ಪೊಲೀಸರ ಕಾರ್ಯಾಚರಣೆಯಿಂದಾಗಿ ಕುಖ್ಯಾತ ಮನೆಗಳ್ಳರಿಬ್ಬರನ್ನು ಬಂಧಿಸಲಾಗಿದೆ. ಸುನಿಲ್, ಹೇಮಂತ್ ಬಂಧಿತ ಆರೋಪಿಗಳು.

ಸದ್ಯ ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 199 ಗ್ರಾಂ ಚಿನ್ನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ತಾವು ಕದ್ದ ಬಂಗಾರವನ್ನು ರಾಜಾರೋಷವಾಗಿ ಸಾರ್ವಜನಿಕ‌ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದನ್ನು ಕಂಡು ಪೊಲೀಸರು ಇವರನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಹಗಲೊತ್ತು ರಸ್ತೆಗಳಲ್ಲಿ ತಿರುಗಾಡುತ್ತಿದ್ದು, ಬೀಗ ಹಾಕಿರುವ ಮನೆಗಳನ್ನು ಗಮನಿಸಿ ಅಥವಾ ಮನೆಯ ಮಾಲೀಕರು ಮನೆಯ ಬೀಗವನ್ನು ಯಾವುದಾದರೂ ಸ್ಥಳದಲ್ಲಿ ಇರಿಸುವುದನ್ನು ಗಮನಿಸಿ, ಹಾಡಹಗಲೇ ಅಥವಾ ರಾತ್ರಿ ವೇಳೆ ಕಬ್ಬಿಣದ ರಾಡಿನಿಂದ ಮನೆಯ ಬೀಗವನ್ನು ಒಡೆದು ಕಳ್ಳತನ ಮಾಡುತ್ತಿದ್ದರಂತೆ.

ಇದರ ಜೊತೆಗೆ ಹೆಬ್ಬಾಳ, ಸಂಜಯನಗರ ಠಾಣೆ ಸೇರಿ ಇನ್ನೂ ನಾಲ್ಕು ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಹೀಗಾಗಿ ಪೊಲೀಸರು‌‌ ಅರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ‌ ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.