ಬೆಂಗಳೂರು: ಮನೆ ಬಾಡಿಗೆ ನೀಡಿಲ್ಲವೆಂದು ಆದಿತ್ಯ ಅವರು ಮಾಲೀಕ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದುಈ ಸಂಬಂಧ ಮನೆ ಮಾಲೀಕ ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದಾಶಿವ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಎಮ್ವಿ ಎಕ್ಸ್ಟೆನ್ಷನ್ನಲ್ಲಿರುವ ಪ್ರಸನ್ನ ಎಂಬುವವರು ಮನೆಯಲ್ಲಿ ಕಳೆದ ನಾಲ್ಕು ವರ್ಷದಿಂದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕುಟುಂಬ ವಾಸ ಮಾಡುತ್ತಿದ್ದು, ಆದಿತ್ಯ ಅವರ ಕುಟುಂಬ ಕಳೆದ ಏಳು ತಿಂಗಳಿಂದ ಮನೆ ಬಾಡಿಗೆ ನೀಡದೆ ವಾಸವಾಗಿದ್ದಾರೆ ಎಂದು ಮನೆ ಮಾಲೀಕ ಪ್ರಸನ್ನ ಆರೋಪಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾಕಿ ಇರುವ 2 ಲಕ್ಷ 88 ಸಾವಿರ ಹಣವನ್ನು ಕೊಡುವಂತೆ ಕೇಳಿದ್ದಾರೆ. ಆದರೆ ಆದಿತ್ಯ ಅವರು ಹಣ ಕೊಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದ್ದು. ಮನೆ ಮಾಲೀಕ ಪ್ರಸನ್ನ ಅವರು ಸಿಟಿ ಸಿವಿಲ್ ನ್ಯಾಯಲಯ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮನೆ ಖಾಲಿ ಮಾಡಿಸಿಕೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಕನ್ನಡ ಚಿತ್ರರಂಗ ನಟರ ಬಾಡಿಗೆ ರಂಪಾಟ ನಡೆಯುತ್ತಿರುವುದು ಇದು ಎರಡನೇ ಸಾರಿ. ನಟ ಯಶ್ ಅವರು ಬನಶಂಕರಿಯಲ್ಲಿ ತಾವು ವಾಸವಿದ್ದ ಮನೆಗೆ ಬಾಡಿಗೆ ನೀಡಿಲ್ಲವೆಂದು ಮನೆ ಮಾಲೀಕ ದೂರು ನೀಡಿದ್ದರು. ಸದ್ಯ ಈ ಪ್ರಕರಣ ಕೋರ್ಟ್ನಲ್ಲಿದ್ದು, ನ್ಯಾಯಾಲಯವು ಯಶ್ ಅವರಿಗೆ ನಿಗದಿತ ದಿನಾಂಕದವರೆಗೆ ಮಾತ್ರ ಆ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿತ್ತು.