ಬೆಂಗಳೂರು/ಆನೇಕಲ್: ಬ್ಯಾಂಕ್ನಿಂದ ಪಡೆದ ಸಾಲ ತೀರಿಸಲಾಗದೆ ಕಾನೂನು ಮೊರೆ ಹೋಗಿರುವುದನ್ನು ನೆಪ ಮಾಡಿಕೊಂಡು ತರಾತುರಿಯಲ್ಲಿ ಜಮೀನು ವಶಪಡಿಸಿಕೊಳ್ಳುತ್ತಿದ್ದಾರೆಂದು ರೈತರೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.
ಅತ್ತಿಬೆಲೆ-ಆನೇಕಲ್ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಂಟೂವರೆ ಕೋಟಿಯಷ್ಟು ಬೆಲೆ ಬಾಳುವ ಜಮೀನು ರಮೇಶ್ ಎಂಬ ರೈತನಿಗೆ ಸೇರಿದೆ. ಜಮೀನಿನ ಮೇಲೆ ತಮಿಳುನಾಡಿನ ಹೊಸೂರು ಕೆನರಾ ಬ್ಯಾಂಕ್ನಿಂದ ಎಂಎಸ್ಇ ಅಡಿಯಲ್ಲಿ 15 ಕೋಟಿ ಸಾಲ ಪಡೆದಿದ್ದರು. ಕಳೆದ ವರ್ಷ ಸಾಲ ತೀರಿಸಲಾಗದೆ ರಮೇಶ್ ಕೈಚೆಲ್ಲಿ ಕುಳಿತಿದ್ದರು. ಇದನ್ನೇ ನೆಪ ಮಾಡಿಕೊಂಡ ಬ್ಯಾಂಕ್ ಹಾಗೂ ರೈತ ರಮೇಶ್ ಸ್ನೇಹಿತ ಬೇರೊಬ್ಬರನ್ನು ಪುಸಲಾಯಿಸಿ ತರಾತುರಿಯಲ್ಲಿ ಐದೂವರೆ ಕೋಟಿಗೆ ಹರಾಜಿನಲ್ಲಿ ಜಮೀನಿನ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಿಯಮದಂತೆ ಜಿಲ್ಲಾಧಿಕಾರಿಗಳಿಂದ ಸರ್ವೇ, ಜಮೀನಿನ ಹಕ್ಕು ಮುಂತಾದ ಕ್ಲೀಯರಿಂಗ್ ಸರ್ಟಿಫಿಕೇಟ್ ತೋರಿಸುವಂತೆ ರೈತ ಕೋರಿದ್ದಾರೆ. ಆದರೆ ಬ್ಯಾಂಕ್ ಮತ್ತು ಹರಾಜಿನಲ್ಲಿ ಭೂಮಿ ಪಡೆದವರು ದಾಖಲೆ ತೋರಿಸುತ್ತಿಲ್ಲವೆಂದು ರೈತ ದೂರಿದ್ದಾರೆ.