ETV Bharat / state

ಬೆಂಗಳೂರು:ತುಂಬು ಗರ್ಭಿಣಿಯ‌ನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಅಮಾನವೀಯತೆ

ಬೆಂಗಳೂರಿನಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದ್ದು,ಈ ಮಧ್ಯೆ ತುಂಬು ಗರ್ಭಿಣಿಯ‌ನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಅಮಾನವೀಯತೆ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.

fsd
ತುಂಬು ಗರ್ಭಿಣಿಯ‌ನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಅಮಾನವೀಯತೆ
author img

By

Published : Jul 2, 2020, 4:35 PM IST

ಬೆಂಗಳೂರು: ತುಂಬು ಗರ್ಭಿಣಿಯ‌ನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಅಮಾನವೀಯತೆ ಮೆರೆದಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ತುಂಬು ಗರ್ಭಿಣಿಯ‌ನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಅಮಾನವೀಯತೆ

ಆಸ್ಪತ್ರೆ ಆಸ್ಪತ್ರೆಗಳಿಗೆ ಅಲೆದಾಡಿದ್ರೂ ಕೊರೊನಾ ಭಯದಿಂದ ವೈದ್ಯರು ಡಿಲೆವೆರಿ ಮಾಡಲು ಮುಂದಾಗಿತ್ತಿಲ್ಲ. ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದರೂ ಸಹ ವೈದ್ಯರು ಚಿಕಿತ್ಸೆ ಕೊಡುತ್ತಿಲ್ಲ ಎಂದು ಆರೋಪಿಸಲಾಗಿದೆ.‌ ಮೈಸೂರು ರಸ್ತೆಯಲ್ಲಿರುವ ಭೀಮನಕುಪ್ಪೆಯ ನಿವಾಸಿ ಮಮತಾ ಪ್ರತಿ ತಿಂಗಳು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚೆಕ್ ಅಪ್ ಮಾಡಿಸುತ್ತಿದ್ದರು. ಇಂದು ಹೆರಿಗೆ ದಿನಾಂಕವನ್ನು ವೈದ್ಯರು ನೀಡಿದ್ದರು. ನಿನ್ನೆ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು,‌ ರಾತ್ರಿ ಹನ್ನೆರಡು ಗಂಟೆಗೆ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಇಲ್ಲಿ ನಮಗೆ ಸಮಸ್ಯೆ ಆಗುತ್ತದೆ ನೀವು ವಾಣಿ ವಿಲಾಸಕ್ಕೆ ಕರೆದುಕೊಂಡು ಹೋಗಿ ಎಂದು ವಾಪಸ್ ಕಳಿಸಿದ್ದಾರೆ.

ಅಲ್ಲಿಂದ ನೇರವಾಗಿ ವಾಣಿ ವಿಲಾಸ ಆಸ್ಪತ್ರೆಗೆ ಹೋದಾಗ ಇಲ್ಲಿ ಕೊರೊನಾ ರೋಗಿಗಳು ಇದ್ದಾರೆ. ನಿಮಗೆ ಚಿಕಿತ್ಸೆ ಕೊಡಲು ಆಗೋದಿಲ್ಲ, ನೀವು ಕಿಮ್ಸ್​ಗೆ ಹೋಗಿ ಎಂದು ಸೂಚಿಸಿದ್ದಾರೆ. ಅಲ್ಲಿಗೆ ಹೋದ್ರೆ ಕೊರೊನಾ ರೋಗಿಗಳ ಜೊತೆಯಲ್ಲಿ ಇವರಿಗೂ ಚಿಕಿತ್ಸೆ ಕೊಡ್ತಿವಿ ಸರಿನಾ. ಆಮೇಲೆ ಅವಳಿಗೆ ಕೊರೊನಾ ಬಂದರೆ ನಮಗೆ ಕೇಳುವ ಹಾಗಿಲ್ಲ ಎಂದು ವಾಪಸ್ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿಂದ ಗೋವಿಂದರಾಜ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದಾಗ ಅವರು ಚಿಕಿತ್ಸೆ ಕೊಡಲಿಲ್ಲ. ಸದ್ಯ ವಾರ್ಡ್ 127 ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಹೆರಿಗೆ ಮಾಡಿಸುತ್ತೇವೆ. ಆದರೆ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಮಗುವನ್ನು ಬೇರೆ ಕಡೆ ಚಿಕಿತ್ಸೆ ಕೊಡಿಸುವಂತೆ ಹೇಳಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.