ಬೆಂಗಳೂರು: ನಗರದ ಪ್ರತಿಷ್ಠಿತ ಕೆಂಪೇಗೌಡ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧ ಸ್ಟಾಫ್ ನರ್ಸ್ ಹಾಗೂ ವಾರ್ಡ್ ಬಾಯ್ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಮೊದಲಿಗೆ ಒಂದು ವಾರ ಕ್ವಾರಂಟೈನ್ ಹಾಗೂ ಮತ್ತೊಂದು ವಾರ ಕೆಲಸಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು.
ಆದರೆ ಇದೀಗ ಒಂದು ವಾರದ ಕ್ವಾರಂಟೈನ್ ರದ್ದುಗೊಳಿಸಿ ದಿನನಿತ್ಯ ಕರ್ತವ್ಯಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಸಿಬ್ಬಂದಿ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಕ್ವಾರಂಟೈನ್ ಇಲ್ಲದೆ ಕೆಲಸ ನಿರ್ವಹಿಸುವಂತೆ ಒತ್ತಡ ಹಾಕಿ ಕೆಲಸದ ಸಮಯವನ್ನು ವೈದ್ಯ ಹೆಚ್ಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಡಾಕ್ಟರ್ ಮತ್ತು ನರ್ಸ್ಗಳ ನಡುವೆ ಪಿಪಿಇ ಕಿಟ್ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದ್ದು, ಇದರಿಂದ ಐದು ಜನ ನರ್ಸ್ಗಳಿಗೆ ಕೊರೊನಾ ದೃಢವಾಗಿದೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ಧಾರೆ.