ETV Bharat / state

ರೇಸ್ ಕೋರ್ಸ್ ಬಳಿ ಕುದುರೆ ರೇಸ್ ಅಕ್ರಮ ಬೆಟ್ಟಿಂಗ್: 11 ಜನರ ಬಂಧನ

ಲೈಸನ್ಸ್ ಇಲ್ಲದೆ ರೇಸ್ ಕೋರ್ಸ್ ನ ಗೇಟ್ ನಂಬರ್ ಎರಡರಲ್ಲಿ ಜೂಜಾಟ ಆಡಿಸುತ್ತಿದ್ದ 11 ಜನ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

author img

By

Published : Feb 14, 2021, 10:17 AM IST

horse-race-illegal-betting-11-people-arrest-in-bangalore
ರೇಸ್ ಕೋರ್ಸ್ ಬಳಿ ಕುದುರೆ ರೇಸ್ ಅಕ್ರಮ ಬೆಟ್ಟಿಂಗ್

ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುದುರೆ ರೇಸ್ ಅಕ್ರಮ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಲೈಸನ್ಸ್ ಇಲ್ಲದೆ ರೇಸ್ ಕೋರ್ಸ್ ನ ಗೇಟ್ ನಂಬರ್ ಎರಡರಲ್ಲಿ ಜೂಜಾಟ ಆಡಿಸುತ್ತಿದ್ದ 11 ಜನ ಆರೋಪಿಗಳನ್ನ ಬಂಧನ ಮಾಡಿದ್ದಾರೆ. ಬುಕ್ ಮೇಕರ್ಸ್ ಲೈಸನ್ಸ್ ಪಡೆಯದೆ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಳ್ಳುತ್ತಿದ್ದರು. ಬಂಧಿತರಿಂದ 2,56,500 ರೂ. ವಶಕ್ಕೆ ಪಡೆಯಲಾಗಿದೆ.

ಓದಿ : ಬಿಟ್ ಕಾಯಿನ್‌ ಹೂಡಿಕೆಯ 36 ಲಕ್ಷ ರೂ. ವಂಚನೆ: ಆರೋಪಿ ಸೆರೆ

ಗೌತಮ್ ಚಂದ್, ಮಂಜು, ಹರ್ಷತ್ಸುಕೂರ್, ಶಿವರುದ್ರೇಗೌಡ, ಯೋಗೇಂದ್ರ, ಸಂತೋಷ್, ಅನಿಲ್ ಕುಮಾರ್, ಬಾಲಾಜಿ, ಕೃಷ್ಣ, ಕೀರ್ತಿ ಕುಮಾರ್, ಸುರೇಶ್ ಬಂಧಿತ ಆರೋಪಿಗಳು. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.