ETV Bharat / state

ಮನೆಮನೆಗೆ ತರಕಾರಿ ಸರಬರಾಜು ಮಾಡಲು‌ ಮುಂದಾದ ಹಾಪ್‌ಕಾಮ್ಸ್

author img

By

Published : Apr 5, 2020, 2:26 PM IST

ಕೊರೊನಾ ಭೀತಿಗೆ ದೇಶವೇ ಲಾಕ್ ಡೌನ್​ ಆದ ಹಿನ್ನೆಲೆ ಇನ್ಮುಂದೆ ಜನರ ಬಳಿಗೆ ಹಣ್ಣು, ತರಕಾರಿಗಳು ಬರಲಿವೆ. ಗಂಟೆಗಟ್ಟಲೆ ಅಂಗಡಿಗಳ ಮುಂದೆ ಕ್ಯೂ ನಿಲ್ಲೋ ಅಗತ್ಯವಿಲ್ಲದಂತಾಗಿದೆ.

Hop coms to supply vegetables to the house in bengalore
ಮನೆಮನೆಗೆ ತರಕಾರಿ ಸರಬರಾಜು ಮಾಡಲು‌ ಮುಂದಾದ ಹಾಪ್ ಕಾಮ್ಸ್.

ಬೆಂಗಳೂರು: ಹಾಪ್‌ಕಾಮ್ಸ್ ವತಿಯಿಂದ ಬೆಂಗಳೂರಿನ ಅಪಾರ್ಟ್ಮೆಂಟ್‌ಗಳಿಗೆ ಹಣ್ಣುಗಳನ್ನು ಸರಬರಾಜು ಮಾಡುವ ಕಾರ್ಯಕ್ರಮಕ್ಕೆ ತೋಟಗಾರಿಕೆ, ಪೌರಾಡಳಿತ, ರೇಷ್ಮೆ ಸಚಿವ ನಾರಾಯಣ ಗೌಡ ಚಾಲನೆ ನೀಡಿದ್ದಾರೆ.

ಲಾಲ್‌ಬಾಗ್​​ನ ಹಾಪ್‌ಕಾಮ್ಸ್ ಮುಖ್ಯ ಕಚೇರಿಯಲ್ಲಿ ಕಾರ್ಯಕ್ರ ಉದ್ಘಾಟಸಿದ ಅವರು, ಹಾಪ್‌ಕಾಮ್ಸ್‌ಗಳ ಮೂಲಕ ನೇರವಾಗಿ ಬೆಂಗಳೂರು ಗ್ರಾಹಕರ ಮನೆ ಬಾಗಿಲಿಗೇ ತಾಜಾ ತರಕಾರಿ, ಹಣ್ಣು ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ.ವೈರಸ್​ ಭೀತಿಯಿಂದ ಮನೆಯಿಂದ ಜನರು ಹೊರ ಬರೋಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಪಾರ್ಟ್ಮೆಂಟ್​ಗಳಿಗೆ ಹಣ್ಣು-ತರಕಾರಿ ಸಿಗುವಂತೆ ಮಾಡಲು ಸರ್ಕಾರ ರೆಡಿಯಾಗಿದೆ ಎಂದರು.

ನಾರಾಯಣಗೌಡ

ಹಾಪ್‌ಕಾಮ್ಸ್‌‌ ಮೂಲಕ, ಬೆಂಗಳೂರಿನಲ್ಲಿ‌ರುವ ಸುಮಾರು 720 ಅಪಾರ್ಟ್ಮೆಂಟ್ ಗಳಿಗೆ ತರಕಾರಿ, ಹಣ್ಣು ವಿತರಣೆ ಮಾಡುವ ನಿಟ್ಟಿನಲ್ಲಿ ,ಸುಮಾರು 1.30.ಲಕ್ಷ ಮನೆಗಳಿಗೆ ರೈತ ಉತ್ಪನ್ನಗಳನ್ನು ನೇರವಾಗಿ ಸರಬರಾಜು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಗ್ರಾಹಕರಿಗೂ ಕಡಿಮೆ ದರದಲ್ಲಿ ಹಣ್ಣು ತರಕಾರಿ ಸಿಗಲಿದೆ. ರೈತೋತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಟೊಮೆಟೊ ಕೂಡ ಸಂಸ್ಕರಣಾ ಘಟಕಕ್ಕೆ ಸಾಗಿಸುವ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.