ETV Bharat / state

ಹೋಂ ಕ್ವಾರಂಟೈನ್​​​ನಲ್ಲಿ ಇರಬೇಕಿದ್ದ ವ್ಯಕ್ತಿ ಬೀದಿಯಲ್ಲಿ ಸುತ್ತಾಟ: ಆತಂಕದಲ್ಲಿ ಕುರುಬರಹಳ್ಳಿ ಜನ - ಕೊವಿಡ್​​​-19

ಮಹಾನಗರದ ಕುರುಬರಹಳ್ಳಿಯಲ್ಲಿ ಹೋಂ​ ಕ್ವಾರಂಟೈನ್​ನಲ್ಲಿ ಇರಬೇಕಿದ್ದ ಬೀದಿಯಲ್ಲಿ ಸುತ್ತಾಡುತ್ತಿದ್ದಾನೆ. ಈತನನ್ನು ಕಂಡಿರುವ ಸಾರ್ವಜನಿಕರು ಕೊರೊನಾ ಸೋಂಕಿನ ಭೀತಿ ಎದುರಿಸುತ್ತಿದ್ದಾರೆ. ಸದ್ಯ ಸಾರ್ವಜನಿಕರ ಮಾಹಿತಿ ಮೇರೆಗೆ ಬಿಬಿಎಂಪಿಯವರು ವ್ಯಕ್ತಿಯನ್ನು ಮಲ್ಲೇಶ್ವರಂನ ಕೆ ಸಿ ಜನರಲ್​ ಆಸ್ಪತ್ರೆಗೆ ಕಳಿಸಿದ್ದಾರೆ.

home-quatrain-person-roaming-in-bangalore
ಬೆಂಗಳೂರು ಹೋಮ್​ ಕ್ವಾರಂಟೈನ್​ ವ್ಯಕ್ತಿ
author img

By

Published : Mar 27, 2020, 8:43 PM IST

ಬೆಂಗಳೂರು: ಹೋಂ ಕ್ವಾರಂಟೈನ್​ನಲ್ಲಿ ಇರಬೇಕಾದ ವ್ಯಕ್ತಿ ಹೊರಗಡೆ ಬಂದು ಬೀದಿ ಬೀದಿ ಸುತ್ತಾಡಿರುವುದು ಕುರುಬರಹಳ್ಳಿ ಜನರಲ್ಲಿ ಆತಂಕ ಮೂಡಿಸಿದೆ.

ಕುರುಬರಹಳ್ಳಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕೈಗೆ ಹಾಕಿದ್ದ ಸೀಲ್ ಗಮನಿಸಿದ್ದ ಸಾರ್ವಜನಿಕರು ಕೊರೊನಾ ಶಂಕಿತನನ್ನ ಕಂಡು ದಂಗಾಗಿದ್ದಾರೆ. ನಗರದ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಕುಳಿತಿದ್ದ ಶಂಕಿತ ಜನರಲ್ಲಿ ಆತಂಕ ಮೂಡಿಸಿದ್ದಾನೆ.

ಹೋಂ ಕ್ವಾರಂಟೈನ್​​​ನಲ್ಲಿ ಇರಬೇಕಾದ ವ್ಯಕ್ತಿಯ ಸುತ್ತಾಟ

ನಂತರ ಜನರು ಬಿಬಿಎಂ​ಪಿಗೆ ವಿಷಯ ತಿಳಿಸಿದ್ದು‌, ಬಳಿಕ ಆತನನ್ನ 108 ಆ್ಯಂಬುಲೆನ್ಸ್ ಮೂಲಕ ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇಂದು ಇಡೀ ಕುರುಬರಹಳ್ಳಿ ರಸ್ತೆಗಳಲ್ಲಿ ಔಷಧಿ ಸಿಂಪಡಿಸುವ ಮೂಲಕ ಬಿಬಿಎಂಪಿ ಸಿಬ್ಬಂದಿ ಕುರುಬರಹಳ್ಳಿ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.