ETV Bharat / state

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ: ರಾಜ್ಯ ಸರ್ಕಾರದಿಂದ ಕ್ವಾರಂಟೈನ್​ ಅವಧಿ ಏರಿಕೆ

author img

By

Published : Jun 4, 2020, 9:55 PM IST

ಹೊರ ರಾಜ್ಯಗಳಿಂದ ತವರಿಗೆ ಬರುವವರ ಕ್ವಾರಂಟೈನ್ ಅವಧಿಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಹೊರ ರಾಜ್ಯಗಳಿಂದ ಬರುವವರಿಗೆ 7 ದಿನ ಸಾಂಸ್ಥಿಕ ಕ್ವಾರಟೈನ್ ಬಳಿಕ 14 ದಿನ ಹೋಮ್ ಕ್ವಾರಂಟೈನ್​ ಅವಧಿಯನ್ನು ನಿಗದಿಪಡಿಸಲಾಗಿದೆ ಎಂದು ನೂತನ ಮಾರ್ಗಸೂಚಿಯಲ್ಲಿ ಆದೇಶಿಸಿದೆ.

Bangalore
ಕ್ವಾರಂಟೈನ್ ಅವಧಿಗೆ ಸರ್ಕಾರ ತಿದ್ದುಪಡಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕ್ವಾರಂಟೈನ್ ಅವಧಿಯಲ್ಲಿನ ಸಡಿಲಿಕೆ ಎನ್ನಲಾಗುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಕ್ವಾರಂಟೈನ್​ ಅವಧಿ ಹೆಚ್ಚಳದ ಆದೇಶ ಹೊರಡಿಸಿದೆ.

Bangalore
ಆದೇಶ ಪ್ರತಿ
ಹೊರ ರಾಜ್ಯಗಳಿಂದ ತವರಿಗೆ ಬರುವವರ ಕ್ವಾರಂಟೈನ್ ಅವಧಿಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಹೊರ ರಾಜ್ಯಗಳಿಂದ ಬರುವವರಿಗೆ 7 ದಿನ ಸಾಂಸ್ಥಿಕ ಕ್ವಾರಟೈನ್ ಬಳಿಕ 14 ದಿನ ಹೋಮ್ ಕ್ವಾರಂಟೈನ್​ ಅವಧಿ ನಿಗದಿಪಡಿಸಲಾಗಿದೆ ಎಂದು ನೂತನ ಮಾರ್ಗಸೂಚಿಯಲ್ಲಿ ಆದೇಶಿಸಿದೆ.
ಈ ಹಿಂದಿನ ಆದೇಶದಲ್ಲಿ ಇತರ ರಾಜ್ಯಗಳಿಂದ ಬರುವವರು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಬಳಿಕ 7 ದಿನ ಹೋಮ್​ ಕ್ವಾರಂಟೈನ್ ಇರಬೇಕು ಎಂದು ಸೂಚಿಸಲಾಗಿತ್ತು. ಇದೀಗ 7 ದಿನ ಹೋಮ್​ ಕ್ವಾರಂಟೈನ್ ಅನ್ನು 14 ದಿನಕ್ಕೆ ಹೆಚ್ಚಿಸಲಾಗಿದೆ. 7 ದಿನ ಕ್ವಾರಂಟೈನ್ ಮುಗಿಸಿದ ಬಳಿಕವೂ ಸೋಂಕು ಪತ್ತೆಯಾಗುವ ಸಾಧ್ಯತೆ ಹೆಚ್ಚಾಗಿರುವ ಕಾರಣ, ಸರ್ಕಾರ ತನ್ನ ಮೊದಲಿನ ಆದೇಶ ಪರಿಷ್ಕರಿಸಿ ಹೊಸ ಆದೇಶ ಹೊರಡಿಸಿದೆ. ಉಳಿದಂತೆ ಕ್ವಾರಂಟೈನ್​ಗೆ ಸಂಬಂಧಿಸಿದ ಇತರ ಆದೇಶಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.