ETV Bharat / state

ಬಿಡಿಎ ಬದಲಿ ನಿವೇಶನ ಪಡೆಯಲು ಯಾವುದೇ ಪ್ರಭಾವ ಬಳಸಿಲ್ಲ : ಆರಗ ಜ್ಞಾನೇಂದ್ರ ಸ್ಪಷ್ಟನೆ - ಈಟಿವಿ ಭಾರತ ಕನ್ನಡ

ಜಿ ಕೆಟಗರಿ ಅಡಿಯಲ್ಲಿ ಈ ಹಿಂದೆ ಇತರ ಶಾಸಕರೂ ಹಾಗೂ ಸಚಿವರು ಮಂಜೂರಾತಿ ಪಡೆದ ರೀತಿಯಲ್ಲೇ ನನಗೂ ಬಿಡಿಎ ನಿವೇಶನ ಮಂಜೂರಾಗಿದೆ. ಪ್ರಸ್ತುತ ಬದಲಿ ನಿವೇಶನ ಮಂಜೂರು ಮಾಡಲು ಬಿಡಿಎ ನಿಗದಿಪಡಿಸಿದ ಅಧಿಕ ಶುಲ್ಕವನ್ನೂ ಸಹ ಪಾವತಿಸಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Etv Bharathome-minister-reaction-on-bda-site-issue
Etv Bharatಬಿಡಿಎ ಬದಲಿ ನಿವೇಶನ ಪಡೆಯಲು ಯಾವುದೇ ಪ್ರಭಾವ ಬಳಸಿಲ್ಲ : ಆರಗ ಜ್ಞಾನೇಂದ್ರ ಸ್ಪಷ್ಟನೆ
author img

By

Published : Aug 27, 2022, 9:54 PM IST

ಬೆಂಗಳೂರು: ಬಿಡಿಎಯಿಂದ ನಿವೇಶನ ಮಂಜೂರಾತಿಗಾಗಿ ಯಾವುದೇ ಪ್ರಭಾವ ಅಥವಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕಳೆದ ಹದಿನೇಳು ವರ್ಷಗಳ ಹಿಂದೆ ಬಿಡಿಎ ನಿಂದ ಮಂಜೂರಾದ ನಿವೇಶನವನ್ನು ವಿವಿಧ ಕಾರಣಗಳನ್ನು ನೀಡಿ ಮಂಜೂರಾತಿ ಮಾಡಿದ ಸಂಸ್ಥೆಯೇ (ಬಿಡಿಎ) ವಾಪಸ್​​​ ಪಡೆದಿದೆ. ಮಂಜೂರಾತಿ ಪಡೆದ ನಿವೇಶನಕ್ಕಾಗಿ ಕಳೆದ ಹದಿನೇಳು ವರ್ಷಗಳಲ್ಲಿ ಮೂರು ಬಾರಿ ನೋಂದಣಿ ಸಂಬಂಧ ಶುಲ್ಕ ಪಾವತಿ ಮಾಡಿದ್ದರೂ, ಬಿಡಿಎ ನಿವೇಶನ ಪಡೆದು ಮನೆ ಕಟ್ಟಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಈ ಹಿಂದೆ, ಶಾಸಕರು ಹಾಗೂ ಸಚಿವರುಗಳಿಗೆ ಬಿಡಿಎ ನಿವೇಶನ ಹಂಚಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ಗೆ ಸಲ್ಲಿಸಲಾಗಿತ್ತು. ಅರ್ಜಿಯ ಸಂಬಂಧ ಮಂಜೂರಾತಿ ಪಡೆದ ನಿವೇಶನದ ಕುರಿತು ಪರಿಶೀಲಿಸಲು ರಾಜ್ಯ ಹೈಕೋರ್ಟ್ ನೇಮಿಸಿದ್ದ ನ್ಯಾಯಾಧೀಶ ಫಾರೂಖ್ ಸಮಿತಿ ಸಹ ಸ್ಥಿರೀಕರಿಸಿದ್ದು, ಬಿಡಿಎ ನಿಯಮಾವಳಿಗಳ ಅನುಸಾರವಾಗಿಯೇ ನನಗೆ ನಿವೇಶನ ಮಂಜೂರಾತಿಯಾಗಿದೆ ಎಂದು ಹೇಳಿದ್ದಾರೆ.

ಜಿ ಕೆಟಗರಿ ಅಡಿಯಲ್ಲಿ ಈ ಹಿಂದೆ ಇತರ ಶಾಸಕರೂ ಹಾಗೂ ಸಚಿವರು ಮಂಜೂರಾತಿ ಪಡೆದ ರೀತಿಯಲ್ಲೇ ನನಗೂ ಬಿಡಿಎ ನಿವೇಶನ ಮಂಜೂರಾಗಿದೆ. ಪ್ರಸ್ತುತ ಬದಲಿ ನಿವೇಶನ ಮಂಜೂರು ಮಾಡಲು ಬಿಡಿಎ ನಿಗದಿಪಡಿಸಿದ ಅಧಿಕ ಶುಲ್ಕವನ್ನೂ ಸಹ ಪಾವತಿಸಿದ್ದೇನೆ. ಈ ಹಿಂದೆ ನೂರಾರು ಮಂದಿ ಬಿಡಿಎಯಿಂದ ನಿವೇಶನ ಮಂಜೂರಾತಿ ಪಡೆದು, ನೋಂದಣಿ ಶುಲ್ಕ ಕಟ್ಟಿದ್ದರೂ ನಿವೇಶನವನ್ನು ಪಡೆಯುವುದರಿಂದ ವಂಚಿತರಾಗಿದ್ದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಅವರಿಗೆ, ಬಿಡಿಎ ಪರ್ಯಾಯ ನಿವೇಶನ ನೀಡಿ, ಪರಿಹಾರ ಒದಗಿಸಿದೆ ಎಂದಿದ್ದಾರೆ.

ನಾನು, ಮೂರು ಬಾರಿ ಮಂಜೂರಾದ ನಿವೇಶನಕ್ಕೆ ನೋಂದಣಿ ಮಾಡಿದ್ದರೂ ನಿವೇಶನದ ಹಕ್ಕು ಪಡೆಯಲು ಇದುವರೆಗೂ ಸಾಧ್ಯವಾಗಿಲ್ಲ. ಬಿಡಿಎಯಿಂದ ನ್ಯಾಯ ಪಡೆಯಲು, ನ್ಯಾಯಾಲಯದ ಮೊರೆ ಹೋಗಲು ಸಹ ನಿರ್ಧರಿಸಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಡಿಎ ಆಯುಕ್ತ ಸ್ಥಾನದಿಂದ ರಾಜೇಶ್ ಗೌಡ ಎತ್ತಂಗಡಿ, ಕುಮಾರ್ ನಾಯ್ಕಗೆ ಹೆಚ್ಚುವರಿ ಹೊಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.