ETV Bharat / state

ನಾವು ಕಾನೂನು ಬಿಟ್ಟು ಏನೂ ಮಾಡಿಲ್ಲ, ಬಿಜೆಪಿ ರಾಜಕೀಯವಾಗಿ ಬಳಸುತ್ತಿದೆ: ಪರಮೇಶ್ವರ್ - ಬಾಬಾ ಬುಡನ್ ಗಿರಿ ಕೇಸ್

16 ಪ್ರಕರಣಗಳಿರುವ ವ್ಯಕ್ತಿಯನ್ನು ಬಿಜೆಪಿಯವರು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್​ ಹೇಳಿದ್ದಾರೆ.

Home Minister Dr. G. Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್
author img

By ETV Bharat Karnataka Team

Published : Jan 5, 2024, 1:54 PM IST

Updated : Jan 5, 2024, 5:55 PM IST

ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: "ನಾವು ಕಾನೂನು ಬಿಟ್ಟು ಏನೂ ಮಾಡಿಲ್ಲ. ಅದರ ಪ್ರಕಾರವೇ ಎಲ್ಲವನ್ನೂ ಮಾಡಿದ್ದೇವೆ‌" ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಹಿಂದೂ ಮುಖಂಡನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, "ಇದನ್ನು ರಾಜಕೀಯಕ್ಕೆ‌ ಬಳಕೆ ಮಾಡುವ ಅವಶ್ಯಕತೆ ಇಲ್ಲ ಎಂದು ನಾನು ಹಾಗೂ ಸಿಎಂ ಪದೇ ಪದೆ ಹೇಳುತ್ತಿದ್ದೇವೆ. ಕೋರ್ಟ್ ನೋಟೀಸ್, ಸಮನ್ಸ್ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಾನೂನು ಬಿಟ್ಟು ಮಾಡಿದ್ದರೆ ತಪ್ಪಾಗಿದೆ ಎಂದು ನಾವು ಒಪ್ಪಿಕೊಳ್ಳಬಹುದು. ಕಾನೂನಿನ ಪ್ರಕಾರ ‌ಮಾಡಿದ್ದರೂ ಬಿಜೆಪಿಯವರು ಇದನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ" ಎಂದು ಕಿಡಿಕಾರಿದರು.

"ಇದು ಒಳ್ಳೆಯದಲ್ಲ. ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಬಂಧನ ಕಾನೂನಿನಂತೆ ಆಗಿದೆ. ಬಿಜೆಪಿಯವರು ಎಫ್​ಐಆರ್​ ಹಾಕಿಲ್ಲ ಅಂತಾರೆ. ಅವರು ಏನು ಬೇಕಾದ್ರು ಹೇಳಲಿ. ಹುಬ್ಬಳ್ಳಿಯ ಪೊಲೀಸರನ್ನು ಅಮಾನತು ಮಾಡುವುದಿಲ್ಲ. ಈಗಾಗಲೇ ‌ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಬಾರದಾ? ಕಾನೂನು ಪಾಲನೆ ಮಾಡಿರುವ ಪೊಲೀಸರನ್ನು ಅಮಾನತು ಮಾಡಬೇಕು ಅಂದರೆ ಹೇಗೆ?" ಎಂದು ಪ್ರಶ್ನಿಸಿದರು.

"ಹಿಂದೂಗಳನ್ನು ಸರ್ಕಾರ ಟಾರ್ಗೆಟ್​ ಮಾಡಿದೆ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿ, "ಜನ ನಮ್ಮ ಸರ್ಕಾರವನ್ನು ಆರಿಸಿದ್ದಾರೆ. ನಮ್ಮನ್ನು ಆಯ್ಕೆ ಮಾಡಿರುವ ಜನರಲ್ಲಿ ಹೆಚ್ಚಿನವರು ಹಿಂದೂಗಳೇ ಇದ್ದಾರೆ. ನಾವು ಹೇಗೆ ಹಿಂದೂ ವಿರೋಧಿ ಆಗುತ್ತೇವೆ. ಏನೇ ಹೇಳುವುದಕ್ಕೂ ಇತಿಮಿತಿ ಇರಬೇಕು. ಇಂತಹ ವಿಷಯಗಳಲ್ಲಿ ನಾವು ನ್ಯಾಯವಾಗಿ ಹೋಗುವುದಕ್ಕೆ ಪ್ರಯತ್ನ ಮಾಡುತ್ತೇವೆ" ಎಂದರು.

ಬಾಬಾ ಬುಡನ್ ಗಿರಿ ಕೇಸ್ ರೀ ಓಪನ್ ವಿಚಾರವಾಗಿ ಮಾತನಾಡಿ, "ನಾನು ಕೇಸ್ ರೀ ಓಪನ್ ಮಾಡಿಲ್ಲ. ಪೊಲೀಸ್ ಠಾಣೆಯಲ್ಲಿ ಇರುವ ಪ್ರಕರಣದ ಬಗ್ಗೆ ಅಧಿಕಾರಿಗಳು ಕ್ರಮ ತೆಗೆದುಕೊಂಡರೆ, ರೀ ಓಪನ್ ಮಾಡಿದ್ದೀರಿ ಅಂದರೆ ಹೇಗೆ? ಕೋರ್ಟ್ ಸೂಚನೆ ಕೊಟ್ಟಿದ್ರೆ ನಾವು ಕೇಳಬಾರದಾ? ಬಿಜೆಪಿಯವರು ಕೋರ್ಟ್​ಗೂ ಬೆಲೆ ಕೊಡಲ್ಲ, ಕಾನೂನಿಗೂ ಬೆಲೆ ನೀಡುವುದಿಲ್ಲ. 16 ಕೇಸ್ ಇರುವ ವ್ಯಕ್ತಿಯ ವಿಷಯವನ್ನು ಇಡೀ ದೇಶದಲ್ಲಿ ದೊಡ್ಡದು ಮಾಡೋಕೆ ಹೊರಟಿದ್ದೀರಾ. ಬಿಜೆಪಿಯವರು ಅಪರಾಧಿಗೆ ಸಪೋರ್ಟ್ ‌ಮಾಡ್ತಿದ್ದೀರ? ಬೇರೆ ಬೇರೆ ಪ್ರಕರಣದ ಕೇಸ್ ಆತನ ಮೇಲಿದೆ. ಆ ಲಿಸ್ಟ್​ನಲ್ಲಿ ಬೇರೆ ಹಿಂದೂಗಳು ಇದ್ದಾರೆ ಅಲ್ಲವಾ?" ಎಂದರು.

ಪೊಲೀಸ್ ಕಾನ್​ಸ್ಟೆಬಲ್​ಗಳ ಮನವಿ: ಪತಿ-ಪತ್ನಿ ಪ್ರಕರಣಗಳ ಸಮಸ್ಯೆ ಪರಿಹಾರ ನೀಡಿ ಎಂದು ಗೃಹ ಸಚಿವರಿಗೆ ಪೊಲೀಸ್ ಕಾನ್​ಸ್ಟೆಬಲ್​ಗಳು ಮನವಿ ಪತ್ರ ಸಲ್ಲಿಸಿದರು. ಮದುವೆ ಆಗಿದ್ದರೂ ನಾನು, ನನ್ನ ಹೆಂಡತಿ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದೇವೆ. ತಂದೆ- ತಾಯಿಯನ್ನು ಸಾಕಲು ಆಗುತ್ತಿಲ್ಲ. ಇಂತಹ ಸಮಸ್ಯೆಗಳಿಂದ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ದಯವಿಟ್ಟು ನಮ್ಮ ಸಮಸ್ಯೆಗೆ ಪರಿಹಾರ ಕೊಡಿ. ಸಮಸ್ಯೆಗೆ ಪರಿಹಾರ ಕೊಡದೇ ಹೋದರೆ ಆತ್ಮಹತ್ಯೆಯೊಂದೇ ದಾರಿ" ಎಂದು ಸಚಿವರ ಕಾಲಿಗೆ ಬಿದ್ದರು. ಇದಕ್ಕೆ ಗೃಹ ಸಚಿವರು ಡಿಜಿಗೆ ಹೇಳಿ ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆ ನೀಡಿದರು.

ಸಚಿವರ ಡಿನ್ನರ್ ಮೀಟ್: ಗುರುವಾರ ಸಚಿವರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಡಿನ್ನರ್ ಮೀಟಿಂಗ್ ಇತ್ತು. ರಾಜಕೀಯ ಚರ್ಚೆ ಕೂಡ ಅಗಿದೆ. ಅದನ್ನು ನಿಮ್ಮ ಬಳಿ ಬಹಿರಂಗಪಡಿಸಲು ಆಗುತ್ತಾ? ರಾಜಕೀಯದವರು ನಾವು, ರಾಜಕೀಯ ಮಾತಾಡಿಯೇ ಇರುತ್ತೇವೆ. ಚುನಾವಣೆ ಮೊದಲು ಚಿತ್ರದುರ್ಗದಲ್ಲಿ ಎಸ್​​ಸಿ-ಎಸ್​ಟಿ ಸಮಾವೇಶ ಮಾಡಿ ಕೆಲವು ನಿರ್ಣಯ ಮಾಡಿದ್ದೆವು. ಸರ್ಕಾರ ಬಂದಾಗ ಅವುಗಳನ್ನು ಮಾಡುತ್ತೇವೆ ಎಂದು 10 ಘೋಷಣೆ ಮಾಡಿದ್ದೆವು. ಅದನ್ನು ಜಾರಿ ಮಾಡಬೇಕು, ಆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಜಾಮೀನಿಗೆ ಪೊಲೀಸರ ಆಕ್ಷೇಪ : ನಾಳೆಗೆ ಆದೇಶ ಕಾಯ್ದಿರಿಸಿದ ಕೋರ್ಟ್

Last Updated : Jan 5, 2024, 5:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.