ಬೆಂಗಳೂರು: ಸಿಡಿ ಪ್ರಕರಣದ ವಿದ್ಯಮಾನಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಗೃಹ ಸಚಿವರು, ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆವರೆಗೆ ಸಿಡಿ ಘಟನೆ ಸಂಬಂಧ ನಡೆದ ಎಲ್ಲ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದರು. ಯುವತಿ ಪೋಷಕರು ಪೊಲೀಸ್ ಹೇಳಿಕೆ ದಾಖಲಿಸಿದ ನಂತರದ ಬೆಳವಣಿಗೆಗಳು, ಪ್ರತಿಭಟನೆಗಳು ಸೇರಿದಂತೆ ರಾಜಕೀಯ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.
ಇದನ್ನೂ ಓದಿ: ಪೊಲೀಸರಿಗೆ ಯುವತಿಯನ್ನು ಪತ್ತೆ ಹಚ್ಚಲು ಆಗದಿರುವುದು ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ
ಸದ್ಯ ಸಿಎಂ ವಿಶ್ರಾಂತಿಯಲ್ಲಿದ್ದು ಕೇವಲ 10 ನಿಮಿಷಗಳ ಕಾಲ ಮಾತುಕತೆ ನಡೆಸಿ ಗೃಹ ಸಚಿವರು ನಿರ್ಗಮಿಸಿದರು.