ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಸೆಂಟರ್ ಫಾರ್ ಕೌಂಟರ್ ಟೆರರಿಸಂ ಕಮಾಂಡೋ ತರಬೇತಿ ಕೇಂದ್ರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಮುಂಜಾನೆ ಭೇಟಿ ನೀಡಿ, ಅಲ್ಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.
ಕೂಡ್ಲು ಬಳಿಯ ಚೂಡಸಂದ್ರದಲ್ಲಿರುವ ಸೆಂಟರ್ ಫಾರ್ ಕೌಂಟರ್ ಟೆರರಿಸಂಗೆ ಭೇಟಿ ನೀಡಿದ ಬಳಿಕ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನಂತರ ಭಯೋತ್ಪಾದಕ ನಿಗ್ರಹ ದಳದ ಸಿಬ್ಬಂದಿಯ ಕಾರ್ಯ ವೈಖರಿಯ ಅಣಕು ಪ್ರದರ್ಶನ ವೀಕ್ಷಿಸಿದರು.
![meeting with officers](https://etvbharatimages.akamaized.net/etvbharat/prod-images/kn-bng-01-home-minister-isd-visit-kac10035_11032022101820_1103f_1646974100_837.jpg)
ಈ ವೇಳೆ ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಶ್ರೀಅರುಣ್ ಚಕ್ರವರ್ತಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: 3 ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಕುಡುಕ