ETV Bharat / state

ದೇಶದಲ್ಲಿ ಕೇಸರಿ ಭಾತ್ ಕೂಡ ಬ್ಯಾನ್ ಮಾಡಬೇಕಾ..? ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ

author img

By

Published : Oct 19, 2021, 3:29 PM IST

Updated : Oct 19, 2021, 5:01 PM IST

ಕೇಸರಿ ಭಾತ್​​ನಲ್ಲಿ ಕೇಸರಿ ಬಣ್ಣ ಇದೆ. ಅದಕ್ಕೆ ಹಸಿರು ಅಥವಾ ಮತ್ತೊಂದು ಬಣ್ಣ ಹಾಕಬೇಕು ಎಂದು ಹೇಳುತ್ತಾರೆ. ಅದನ್ನೂ ಮಾಡುವುದಕ್ಕೆ ಆಗುತ್ತಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ..

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : ಆಯುಧ ಪೂಜೆ ಸಂದರ್ಭದಲ್ಲಿ ಉಡುಪಿ ಹಾಗೂ ವಿಜಯಪುರ ಪೊಲೀಸರು ಕೇಸರಿ ಶಾಲ್ ಧರಿಸಿದ್ದಕ್ಕೆ ವಿವಾದ ಸೃಷ್ಟಿಯಾದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ದೇಶದಲ್ಲಿ ಕೇಸರಿ ಬಣ್ಣ ಬ್ಯಾನ್ ಆಗಿದ್ಯಾ? ಹಾಗಾದರೆ, ಕೇಸರಿ ಭಾತ್ ತಿನ್ನುವುದು ನಿಲ್ಲಿಸಿಬೇಕಾ ಎಂದು ಹೇಳಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆ ಚಿಟ್​​ ಚಾಟ್​​

ನಗರದಲ್ಲಿ ಮಾತನಾಡಿದ ಅವರು, ಕೇಸರಿ ಭಾತ್​​ನಲ್ಲಿ ಕೇಸರಿ ಬಣ್ಣ ಇದೆ, ಅದಕ್ಕೆ ಹಸಿರು ಅಥವಾ ಮತ್ತೊಂದು ಬಣ್ಣ ಹಾಕಬೇಕು ಎಂದು ಹೇಳುತ್ತಾರೆ. ಅದನ್ನೂ ಮಾಡುವುದಕ್ಕೆ ಆಗುತ್ತಾ?. ಪೊಲೀಸರು ಬಿಳಿ ಟೋಪಿ, ಖೂರ್ತಾ ಧರಿಸಿ ಹಬ್ಬ ಆಚರಣೆ ಮಾಡಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಅವರು ಪೂಜೆ ಸಲ್ಲಿಸುತ್ತಾರೆ. ಅವರ ಖಾಸಗಿ ಜೀವನಕ್ಕೂ ನಾವು ಮಾನ್ಯತೆ ನೀಡಬೇಕು. ಕೇವಲ ಚುನಾವಣೆ ಸಂದರ್ಭದಲ್ಲಿ ಇಂತಹ ವಿಷಯದಿಂದ ಕೋಮುವಾದ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳಿಗೆ ಸಚಿವರು ಟಾಂಗ್ ನೀಡಿದ್ರು.

ಕೋಮು ಪ್ರಚೋದನೆ ನೀಡಿ ಮತ ಪಡೆಯೋ ಪ್ರಯತ್ನ ಇದು. ಆದರೆ, ಇದು ಸಫಲವಾಗಲ್ಲ. ಡ್ಯೂಟಿ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ನಮಾಜ್ ಮಾಡುತ್ತಾರೆ, ಅದನ್ನ ಗೌರವಿಸುತ್ತೇವೆ. ಕೋಲ್ಕತ್ತಾದಲ್ಲಿ ಅಲ್ಲಿನ ವಿಧಾನಸೌಧದ ಪಕ್ಕವೇ ನಮಾಜ್ ಮಾಡಲು ಹಾಲ್ ನಿರ್ಮಾಣ ಮಾಡಿದ್ದಾರೆ.

ಇದರ ಬಗ್ಗೆ ಯಾರೂ ಮಾತಾಡಿಲ್ಲ. ಈ ರೀತಿಯ ರಾಜಕಾರಣ ಮಾಡಿದವರನ್ನ ಜನ ಎಲ್ಲಿಗೆ ಕಳಿಸಿದ್ದಾರೆ ಎಂದು ಅವರಿಗೂ ಗೊತ್ತಿದೆ. ಈ ಚುನಾವಣೆಯಲ್ಲಿ ಇವರನ್ನೂ ಅಲ್ಲಿಗೆ ಕಳಿಸುತ್ತಾರೆ. ಇದು ಪೊಲೀಸ್ ನಿಯಮಾವಳಿಗಳ ಉಲ್ಲಂಘನೆ ಅಲ್ಲ ಎಂದು ಜ್ಞಾನೇಂದ್ರ ಸ್ಟಷ್ಟಪಡಿಸಿದರು.

ಮತಾಂತರ ಕಾಯ್ದೆ ಬಗ್ಗೆ ಆತಂಕ ಬೇಡ : ಮತಾಂತರ ಕಾಯ್ದೆಯನ್ನ ಸರ್ಕಾರ ರೂಪಿಸುತ್ತಿದೆ. ಮುಂದಿನ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸಲಾಗುವುದು. ಹಾಗೂ ಮತಾಂತರ ಕಾಯ್ದೆ ಬಗ್ಗೆ ಯಾವುದೇ ಆತಂಕ ಪಡುವ ಪರಿಸ್ಥಿತಿ ಇಲ್ಲ. ಯಾವುದೇ ಅಡ್ಡಿ ಆತಂಕವಿಲ್ಲದೆ ಅವರ ಧರ್ಮವನ್ನು ಅವರು ಪಾಲನೆ ಮಾಡಬಹುದು. ಈ ಕಾಯ್ದೆಯಿಂದ ಇತರ ಧರ್ಮಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದರು.

Last Updated : Oct 19, 2021, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.