ETV Bharat / state

ಬಿಟ್ ಕಾಯಿನ್ ಹಗರಣದ ದಾಖಲೆ ತನಿಖಾಧಿಕಾರಿಗಳಿಗೆ ನೀಡಿ: 'ಕೈ' ನಾಯಕರಿಗೆ ಗೃಹ ಸಚಿವರ ಸವಾಲು - ಬಿಟ್ ಕಾಯಿನ್ ವಿವಾದ ಕುರಿತು ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಬಿಟ್ ಕಾಯಿನ್ (Bitcoin) ವಿಚಾರದಲ್ಲಿ ರಾಜಕೀಯ ಮಾಡದೇ ಕಾಂಗ್ರೆಸ್​ ನಾಯಕರು ತಮ್ಮಲ್ಲಿರುವ ದಾಖಲೆಗಳನ್ನು ಒದಗಿಸಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga jnanendra) ಆಗ್ರಹಿಸಿದ್ದಾರೆ.

home minister Araga jnanendra reaction on bitcoin issue
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Nov 11, 2021, 4:26 PM IST

ಬೆಂಗಳೂರು: ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ (Bitcoin) ವಿಷಯದಲ್ಲಿ ರಾಜಕೀಯ ಬೆರೆಸದೆ, ತಮ್ಮಲ್ಲಿರುವ ದಾಖಲೆಗಳನ್ನು ಒದಗಿಸಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga jnanendra) ಸವಾಲೆಸೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ವಿಷಯವನ್ನು ಮುಂದಿಟ್ಟುಕೊಂಡು, ಪ್ರತಿ ಪಕ್ಷ ಕಾಂಗ್ರೆಸ್ ನಾಯಕರು ಅನಗತ್ಯ ಗೊಂದಲ ನಿರ್ಮಿಸುತ್ತಿದೆ.ಹಿಟ್ ಅಂಡ್ ರನ್ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಪ್ರಕರಣ: ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತರಾ ಪ್ರಧಾನಿ ಮೋದಿ..?

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿಯೇ ಆರೋಪಿ ಶ್ರಿಕಿಯನ್ನು ಹೋಟೆಲೊಂದರಲ್ಲಿ ನಡೆದ ದಾಂಧಲೆ ಸಮಯದಲ್ಲಿ ಬಂಧಿಸಲಾಗಿತ್ತು, ಶ್ರೀಕಿಯ ಸಹಚರರು ಯಾರ್ಯಾರಿದ್ದರು ಎಂದು ಕಾಂಗ್ರೆಸ್ ನಾಯಕರಿಗೆ ತಿಳಿದಿತ್ತು. ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ವಿಷಯದಲ್ಲಿ ರಾಜಕೀಯ ಬೆರೆಸದೆ, ತಮ್ಮಲ್ಲಿರುವ ದಾಖಲೆಗಳನ್ನು ಒದಗಿಸಲಿ. ಅದು ಬಿಟ್ಟು ಕಾಂಗ್ರೆಸ್ ನಾಯಕರು, ನಮ್ಮ ಚೀಲದಲ್ಲಿ ಹಾವಿದೆ, ಹೊರ ತೆಗೆಯುತ್ತೇವೆ ಎಂದು ಬೊಟ್ಟಿ ಮಾತನಾಡಬಾರದು, ಅದೇನಿದೆಯೋ ಧೈರ್ಯದಿಂದ ಹೊರಗೆ ಬಿಡಲಿ, ಆಗ ಅದು ಯಾರನ್ನು ಕಚ್ಚುತ್ತದೆ ನೋಡೋಣ ಎಂದು ಸಚಿವರು ಸವಾಲೆಸೆದರು.

ಮುಖ್ಯಮಂತ್ರಿಗಳ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ರಾಜ್ಯದ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಹೋಗಿದ್ದಾರೆ, ಮುಖ್ಯಮಂತ್ರಿಗಳು ದೆಹಲಿಗೆ ಹೋಗುವುದು ಹಾಗೂ ನಾಯಕರನ್ನು ಭೇಟಿ ಮಾಡುವುದು, ಹೊಸದೇನಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ; ಬಿಟ್ ಕಾಯಿನ್ ಹಗರಣದ ಕುರಿತು ನಮೋಗೆ ಮಾಹಿತಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.