ETV Bharat / state

ಜಾರಿಯಲ್ಲಿರುವ ನಿಯಮ ಮುಂದುವರಿಕೆ, ಮಾರುಕಟ್ಟೆ ಸ್ಥಳಾಂತರ: ಆರಗ ಜ್ಞಾನೇಂದ್ರ

ಕೋವಿಡ್ ಬಗ್ಗೆ ಜನ ಪ್ಯಾನಿಕ್ ಆಗಬಾರದು. ನಾಳೆ ಬಂದ್ ಆಗುತ್ತೆ ಅನ್ನೋ ಭಯ ಇರಬಾರದು. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

home-minister-aaraga-jnanendra
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Jan 11, 2022, 6:34 PM IST

ಬೆಂಗಳೂರು: ಲಾಕ್​ಡೌನ್​ ಬಗ್ಗೆ ಇವತ್ತು ಚರ್ಚೆ ಆಗಿಲ್ಲ. ಪರಿಸ್ಥಿತಿ ನಮ್ಮ ಕೈಮೀರಿ ಹೋದಾಗ ಮಾತ್ರ ಕಡೆಯ ಅಸ್ತ್ರವಾಗಿ ಅದರ ಬಗ್ಗೆ ನಿರ್ಧರಿಸಲಾಗುತ್ತದೆ. ಸದ್ಯ ಈಗಾಗಲೇ ಜಾರಿಯಲ್ಲಿರುವ ಕಠಿಣ ನಿಯಮಗಳನ್ನೇ ಮುಂದುವರೆಸಲಿದ್ದು, ಮಾರುಕಟ್ಟೆಗಳ ವಿಕೇಂದ್ರೀಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕೋವಿಡ್ ಕುರಿತು ಸಿಎಂ ನಡೆಸಿದ ವರ್ಚುವಲ್ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಏರಿಕೆ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಹೆಚ್ಚಿಸಲು ಸಭೆಯಲ್ಲಿ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ನಿತ್ಯ ಕನಿಷ್ಟ 1.5 ಲಕ್ಷ ಟೆಸ್ಟ್ ನಡೆಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೋಂ ಐಸೋಲೇಷನ್‌ನಲ್ಲಿ ಇರುವವರ ಮೇಲೆ ನಿಗಾ ಇಡಬೇಕು. ರಿಕವರಿ ಆಗೋವರೆಗೂ ನಿಗಾ ಇರಿಸಬೇಕು. ಬೂಸ್ಟರ್ ಡೋಸ್ ತೀವ್ರಗೊಳಿಸಬೇಕಿದೆ.

ಶಾಲೆ, ಹಾಸ್ಟೆಲ್​ಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಇವುಗಳನ್ನು ಬಂದ್ ಮಾಡಲು ಅಥವಾ ನಡೆಸಲು ಆಯಾ ಜಿಲ್ಲೆಗಳ ಡಿಸಿಗಳಿಗೆ ಅಧಿಕಾರ ನೀಡಿದ್ದು, ಸದ್ಯದ ಪರಿಣಾಮ ನೋಡಿ ಇವುಗಳನ್ನು ನಡೆಸಲು ಅಥವಾ ಬಂದ್ ಮಾಡಲು ಡಿಸಿಗಳು ನಿರ್ಧಾರ ಕೈಗೊಳ್ಳಲು ಸಿಎಂ ಅನುಮತಿ ಕೊಟ್ಟಿದ್ದಾರೆ ಎಂದರು.

ಮಕ್ಕಳ ಚಿಕಿತ್ಸೆಗೆ ಔಷಧ ಕೊರತೆ ಆಗದಂತೆ ಸೂಚನೆ ನೀಡಿದ್ದು, ತತ್‍ಕ್ಷಣ ‌ಔಷಧ ಖರೀದಿ, ಸಂಗ್ರಹಕ್ಕೆ ಸೂಚಿಸಲಾಗಿದೆ. ಮಕ್ಕಳಿಗೆ ಬೆಡ್​ಗಳನ್ನು ಮೀಸಲಿರಿಸುವಂತೆ ತಿಳಿಸಿದ್ದಾರೆ. ಜನಜಂಗುಳಿ, ಪ್ರತಿಭಟನೆಗಳ ನಿರ್ಬಂಧ, ಸಂಕ್ರಾಂತಿ ಇತರೆ ಹಬ್ಬಗಳಲ್ಲಿ ನಿಯಮ ಪಾಲನೆ ಕಡ್ಡಾಯಗೊಳಿಸಿದ್ದು, ಮಾರುಕಟ್ಟೆಗಳ ವಿಕೇಂದ್ರೀಕರಣ ವ್ಯವಸ್ಥೆ ಹಿಂದಿನ ಅಲೆಯಲ್ಲಿ ಮಾಡಿದ್ದರು. ಈಗಲೂ ಮಾರುಕಟ್ಟೆಗಳ ಸ್ಥಳಾಂತರ, ವಿಕೇಂದ್ರೀಕರಣಕ್ಕೆ ಸಿಎಂ ಸೂಚನೆ ನೀಡಿದ್ದು, ಮಾರುಕಟ್ಟೆಗಳ ವಿಕೇಂದ್ರೀಕರಣ ನಾಳೆಯಿಂದ ಆರಂಭಗೊಳ್ಳಲಿದೆ ಎಂದು ಹೇಳಿದರು.

ಮಾಸ್ಕ್ ಬಗ್ಗೆ ಸ್ಥಳೀಯ ಜನರಲ್ಲಿ ಜಾಗೃತಿಗೆ ಸೂಚಿಸಲಾಗಿದೆ. ವೀಕೆಂಡ್ ಕರ್ಫ್ಯೂ ಕುರಿತು ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಜನವರಿ 14ರ ಪ್ರಧಾನಿಯವರ ಸಭೆ ಬಳಿಕ ಇದರ ಚರ್ಚೆ ನಡೆಸಲಾಗುತ್ತದೆ‌. ಜನ ಪ್ಯಾನಿಕ್ ಆಗಬಾರದು. ನಾಳೆ ಬಂದ್ ಆಗುತ್ತೆ ಅನ್ನೋ ಭಯ ಇರಬಾರದು. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಿಎಂ ಸೂಚನೆ ನೀಡಿದ್ದಾರೆ.

ಶಾಲೆ, ಕಾಲೇಜುಗಳ ವಿಚಾರದಲ್ಲಿ ಬೆಂಗಳೂರಿನಲ್ಲಿ ಯಥಾಸ್ಥಿತಿ ಮುಂದುವರಿಕೆ ಮಾಡಲಾಗುತ್ತದೆ. ಹಾಲಿ ಮಾರ್ಗಸೂಚಿ ಯಥಾಸ್ಥಿತಿ ಮುಂದುವರಿಕೆ ಮಾಡಲಿದ್ದು, ಇವತ್ತಿನ‌ ನಿರ್ಧಾರಗಳು ಹೆಚ್ಚುವರಿ ಕ್ರಮಗಳಾಗಿವೆ ಅಷ್ಟೆ. ಲಾಕ್​ಡೌನ್​ ಬಗ್ಗೆ ಇವತ್ತು ಚರ್ಚೆ ಆಗಿಲ್ಲ. ಪರಿಸ್ಥಿತಿ ನಮ್ಮ ಕೈಮೀರಿ ಹೋದಾಗ ಅದರ ಬಗ್ಗೆ ನಂತರ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ನಿವೃತ್ತ ಯೋಧರಿಗೆ ಜನರಿಂದ ಅದ್ಧೂರಿ ಸ್ವಾಗತ.. ದೇಶ ಸೇವೆಗೆ ಸಂದ ಗೌರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.