ETV Bharat / state

'ಕಾನೂನು ಬಾಹಿರ ಕ್ಲಬ್, ಪಬ್‌ಗಳು, ಇಸ್ಪೀಟ್ ಅಡ್ಡೆಗಳ ಮೇಲೆ ಕ್ರಮ ಕೈಗೊಳ್ಳಿ'

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಅಪರಾಧ ಪ್ರಕರಣಗಳ‌ ಪ್ರಗತಿ ಪರಿಶೀಲನೆ ಪರಾಮರ್ಶೆ ಸಭೆ ನಡೆಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Dec 16, 2022, 5:40 PM IST

Updated : Dec 16, 2022, 6:17 PM IST

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಅಪರಾಧ ಪ್ರಕರಣಗಳ‌ ಪ್ರಗತಿ ಪರಿಶೀಲನೆ ಪರಾಮರ್ಶೆ ಸಭೆ ನಡೆಯಿತು.

ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮ ಹಾಗೂ ಗಡುವು ಮೀರಿ ಕಾರ್ಯನಿರ್ವಹಿಸುವ ಕ್ಲಬ್, ಪಬ್ ಹಾಗೂ ಇಸ್ಪೀಟ್ ಅಡ್ಡೆಗಳನ್ನು‌ ಮುಲಾಜಿಲ್ಲದೆ ಮುಚ್ಚುವಂತೆ ಪೊಲೀಸರಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ‌ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ವಿಶೇಷ ಪೊಲೀಸ್ ಆಯುಕ್ತ ಎಂ.ಎ ಸಲೀಂ‌ ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಗರದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಬ್, ಪಬ್ ಹಾಗೂ ಇಸ್ಪೀಟ್​ ಅಡ್ಡೆಗಳಿದ್ದರೆ ಅಂತಹವುಗಳನ್ನು‌ ನಿರ್ದಾಕ್ಷಿಣ್ಯವಾಗಿ ಮುಚ್ಚಿಸುವಂತೆ ಸೂಚಿಸಿದ್ದೇನೆ.‌ ಇತ್ತೀಚಿನ ದಿನಗಳಲ್ಲಿ ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕ್ಯೂ ಆರ್ ಕೋಡ್ ಮೂಲಕ ಲಂಚ ಸ್ವೀಕಾರ ಸೇರಿದಂತೆ ಆರೋಪಿಗಳೊಡನೆ ಪೊಲೀಸರು ಕೈ ಜೋಡಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಯಾರನ್ನು ತಿಪ್ಪೆಸಾರಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಪಿಎಸ್‌ಐ ಅಕ್ರಮ ವಿಚಾರ: ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಪೊಲೀಸರು ಸೇರಿ 107 ಮಂದಿ ಆರೋಪಿಗಳನ್ನು‌ ಬಂಧಿಸಲಾಗಿದೆ. ಅಮ್ರಿತ್ ಪಾಲ್ ಮಗಳು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಐಪಿಎಸ್ ಅಧಿಕಾರಿ ಅಮ್ರಿತ್ ಪಾಲ್ ನಮಗೇನು ದಾಯಾದಿಯಲ್ಲ.‌ ಅವರ ವಿರುದ್ಧ ಸಾಕ್ಷ್ಯಾಧಾರ‌ ಕಂಡುಬಂದಿದ್ದರಿಂದ ಬಂಧಿಸಲಾಗಿದೆ‌. ಈ ಪ್ರಕರಣದಲ್ಲಿ ಯಾರೇ ಪ್ರಭಾವಿಗಳು ಭಾಗಿಯಾಗಿರುವ ಬಗ್ಗೆ ಸಾಕ್ಷ್ಯ ಲಭಿಸಿದರೆ ಅವರನ್ನು ಬಂಧಿಸಲಾಗುವುದು. ಅಲ್ಲದೆ‌ ಅಮ್ರಿತ್ ಪಾಲ್ ನಿರಾಪರಾಧಿ ಎಂದು ನಿರೂಪಿಸುವ ದಾಖಲಾತಿಗಳಿದ್ದರೆ ತನಿಖಾಧಿಕಾರಿಗಳ‌ ಮುಂದೆ ಹಾಜರುಪಡಿಸಲಿ ಎಂದರು.

ಚಿಲುಮೆ ಕೇಸ್​ನಲ್ಲಿ ಈಗಾಗಲೇ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಮ್ಮ‌‌ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರನ್ನು ಹಳದಿ ಕಣ್ಣಿನಲ್ಲಿ‌ ನೋಡುವುದಿಲ್ಲ. ಈ ವರ್ಷ 22 ರೌಡಿಗಳನ್ನು ಹಾಗೂ 8 ಮಂದಿ ಮಾದಕ ವಸ್ತುಗಳ ವ್ಯಾಪಾರಿಗಳನ್ನು ಬಂಧಿಸಲಾಗಿದೆ. 2022ರಲ್ಲಿ 77 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ‌‌ ಮಾಡಲಾಗಿದೆ. 69 ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ. ಪೊಲೀಸ್ ವ್ಯವಸ್ಥೆ ಬಲವರ್ಧನೆಗಾಗಿ 4 ಸಂಚಾರ ಠಾಣೆ, ಎರಡು ಹೊಸ ಕಾನೂನು ಸುವ್ಯವಸ್ಥೆ ಉಪವಿಭಾಗಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಎಫ್​ಎಸ್ಎಲ್ ಬಲವರ್ಧನೆ: ಸೇಫ್ ಸಿಟಿ ಯೋಜನೆಯಡಿ 657 ಕೋಟಿ 4 ಸಾವಿರ ಕ್ಯಾಮರಾ ಅಳವಡಿಕೆ ಕಾರ್ಯವನ್ನು ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗುವುದು. ಮೊಬೈಲ್ ಫಾರೆನ್ಸಿಕ್ ವ್ಯಾನ್ ಮತ್ತು ಎಫ್​ಎಸ್ಎಲ್ ಬಲವರ್ಧನೆಗೊಳಿಸಲಾಗುತ್ತಿದೆ‌. ಡಿಜಿಟಲ್ ನಿಸ್ತಂತು 23 ಕೋಟಿ ವೆಚ್ಚದಲ್ಲಿ‌ ಜನವರಿ 2023ರೊಳಗೆ ಕಾರ್ಯಗತಗೊಳಿಸಲಾಗುವುದು ಎಂದರು.

ಐಟಿಎಂಎಸ್​ನಡಿ 20 ಕೋಟಿ ರೂ ವೆಚ್ಚದಲ್ಲಿ 50 ಜಂಕ್ಷನ್​ಗಳಲ್ಲಿ 250 ಕ್ಯಾಮರಾ ಮತ್ತು 80 ಆರ್​ಎಲ್​ವಿಡಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಿಗ್ನಲ್ ಸಿಂಕ್ರನೈಜೇಷನ್​ನಡಿ 58 ಕೋಟಿ ವೆಚ್ಚದಲ್ಲಿ 200 ಜಂಕ್ಷನ್​ಗಳಲ್ಲಿ 7 ಹೈಡೆನ್ಸಿಟಿ ಕಾರಿಡಾರ್​ಗಳಲ್ಲಿ ಕಾರ್ಯಗತಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿಗೆ ಪೊಲೀಸರಿಂದಲೇ ಕ್ರಮ.. ಗೃಹ ಸಚಿವ ಆರಗ ಜ್ಞಾನೇಂದ್ರ

Last Updated : Dec 16, 2022, 6:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.