ETV Bharat / state

ಕೊರೊನಾ ಟೆಸ್ಟ್ ವೇಳೆ ಪಾಲನೆ ಆಗ್ತಿಲ್ಲ ದೈಹಿಕ ಅಂತರ... ಹೋಂಗಾರ್ಡ್ ವಿಡಿಯೋ ವೈರಲ್ - ಬೆಂಗಳೂರಿನಲ್ಲಿ ಸಾಮಾಜಿಕ ಅಂತರವಿಲ್ಲ,

ಕೊರೊನಾ ಟೆಸ್ಟ್ ವೇಳೆ ದೈಹಿಕ ಅಂತರ ಪಾಲನೆ ಆಗ್ತಿಲ್ಲವೆಂದು ಹೋಂಗಾರ್ಡ್ ಆರೋಪಿಸಿರುವ ವಿಡಿಯೋ ಈಗ ವೈರಲ್​ ಆಗ್ತಿದೆ.

No social distance in corona test time, No social distance in corona test time in Bangalore, No social distance, No social distance news, ಕೊರೊನಾ ಟೆಸ್ಟ್​ ವೇಳೆ ಸಾಮಾಜಿಕ ಅಂತರವಿಲ್ಲ, ಬೆಂಗಳೂರಿನಲ್ಲಿ ಕೊರೊನಾ ಟೆಸ್ಟ್​ ವೇಳೆ ಸಾಮಾಜಿಕ ಅಂತರವಿಲ್ಲ, ಕೊರೊನಾ ಟೆಸ್ಟ್​ ವೇಳೆ ಸಾಮಾಜಿಕ ಅಂತರವಿಲ್ಲ ಸುದ್ದಿ, ಸಾಮಾಜಿಕ ಅಂತರವಿಲ್ಲ, ಬೆಂಗಳೂರಿನಲ್ಲಿ ಸಾಮಾಜಿಕ ಅಂತರವಿಲ್ಲ, ಬೆಂಗಳೂರಿನಲ್ಲಿ ಸಾಮಾಜಿಕ ಅಂತರವಿಲ್ಲ ಸುದ್ದಿ,
ಕೊರೊನಾ ಟೆಸ್ಟ್ ವೇಳೆ ಪಾಲನೆ ಆಗ್ತಿಲ್ಲ ದೈಹಿಕ ಅಂತರ ಎಂದ ಹೋಂಗಾರ್ಡ್
author img

By

Published : Jul 8, 2020, 7:34 PM IST

ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಣೆ ಮಾಡುವ ಪೊಲೀಸರಲ್ಲಿ ದಿನೇ ದಿನೆ ಕೊರೊನಾ ಸೊಂಕು ದೃಢವಾಗ್ತಿರುವ ಕಾರಣ ಸದ್ಯ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಕೊರೊನಾ ಸೋಂಕಿನ ಟೆಸ್ಟ್​ ಮಾಡಿಸ್ತಿದ್ದಾರೆ. ಆದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ದೈಹಿಕ ಅಂತರವಿಲ್ಲದೆ, ಎಲ್ಲರನ್ನ ಗುಂಪುಗೂಡಿಸಿ ಚಿಕಿತ್ಸೆಗೆ ಒಳಪಡಿಸ್ತಿದ್ದಾರೆ ಎಂದು ಹೋಂ ಗಾರ್ಡ್​ವೊಬ್ಬರು ಕೊರೊನಾ ಟೆಸ್ಟ್ ವೇಳೆ ಅನುಭವಿಸಿದ ಯಾತನೆಯನ್ನ ವಿಡಿಯೋ ಮೂಲಕ ಹೇಳಿದ್ದಾರೆ.

ಕೊರೊನಾ ಟೆಸ್ಟ್ ವೇಳೆ ಪಾಲನೆ ಆಗ್ತಿಲ್ಲವಂತೆ ದೈಹಿಕ ಅಂತರ

ಮಲ್ಲೇಶ್ವರಂ ಬಳಿ ಇರುವ ಕೆ.ಸಿ ಜನರಲ್ ಆಸ್ಪತ್ರೆಗೆ ಹೋಂ ಗಾರ್ಡ್ ಚಿಕಿತ್ಸೆಗೆ ಎರಡು ದಿನದಿಂದ ತೆರಳ್ತಿದ್ದಾರೆ. ಓಪಿಡಿ ಹಾಗೂ ಡಾಕ್ಟರ್ ಬಳಿ ಕೋವಿಡ್ ಟೆಸ್ಟ್ ಮಾಡಿಸುವ ವೇಳೆ ಯಾವುದೇ ದೈಹಿಕ ಅಂತರ ಇಲ್ಲ. ಮಾರ್ಕೆಟ್ ಬಳಿ‌ ತರಕಾರಿ ತೆಗೆದುಕೊಳ್ಳುವ ಹಾಗೆ ಮುಗಿಬೀಳ್ತಿದ್ದಾರೆ. ಹಾಗೆ ಟೆಸ್ಟ್ ಮಾಡಲು ಮೂರು ಜನ ಸಿಬ್ಬಂದಿ ಇದ್ದಾರೆ ಎಂದು ಹೋಂ ಗಾರ್ಡ್ ಆರೋಪಿಸಿದ್ದಾರೆ​.

ಈ ಟೆಸ್ಟ್​ನ್ನು ಲ್ಯಾಪ್​ಟಾಪ್, ಕಂಪ್ಯೂಟರ್ ಇಲ್ಲದೆ, ಬರೀ ಮೊಬೈಲ್ ಮೂಲಕ ಮಾಡ್ತಿದ್ದಾರೆ. ಇದಕ್ಕೆ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಬೇಕು. ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ನಿಂತಿದ್ದೇವೆ. ಆದ್ರೂ ಸರಿಯಾದ ವ್ಯವಸ್ಥೆ ಇಲ್ಲ. ಒಬ್ಬರಿಗೆ ಕೊರೊನಾ ಬಂದ್ರೆ ಎಲ್ಲರಿಗೂ ಹರಡುತ್ತೆ. ಮೂರು ಇಂಚು ಡಿಸ್ಟೆನ್ಸ್ ಸಹ ಇಲ್ಲವೆಂದು ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೋಂಡಿದ್ದಾರೆ.

ಪೊಲೀಸರು ಮತ್ತು ಹೋಂಗಾರ್ಡ್ ಎಲ್ಲರೂ ಕರ್ತವ್ಯ ನಿರ್ವಹಣೆ ಮಾಡ್ತಿದ್ದೇವೆ. ಹೋಂಗಾರ್ಡ್‌ ಅವರಿಗೆ ಸರ್ಕಾರ ಕಡೆಯಿಂದ ಆರೊಗ್ಯ ಭಾಗ್ಯ ಕಾರ್ಡ್ ಇಲ್ಲ. ಸರ್ಕಾರ ಹೋಂಗಾರ್ಡ್​ಗಳ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು‌ ವಿಡಿಯೋದಲ್ಲಿ ಮನವಿ‌ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.