ಬೆಂಗಳೂರು: ಜಿಂದಾಲ್ ಕಂಪೆನಿಗೆ ಭೂಮಿ ನೀಡುವ ವಿಚಾರವಾಗಿ, ಸಚಿವ ಸಂಪುಟದ ಉಪಸಮಿತಿ ರಚನೆಗೆ ನಿರ್ಣಯ ಮಾಡಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ ಪಾಟೀಲ್ ಟ್ವೀಟ್ ಮಾಡಿದ್ದಾರೆ.
![HK Patil](https://etvbharatimages.akamaized.net/etvbharat/prod-images/kn-bng-02-15-hkpatil-tweet-script-sowmya-7202707_15062019080956_1506f_1560566396_1009.jpg)
![HK Patil](https://etvbharatimages.akamaized.net/etvbharat/prod-images/kn-bng-02-15-hkpatil-tweet-script-sowmya-7202707_15062019080956_1506f_1560566396_96.jpg)
ಸಚಿವ ಸಂಪುಟದ ಉಪ ಸಮಿತಿ ಸಾರ್ವಜನಿಕ ಆಕ್ಷೇಪಗಳನ್ನು, ಜಿಂದಾಲ್ ಕಂಪನಿ ವಿರುದ್ಧದ ಎಲ್ಲಾ ಆರೋಪಗಳನ್ನು ಸಮರ್ಪಕವಾಗಿ ಪರಿಶೀಲಿಸುತ್ತದೆ ಎಂದು ಆಶಿಸುವೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಜಿಂದಾಲ್ ಗೆ ಭೂಮಿ ಮಾರಾಟ ಮಾಡುವುದನ್ನು ಹೆಚ್.ಕೆ ಪಾಟೀಲ್ ವಿರೋಧಿಸಿದ್ದರು. ಅಷ್ಟೇಅಲ್ಲದೇ, ಜಿಂದಾಲ್ ವಿಚಾರದಲ್ಲಿ ಸರ್ಕಾರದ ನಿರ್ಧಾರದ ವಿರುದ್ಧ ಬಹಿರಂಗವಾಗಿ ಹೆಚ್.ಕೆ ಪಾಟೀಲ್ ಟೀಕಿಸಿದ್ದರು.
ಅಷ್ಟೇಅಲ್ಲದೆ, ಜಿಂದಾಲ್ ವಿಚಾರವಾಗಿ ಸಚಿವ ಜಾರ್ಜ್ ಹಾಗೂ ಹೆಚ್.ಕೆ ಪಾಟೀಲ್ ನಡುವೆ ಜಟಾಪಟಿಯೂ ನಡೆದಿತ್ತು. ಹೀಗಾಗಿ ನಿನ್ನೆ ನಡೆದ ಸಚಿವ ಸಂಪುಟದ ನಿರ್ಣಯವಾದ, ಸಂಪುಟ ಉಪಸಮಿತಿ ರಚನೆಯನ್ನು ಸ್ವಾಗತಿಸಿ ಹೆಚ್.ಕೆ ಪಾಟೀಲ್ ಟ್ವೀಟ್ ಮಾಡಿದ್ದಾರೆ.