ETV Bharat / state

ಪಿಡಿ ಖಾತೆಗಳಲ್ಲಿನ ಹಣ ಕುರಿತಂತೆ ಶ್ವೇತಪತ್ರ ಹೊರಡಿಸಿ: ಎಚ್.ಕೆ.ಪಾಟೀಲ್

ಲಾಕ್​ಡೌನ್ ಸಮಯದಲ್ಲಿ ಕೆಲವು ಶ್ರೀಮಂತ ಉದ್ಯಮಿಗಳ ಆದಾಯ ಹೆಚ್ಚಾಗಿದೆ. ಆದರೆ ಬಡವ ಸಂಕಷ್ಟದಲ್ಲಿದ್ದಾನೆ. ಸಾಮಾಜಿಕ ನ್ಯಾಯ ನಿರಾಕರಣೆ ವಿರುದ್ಧ ಹೋರಾಟ ಮಾಡುವ ಪರಿಸ್ಥಿತಿ ಬರಬಹುದು. ಮೀಸಲಾತಿ ನಿರಾಕರಣೆ ವಿರುದ್ಧ ಹೋರಾಟ ನಡೆಸುವ ಪರಿಸ್ಥಿತಿ ಬರಬಹುದು ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್​ ನಾಯಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

HK Patil
ಎಚ್.ಕೆ.ಪಾಟೀಲ್
author img

By

Published : Mar 18, 2021, 8:45 PM IST

ಬೆಂಗಳೂರು: ಪಿಡಿ ಖಾತೆಗಳಲ್ಲಿ ಖರ್ಚಾಗದೆ ಸಾವಿರಾರು ಕೋಟಿ ರೂ. ಹಣ ಹಾಗೇ ಉಳಿದುಕೊಂಡಿದ್ದು, ಈ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸುವಂತೆ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ವಿಧಾನಸಭೆ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಪಿಡಿ ಖಾತೆಯಲ್ಲಿ 4,421 ಕೋಟಿ ರೂ ನಲ್ಲಿದೆ. ಆ ಖಾತೆಗಳನ್ನು ಪ್ರತಿ ಮಾರ್ಚ್ 31ಕ್ಕೆ ಕ್ಲೋಸ್ ಮಾಡಬೇಕು. ಆದರೆ ಅದರಲ್ಲಿದ್ದ ಹಣವನ್ನು ಸಂಚಿತ ನಿಧಿಗೆ ವರ್ಗಾವಣೆ ಮಾಡಿಲ್ಲ. ಇನ್ನೂ ಪಿಡಿ ಖಾತೆಯಲ್ಲಿ 2,741 ಕೋಟಿ ರೂ. ಹಣ ವೆಚ್ಚವಾಗದೇ ಮೂರು ವರ್ಷಗಳಿಂದ ಹಾಗೇ ಉಳಿದುಕೊಂಡಿದೆ. ಇನ್ನು 10,000 ಸಾವಿರ ಕೋಟಿ ರೂ ಬೇರೆ ಬೇರೆ ಇಲಾಖೆಗಳು, ನಿಗಮಗಳ ಇತರೆ ಖಾತೆಗಳಲ್ಲಿ ಇವೆ. ಹೀಗೆ ಸುಮಾರು 17,000 ಕೋಟಿ ರೂ. ಮೊತ್ತದಷ್ಟು ಅವ್ಯವಹಾರ ಆಗುವ ಸಾಧ್ಯತೆ ಇದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.

ಬಜೆಟ್​ನಲ್ಲಿ ಸರ್ವರಿಗೂ ಸಮಪಾಲು ಸಮಬಾಲು ಹೇಳಿ ಅದರಂತೆ ನಡೆದಿಲ್ಲ, ಎಲ್ಲೋ ಎಡವುತ್ತಿದ್ದೀರಿ. ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ನೀಡುವಲ್ಲಿ ನಾವೆಲ್ಲರೂ ಕೊಡಲಿ ಪೆಟ್ಟು ಹಾಕಿದ್ದೇವೆ. ಕರ್ನಾಟಕದವರು ಸಾಮಾಜಿಕ ನ್ಯಾಯದ ಹರಿಕಾರರು.ದೇವರಾಜು ಅರಸು ಸಾ ಮಾಜಿಕ ನ್ಯಾಯದ ವಿಚಾರದಲ್ಲಿ ಹಾವನೂರು ವರದಿ ಮೂಲಕ ರಕ್ತ ರಹಿತ ಕ್ರಾಂತಿ ತಂದರು. ಸಾಮಾಜಿಕ ನ್ಯಾಯದ ಕುತ್ತಿಗೆ ಹಿಸುಕುವ ಕೆಲಸ ಆಗುತ್ತಿದೆ. ಮೀಸಲಾತಿ ಲಾಭ ಪಡೆಯುವವರಿಗೆ ಲಾಭ ಸಿಗದ ಹಾಗೆ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.