ETV Bharat / state

ಕೋವಿಡ್ ಪರಿಕರ ಖರೀದಿಯಲ್ಲಿನ ಅಕ್ರಮ: ಪಿಎಸಿ ವರದಿ ಮಂಡಿಸುವಂತೆ ಹೆಚ್.ಕೆ.ಪಾಟೀಲ್ ಆಗ್ರಹ

author img

By

Published : Feb 5, 2021, 4:55 AM IST

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಹೆಚ್.ಕೆ.ಪಾಟೀಲ್ ಈ ಆಗ್ರಹ ಮಾಡಿದ್ದಾರೆ. ಕೋವಿಡ್ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ) ವರದಿಯಲ್ಲಿ ಅಂಕಿ ಅಂಶಗಳೊಂದಿಗೆ ವಿವರಣೆ ನೀಡಲಾಗಿದೆ. ಪಿಎಸಿ ವರದಿಯನ್ನು ತಡೆ ಹಿಡಿಯಲು ಯಾರಿಗೂ ಅಧಿಕಾರ ಇಲ್ಲ ಎಂದು ವಿವರಿಸಿದರು.

ಸದನದಲ್ಲಿ ಪಿಎಸಿ ವರದಿ ಮಂಡಿಸುವಂತೆ ಹೆಚ್.ಕೆ.ಪಾಟೀಲ್ ಆಗ್ರಹ

ಬೆಂಗಳೂರು: ಕೋವಿಡ್ ಪರಿಕರಗಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸದನದಲ್ಲಿ ವರದಿ ಮಂಡನೆ ಮಾಡುವಂತೆ ಹಿರಿಯ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಹೆಚ್.ಕೆ.ಪಾಟೀಲ್ ಈ ಆಗ್ರಹ ಮಾಡಿದ್ದಾರೆ. ಕೋವಿಡ್ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ) ವರದಿಯಲ್ಲಿ ಅಂಕಿ ಅಂಶಗಳೊಂದಿಗೆ ವಿವರಣೆ ನೀಡಲಾಗಿದೆ. ಪಿಎಸಿ ವರದಿಯನ್ನು ತಡೆ ಹಿಡಿಯಲು ಯಾರಿಗೂ ಅಧಿಕಾರ ಇಲ್ಲ ಎಂದು ವಿವರಿಸಿದರು.

ಆದರೆ ವಿಧಾನಮಂಡಲ ಸಚಿವಾಲಯ ವರದಿಯನ್ನು ಅದುಮಿಟ್ಟಿದೆ. ವರದಿ ತಿರಸ್ಕಾರ ಮಾಡಬಹುದು, ಆದರೆ ಸದನದಲ್ಲಿ ಮಂಡನೆ ಆಗದಂತೆ ತಡೆಯುವುದು ಸರಿಯಲ್ಲ. ಪಿಎಸಿ ವರದಿ ತಕ್ಷಣ ಸದನದಲ್ಲಿ ಮಂಡನೆ ಆಗಬೇಕು ಎಂದು ಹೆಚ್.ಕೆ.ಪಾಟೀಲ್ ಆಗ್ರಹಿಸಿದರು.

ಪಿಎಸಿ ವರದಿ ಪ್ರಕಾರ ವಿವಿಧ ಕೋವಿಡ್ ಪರಿಕರ ಖರೀದಿಯಲ್ಲಿ ಸರ್ಕಾರ ಖಜಾನೆಗೆ ಸುಮಾರು 135.27 ಕೋಟಿ ರೂ. ನಷ್ಟ ಆಗಿದೆ. ವಾಸ್ತವ ದರಕ್ಕಿಂತ ಹೆಚ್ಚಿನ ದರ ಪಾವತಿಸಿ ಪರಿಕರಗಳನ್ನು ಖರೀದಿಸಲಾಗಿದೆ ಎಂದು ಹೆಚ್.ಕೆ.ಪಾಟೀಲ್ ಆರೋಪಿಸಿದ್ದರು. ಎಚ್.ಕೆ.ಪಾಟೀಲ್ ಪಿಎಸಿ ಅಧ್ಯಕ್ಷರಾಗಿದ್ದಾಗ ಕೋವಿಡ್ ಪರಿಕರ ಖರೀದಿ ಅಕ್ರಮದ ಬಗ್ಗೆ ತನಿಖೆ ನಡೆಸಿ, ವರದಿ ಸಿದ್ಧಪಡಿಸಿದ್ದರು. ಈ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.