ಯಲಹಂಕ (ಬೆಂಗಳೂರು) : ಸಮಗ್ರ ಯಲಹಂಕ ಇತಿಹಾಸ ಸಂಗ್ರಹಗಾರ, ತಾಲೂಕು ಕೇಂದ್ರ, ಬಿಬಿಎಂಪಿ ವಲಯ ಹೋರಾಟಗಾರ, ಕಲೆ, ನಾಟಕ, ಸಾಹಿತ್ಯಗಾರ ಅ.ಬ.ಶಿವಕುಮಾರ್(63) ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 'ಯಲಹಂಕ ನಾಗರೀಕ ಹಿತರಕ್ಷಣಾ ವೇದಿಕೆ' 'ಜಲಸಿರಿ' ಪ್ರತಿಷ್ಠಾನಗಳ ಮೂಲಕ ಸಮಗ್ರ ಯಲಹಂಕದ ಅಭಿವೃದ್ಧಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಹೋರಾಟಗಾರ. ಜಲಸಿರಿಯ ಮೂಲಕ ಯಲಹಂಕ ಕೆರೆ ಸುತ್ತಮುತ್ತ ಸಾವಿರಾರು ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಅ.ಬ. ಶಿವಕುಮಾರ್ ದುಡಿದಿದ್ದರು.
ಮೃತರು, ಪತ್ನಿ ಮಂಜುಳ, ಒಬ್ಬ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ತಮ್ಮ ಸದಭಿರುಚಿಯ ಹೋರಾಟಗಳಿಂದಲೇ ಮನೆಮಾತಾಗಿದ್ದರು. ಅ.ಬ. ಶಿವಕುಮಾರ್ ಅವರ ಸಾವಿಗೆ ಯಲಹಂಕ ಶಾಸಕ ಎಸ್ಆರ್.ವಿಶ್ವನಾಥ್, ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನ ಕಂಬನಿ ಮಿಡಿದಿದ್ದಾರೆ. ಅ.ಬ.ಶಿವಕುಮಾರ್ ಅಂಗಾಂಗಗಳನ್ನು ಏಸ್ಟರ್ ಕಾವೇರಿ ಆಸ್ಪತ್ರೆಗೆ ದಾನ ಮಾಡಲಾಗಿದೆ. ಹಲವಾರು ವರ್ಷಗಳಿಂದ ಯಲಹಂಕದ ಅಭಿವೃದ್ಧಿಗೆ ಸದ್ದಿಲ್ಲದೆ ದುಡಿದ ಸಾಧಕನ ಅಗಲಿಕೆ ತುಂಬಲಾರದ ನೋವುಂಟು ಮಾಡಿದೆ.
ಇದನ್ನೂ ಓದಿ :ಗಂಡನ ಮನೆಯವರಿಂದ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ