ETV Bharat / state

ಹಿಜಾಬ್​​ ವಿವಾದ: ರಾಜ್ಯದ ವಿವಿಧ ಭಾಗಗಳಲ್ಲಿ ವಾಗ್ವಾದ, ಪ್ರತಿಭಟನೆ ಮುಂದುವರಿಕೆ

author img

By

Published : Feb 17, 2022, 8:38 PM IST

Updated : Feb 17, 2022, 9:36 PM IST

ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಹಿಜಾಬ್​ ವಿವಾದ ಭುಗಿಲೆದ್ದಿದ್ದು, ಕೋರ್ಟ್​ ಮೆಟ್ಟಿಲೇರಿದೆ. ಸದ್ಯ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿ ಧರ್ಮವನ್ನು ಪ್ರತಿನಿಧಿಸುವ ಉಡುಪನ್ನು ಕಾಲೇಜುಗಳಲ್ಲಿ ಧರಿಸದಂತೆ ಹೇಳಿದೆ. ಆದರೆ, ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮಾತ್ರ ಹಿಜಾಬ್​ ಧರಿಸಿಯೇ ಆಗಮಿಸುತ್ತಿದ್ದಾರೆ. ಇದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ, ತರಗತಿ ಬಹಿಷ್ಕಾರ, ವಾಗ್ವಾದ, ಗಲಾಟೆ ನಡೆದಿರುವಂತಹ ಘಟನೆಗಳು ವರದಿಯಾಗಿವೆ.

Hijab controversy continues in Karnataka
ಕರ್ನಾಟಕದಲ್ಲಿ ಮುಂದುವರೆದ ಹಿಜಾಬ್​ ವಿವಾದ

ಬೆಂಗಳೂರು : ರಾಜ್ಯಾದ್ಯಂತ ಹಿಜಾಬ್​ ವಿವಾದ ಭುಗಿಲೆದ್ದಿದ್ದು, ಬಂದ್​ ಆಗಿದ್ದ ಕಾಲೇಜುಗಳು ಪುನಾರಂಭಗೊಂಡಿವೆ. ಆದರೆ, ನ್ಯಾಯಾಲಯದ ಆದೇಶವನ್ನು ಮೀರಿ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್​ ಧರಿಸಿ ಆಗಮಿಸುತ್ತಿದ್ದರು. ಇದರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳ ನಡುವೆ ವಾಗ್ವಾದ, ಗಲಾಟೆ, ಜಗಳ, ಪ್ರತಿಭಟನೆ ನಡೆದಂತಹ ಘಟನೆಗಳು ವದರಿಯಾಗಿವೆ.

ವಿದ್ಯಾರ್ಥಿನಿಯರಿಂದ ಪ್ರತಿಭಟನೆ: ರಾಜ್ಯದಲ್ಲಿ ಬಂದ್​ ಆಗಿದ್ದ ಕಾಲೇಜುಗಳು ನಿನ್ನೆಯಿಂದ ಆರಂಭಗೊಂಡಿದ್ದು, ಕೋರ್ಟ್​ ಆದೇಶವನ್ನು ಮೀರಿ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಇಂದು ಕೂಡ ರಾಯಚೂರಿನ ಎಸ್​​​ಎಸ್​​ಆರ್​​​ಜಿ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಕಾಲೇಜಿನಿಂದ ಜಿಲ್ಲಾಧಿಕಾರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

mysore
ಕಾಲೇಜಿನಿಂದ ಮನೆಗೆ ತೆರಳಿದ ವಿದ್ಯಾರ್ಥಿನಿಯರು

ಕಾಲೇಜಿನಿಂದ ಮನೆಗೆ ತೆರಳಿದ ವಿದ್ಯಾರ್ಥಿನಿಯರು: ಇತ್ತ ಮೈಸೂರಿನ ಹುಣಸೂರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್​​​​ಗೆ ಅವಕಾಶ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿನಿಯರು, ಪೋಷಕರು ಪ್ರಾಂಶುಪಾಲರಿಗೆ ಮನವಿ ಮಾಡಿದರು. ಆದರೆ, ಇದಕ್ಕೆ ಪ್ರಿನ್ಸಿಪಾಲ್​​​​ ಅವಕಾಶ ನೀಡಲಿಲ್ಲ. ಇದರಿಂದ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಪ್ರತಿಭಟನಾಕಾರರಿಗೆ ತಿಳಿ ಹೇಳಿದರು. ಇದಕ್ಕೆ ಒಪ್ಪದೇ 15 ವಿದ್ಯಾರ್ಥಿಗಳು ತರಗತಿಗೆ ಬಾರದೆ ಪೋಷಕರೊಂದಿಗೆ ಮನೆಗೆ ತೆರಳಿದರು.

ಪರೀಕ್ಷೆ ಬರೆಯದೆ ಹೊರ ನಡೆದ ವಿದ್ಯಾರ್ಥಿನಿಯರು: ಗಂಗಾವತಿಯ ಪಂಪಾನಗರದ ಕೊಟ್ಟೂರೇಶ್ವರ ಕಾಲೇಜು ಸಮುಚ್ಛಯದ ಆವರಣದಲ್ಲಿರುವ ಗುಂಜಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಪರೀಕ್ಷೆಯ ಭಾಗವಾಗಿ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿದ್ದವು. ಈ ವೇಳೆ, ಪ್ರಾಂಶುಪಾಲರು ಹಿಜಾಬ್​ ತೆಗೆದಿಟ್ಟು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಿದರು. ಆದರೆ, ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಎಷ್ಟೇ ಪ್ರಯತ್ನಿಸಿದರು ವಿದ್ಯಾರ್ಥಿಗಳು ಮಾತು ಕೇಳದೆ ಪರೀಕ್ಷೆ ಬರೆಯದೇ ಹೊರಟು ಹೋದ ಘಟನೆ ನಡೆದಿದೆ.

haveri
ಹಾವೇರಿಯ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿನಿಯರು

ಅಥಣಿಯಲ್ಲಿ ತರಗತಿ ಬಹಿಷ್ಕಾರ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಂಬತ್ತು ವಿದ್ಯಾರ್ಥಿಗಳು ನಮಗೆ ಹಿಜಾಬ್ ಧರಿಸಿ ಶಿಕ್ಷಣ ಕಲಿಯುವುದಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಶಾಲೆ ಆವರಣದಿಂದ ತಿರುಗಿ ಮನೆ ಕಡೆ ಮುಖ ಮಾಡಿದ್ದಾರೆ. ವಿದ್ಯಾರ್ಥಿನಿಯರ ಜೊತೆ 15 ವಿದ್ಯಾರ್ಥಿಗಳು ಹಿಜಾಬ್ ಬೆಂಬಲಕ್ಕೆ ನಿಂತು, ಅವರು ಕೂಡ ತರಗತಿಗಳನ್ನು ಬಹಿಷ್ಕಾರ ಮಾಡಿ ಮನೆಗೆ ತೆರಳಿದ್ದಾರೆ.

ಮಂಡ್ಯದಲ್ಲಿ ಪೋಷಕರು ಮತ್ತು ಶಿಕ್ಷಕರ ನಡುವೆ ವಾಗ್ವಾದ: ಕಮಲಾ ನೆಹರು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿಕೊಂಡು ಪೋಷಕರೊಂದಿಗೆ ಆಗಮಿಸಿದ್ದರು. ಆಗ ಶಿಕ್ಷಕರು ತರಗತಿ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಕೆಲಕಾಲ ಶಿಕ್ಷಕರು ಮತ್ತು ಪೋಷಕರ ನಡುವೆ ವಾಗ್ವಾದ ನಡೆಯಿತು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

yadgiri
ಯಾದಗಿರಿಯಲ್ಲೂ ಹಿಜಾಬ್​ ಗಲಾಟೆ

ಹಾವೇರಿಯಲ್ಲೂ ಹಿಜಾಬ್​ ವಿವಾದ : ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕೆಎಲ್ಇ ಪಿಯು ಕಾಲೇಜಿನಲ್ಲಿ ಹಿಜಾಬ್​ ಧರಿಸಿ ತರಗತಿಗೆ ಪ್ರವೇಶ ನೀಡುವಂತೆ ವಿದ್ಯಾರ್ಥಿನಿಯರು ಪಟ್ಟು ಹಿಡಿದು ಕುಳಿತ್ತಿದ್ದ ಘಟನೆ ವರದಿಯಾಗಿದೆ. ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಹಿಜಾಬ್​ ಧರಿಸಿ ತರಗತಿಗೆ ತೆರಳಿದ ವಿದ್ಯಾರ್ಥಿನಿಯರು: ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿಗಳಿಗೆ ಹೋಗುವುದಾಗಿ ಹಠ ಹಿಡಿದಿದ್ದರು. ಇದರಿಂದ ಕೆಲಕಾಲ ಕಾಲೇಜು ಸಿಬ್ಬಂದಿ ಹಾಗೂ ಪೊಲೀಸರ ಜೊತೆ ವಿದ್ಯಾರ್ಥಿನಿಯರು ವಾಗ್ವಾದ ನಡೆಸಿದರು. ನಂತರ ಹಿಜಾಬ್ ಹಾಕಿಕೊಂಡೇ ಕಾಲೇಜಿನೊಳಗೆ ಹೋಗಿದ್ದಾರೆ.

Davanagere
ದಾವಣಗೆರೆಯಲ್ಲಿ ಹಿಜಾಬ್​ ಧರಿಸಿ ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿಯರು

ಗೋಕಾಕ್​ ಕಾಲೇಜಿನಲ್ಲಿ ಪ್ರತಿಭಟನೆ: ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಸರ್ಕಾರಿ ಮುನ್ಸಿಪಲ್ ಪದವಿ ಪೂರ್ವ ಕಾಲೇಜಿನಲ್ಲಿ ನಿನ್ನೆ ಗೇಟ್ ಬಳಿಯೇ ಆರು ವಿದ್ಯಾರ್ಥಿನಿಯರನ್ನು ಕಾಲೇಜು ಸಿಬ್ಬಂದಿ ತಡೆದು ಹಿಜಾಬ್ ತೆಗೆದು ಕಾಲೇಜು ಒಳ ಹೋಗುವಂತೆ ಹೇಳಿದ್ದರು‌. ಈ ವೇಳೆ ಹಿಜಾಬ್ ತೆಗೆಯುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟುಹಿಡಿದು ಮನೆಗೆ ವಾಪಸ್ ತೆರಳಿದ್ದರು.

ಇಂದೂ ಸಹ ಆರು ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸಿದ್ದರು‌. ಆದರೆ, ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ. ಬಳಿಕ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಮನವೊಲಿಸಿ ಹಿಜಾಬ್ ತಗೆಯಿಸಿ ತರಗತಿಗೆ ಕಳುಹಿಸಿದ್ದಾರೆ.

haveri
ಹಾವೇರಿಯಲ್ಲಿ ಶಿಕ್ಷಕರ ಜೊತೆ ವಾಗ್ವಾದ ನಡೆಸಿದ ವಿದ್ಯಾರ್ಥಿನಿಯರು

ಯಾದಗಿರಿಯಲ್ಲೂ ಹಿಜಾಬ್​ ಗಲಾಟೆ: ನಗರದ ನೂತನ ಕನ್ನಡ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್​ ಧರಿಸಿದ್ದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಇವರಿಗೆ ಪೋಷಕರು ಸಾಥ್​​ ನೀಡಿದ ಘಟನೆ ನಡೆದಿದೆ.

ತಹಶೀಲ್ದಾರ್​ ಎಚ್ಚರಿಕೆ: ಗುರುಮಠಕಲ್ ಪಟ್ಟಣದ ಸರ್ಕಾರಿ ಕಿರಿಯ ಮಹಾ ವಿದ್ಯಾಲಯದಲ್ಲಿ ಹಿಜಾಬ್​ ನಿರಾಕರಣೆ ಮಾಡಿದ್ದಕ್ಕೆ ಪೋಷಕರ ಜೊತೆ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿ, ಪೊಲೀಸರು ಜೊತೆ ವಾಗ್ವಾದ ನಡೆಸಿದ್ದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್​​ ಶರಣಬಸವರವರು ಭೇಟಿ ನೀಡಿ ಯಾವುದೇ ತೊಂದರೆ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳುವದಾಗಿ ಖಡಕ್​ ಎಚ್ಚರಿಕೆ ನೀಡಿದರು.

ದೊಡ್ಡಬಳ್ಳಾರದಲ್ಲಿ ಮನೆಗೆ ಕಡೆ ನಡೆದ ವಿದ್ಯಾರ್ಥಿನಿಯರು: ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರಿಂದ ಅದನ್ನು ತೆಗೆದು ತರಗತಿಗಳಿಗೆ ಬರುವಂತೆ ಉಪನ್ಯಾಸಕರು ಮನವಿ ಮಾಡಿದರು. ಆದರೆ, ಹಿಜಾಬ್ ತೆಗೆಯಲು ನಿರಕಾರಿಸಿದ 15 ಕ್ಕೂ ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗಿದ್ದಾರೆ ಎಂದು ತಿಳಿದು ಬಂದಿದೆ.

ಹಿಜಾಬ್​ ಧರಿಸಿದ್ದ ವಿದ್ಯಾರ್ಥಿನಿಯರನ್ನು ಹೊರ ನಿಲ್ಲಿಸಿದ ಕಾಲೇಜು ಆಡಳಿತ ಮಂಡಳಿ: ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಪ್ರಗತಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು‌ ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಕಾಲೇಜಿನಿಂದ ಹೊರಗಡೆ ನಿಲ್ಲಿಸಿತ್ತು. ಇದರಿಂದ ಆಕ್ರೋಶಗೊಂಡ ಪೋಷಕರು ಕಾಲೇಜಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಶಿರಸಿಯಲ್ಲಿ ಮೊಳಗಿದ ಜೈ ಶ್ರೀರಾಮ್ ಘೋಷಣೆ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹಿಜಾಬ್ ಗಲಾಟೆ ತಾರಕಕ್ಕೇರಿತ್ತು. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಜಬ್ ಬೇಕು ಎಂದು ಘೋಷಣೆ ಕೂಗಿದರು. ಅದಕ್ಕೆ ಪ್ರತಿಯಾಗಿ ಕೆಲ ಹಿಂದೂ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ ಘಟನೆ ನಡೆದಿದೆ.

ಇದನ್ನೂ ಓದಿ: ಹಿಜಾಬ್​ ಪ್ರಕರಣ: ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಬಗ್ಗೆ ಹೈಕೋರ್ಟ್​ ಹೇಳಿದ್ದೇನು?

ಗುಂಡ್ಲುಪೇಟೆಯಲ್ಲೂ ಹಿಜಾಬ್​ಗಾಗಿ ಪಟ್ಟು: ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣಕ್ಕೂ ಹಿಜಾಬ್ ವಿವಾದ ಕಾಲಿಟ್ಟಿದ್ದು ಇಬ್ಬರು ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಬೇಕೆಬೇಕೆಂದು ಪಟ್ಟು ಹಿಡಿದಿರುವ ಘಟನೆ ನಡೆದಿದೆ.

ಗುಂಡ್ಲುಪೇಟೆ ಪಟ್ಟಣದ ಗೌತಮ್ ಪ್ರೌಢಶಾಲೆಗೆ ಹಿಜಾಬ್ ಧರಿಸಿ ಬಂದ ಇಬ್ಬರು ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗು ಶಿಕ್ಷಕರು ಪ್ರವೇಶ ನಿರಾಕರಿಸಿದ ಹಿನ್ನೆಲೆ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಂಜೆವರೆಗೆ ಶಾಲೆ ಮುಂದೆ ನಿಂತು ಮನೆಗೆ ವಾಪಸ್ ಆಗಿರುವ ಘಟನೆ ಗುರುವಾರ ನಡೆದಿದೆ.

Last Updated : Feb 17, 2022, 9:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.