ETV Bharat / state

ರಾಜ್ಯದ ಮೇಲೆ ಉಗ್ರರ ಕರಿನೆರಳು: ಕೇಂದ್ರದಿಂದ ಕಟ್ಟೆಚ್ಚರದ ಸೂಚನೆ - HighAlert

ಕೇಂದ್ರ ಗುಪ್ತಚರ ದಳದ ಮಾಹಿತಿ ಮೇರೆಗೆ ರಾಜ್ಯದ ಪ್ರಮುಖ ನಗರಗಳಲ್ಲಿ ಹೈಅಲರ್ಟ್​ ಘೋಷಣೆಯಾಗಿದೆ. ಉಗ್ರರು ರಾಜ್ಯದಲ್ಲಿ ನುಸುಳಿರುವ ಮಾಹಿತಿ ಇದ್ದು, ವಿಧ್ವಂಸಕ ಕೃತ್ಯ ತಡೆಯಲು ಕಟ್ಟೆಚ್ಚರ ವಹಿಸಲಾಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಹೈಅಲರ್ಟ್​ ಘೋಷಣೆ
author img

By

Published : Aug 17, 2019, 11:47 PM IST

ಬೆಂಗಳೂರು: ಉಗ್ರರ ದಾಳಿ ಶಂಕೆ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಹಾಸನ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಹೈಅಲರ್ಟ್​ ಘೋಷಣೆ

ಕೇಂದ್ರ ಗುಪ್ತಚರ ದಳದ ಮಾಹಿತಿ ಮೇರೆಗೆ ಉಗ್ರರು ನುಸುಳಿರುವ ಶಂಕೆ ಇದ್ದು, ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಏಸಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಪ್ರಮುಖ ನಗರಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ವಿಶೇಷ ಗಸ್ತು ಆರಂಭಿಸಲಾಗಿದೆ.

ಹಾಸನದ ಪ್ರಮುಖ ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಬಾಹ್ಯಾಕಾಶ ನಿಯಂತ್ರಣ ಕೇಂದ್ರಕ್ಕೂ ಸಾಕಷ್ಟು ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಕೇಂದ್ರ ಗುಪ್ತಚರ ಇಲಾಖೆ ನೀಡಿದ ಸೂಚನೆಯಂತೆ, ಬೆಂಗಳೂರು ಪೊಲೀಸರು ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಹೈ‌ ಅಲರ್ಟ್ ಸೂಚಿಸಿದ್ದರೂ, ದೊಡ್ಡ ಮಟ್ಟದಲ್ಲಿ ಪೊಲೀಸರನ್ನು‌ ನಿಯೋಜನೆ ಮಾಡಿರಲಿಲ್ಲ.‌ ಅದಕ್ಕೆ ಕಾರಣವೇ ಬೇರೆಯಾಗಿತ್ತು.

ಈ ಬಾರಿ ಕೇಂದ್ರ ಸರ್ಕಾರ 'A' ಮಾದರಿಯ ಅಲರ್ಟ್ ಘೋಷಣೆ ಮಾಡಿದ್ದರಿಂದಲೇ ಹೆಚ್ಚಿನ ಮಟ್ಟದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಏನಿದು A ಮಾದರಿ ಅಲರ್ಟ್‌?
'A' ಮಾದರಿಯ ಅಲರ್ಟ್, ಎಂದರೆ ಯಾವುದೇ ಭದ್ರತಾ ಸೂಚನೆ ನಿರ್ಲಕ್ಷ್ಯ ಮಾಡುವಂತಿಲ್ಲ. ತಕ್ಷಣವೇ ಎಲ್ಲಾ ರಕ್ಷಣಾ ಸಿಬ್ಬಂದಿ ಕಾರ್ಯೋನ್ಮುಖವಾಗಬೇಕು. ಯಾವುದೇ ಕಾರಣ ಹೇಳುವ ಹಾಗಿಲ್ಲ. ಸಣ್ಣ ವಿಚಾರ ಕೂಡ ಕೂಲಂಕಷವಾಗಿ ಪರಿಶೀಲಿಸಬೇಕು. ಪ್ರತಿ ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾಗಿರುತ್ತದೆ.

ಸಾಮಾನ್ಯವಾಗಿ ಕೇಂದ್ರ ಗುಪ್ತಚರ ಇಲಾಖೆ ನೀಡುವ ಅಲರ್ಟ್​ನಲ್ಲಿ 3 ರೀತಿ ಇದೆ. 'A' ಅಲರ್ಟ್ ತಕ್ಷಣವೇ ಕಾರ್ಯೋನ್ಮುಖವಾಗಬೇಕು. 'B' ಅಲರ್ಟ್ ಯಾವುದಕ್ಕೂ ಸಿದ್ಧವಾಗಿರಬೇಕು, 'C' ಅಲರ್ಟ್ ಸಾಮಾನ್ಯವಾಗಿ ತಪಾಸಣೆ ನಡೆಸಬೇಕು.

Intro:Body:ಕೇಂದ್ರದಿಂದ ಈ ಬಾರಿ ಬಂದಿದ್ದು ಯಾವ ಮಾದರಿ ಹೈ ಅಲರ್ಟ್ ಗೊತ್ತಾ..?

ಬೆಂಗಳೂರು: ಉಗ್ರರ ದಾಳಿ ಶಂಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೈಅಲರ್ಟ್ ಘೋಷಣೆಯಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕೇಂದ್ರ ಗುಪ್ತಚರ ಇಲಾಖೆಯ‌ ನೀಡಿದ ಸೂಚನೆಯಂತೆ ಬೆಂಗಳೂರು ಪೊಲೀಸರು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಹೈ‌ ಅಲರ್ಟ್ ಇರುವಂತೆ ಸೂಚನೆ ನೀಡಿದ್ದರೂ ಇಂದಿನಷ್ಟು ದೊಡ್ಡ ಮಟ್ಟದಲ್ಲಿ ಪೊಲೀಸರನ್ನು‌ ನಿಯೋಜನೆ ಮಾಡಿರಲಿಲ್ಲ.‌ ಅದಕ್ಕೆ ಕಾರಣವೇ ಬೇರೆಯಾಗಿತ್ತು.
ಈ ಬಾರಿ ಕೇಂದ್ರ ಸರ್ಕಾರ 'A' ಮಾದರಿಯ ಅಲರ್ಟ್ ಘೋಷಣೆ ಮಾಡಿದ್ದರಿಂದಲೇ ಹೆಚ್ಚಿನ ಮಟ್ಟದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲು ಕಾರಣವಾಗಿದೆ.

'A' ಮಾದರಿಯ ಅಲರ್ಟ್ ಎಂದರೆ ಯಾವುದೇ ವಿಚಾರ ನಿರ್ಲಕ್ಷ್ಯ ಮಾಡುವಂತಿಲ್ಲ. ತಕ್ಷಣವೇ ಎಲ್ಲಾ ರಕ್ಷಣಾ ಸಿಬ್ಬಂದಿ ಕಾರ್ಯೋನ್ಮುಖವಾಗಬೇಕು. ಯಾವುದೇ ಕಾರಣ ಹೇಳುವ ಹಾಗೇ ಇಲ್ಲ. ಸಣ್ಣ ವಿಚಾರ ಕೂಡ ಕೂಲಂಕುಷವಾಗಿ ಪರಿಶೀಲಿಸಬೇಕು. ಪ್ರತಿ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾವಹಿಸಬೇಕು.

ಸಾಮಾನ್ಯವಾಗಿ ಕೇಂದ್ರ ಗುಪ್ತಚರ ಇಲಾಖೆ ನೀಡುವ ಅಲರ್ಟ್ ಅಲ್ಲಿ ಮೂರು ರೀತಿಯದ್ದು ಆಗಿರುತ್ತದೆ. 'A' ಅಲರ್ಟ್ ತಕ್ಷಣವೇ ಕಾರ್ಯೋನ್ಮುಖವಾಗಬೇಕು. 'B' ಅಲರ್ಟ್ ಯಾವುದಕ್ಕೂ ಸಿದ್ದವಾಗಿರಬೇಕು
'C' ಅಲರ್ಟ್ ಸಾಮಾನ್ಯವಾಗಿ ತಪಾಸಣೆ ನಡೆಸಬೇಕು.
ಆದರೆ ಈ ಬಾರಿ ಬೆಂಗಳೂರಿಗೆ ಬಂದದ್ದು 'A' ಅಲರ್ಟ್
ಆದರಿಂದಲೇ ಇಡೀ ಬೆಂಗಳೂರು ಪೊಲೀಸರು ಫುಲ್ ಹೈ ಅಲರ್ಟ್ ಘೋಷಣೆಯಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.