ETV Bharat / state

371ಜೆ ಅಡಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲು ಸೌಲಭ್ಯ ಸ್ಪಷ್ಟನೆ ಎತ್ತಿ ಹಿಡಿದ ಹೈಕೋರ್ಟ್ - etv bharat kannada

ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಸಂವಿಧಾನದ 371ಜೆ ವಿಧಿಯಡಿ ಮೀಸಲಾತಿ ಉಲ್ಲೇಖಿಸಿರುವಂತೆ ಅನ್ವಯಿಸಬೇಕು ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

high-court-has-upheld-the-government-circular-clarification-on-the-article-371j-of-the-constitution
371ಜೆ ಅಡಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲು ಸೌಲಭ್ಯ ಸ್ಪಷ್ಟನೆ ಎತ್ತಿ ಹಿಡಿದ ಹೈಕೋರ್ಟ್
author img

By ETV Bharat Karnataka Team

Published : Aug 30, 2023, 10:16 PM IST

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಸಂವಿಧಾನದ 371ಜೆ ವಿಧಿಯಡಿ ಮೀಸಲಾತಿ ಉಲ್ಲೇಖಿಸಿರುವಂತೆ ಅನ್ವಯಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸರ್ಕಾರದ ಕ್ರಮ ಪ್ರಶ್ನಿಸಿ ಮಂಡ್ಯದ ಹೆಚ್​.ಎನ್ ನವೀನ್ ಕುಮಾರ್ ಸೇರಿದಂತೆ 26 ಅಭ್ಯರ್ಥಿಗಳು 2023ರ ಫೆಬ್ರವರಿ 1ರಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್​.ಎಸ್.ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ.

ಸ್ಥಳೀಯ ಕೇಡರ್​ನಲ್ಲಿ ಸಹಾಯಕ ಎಂಜಿನಿಯರ್​ಗಳ ಹುದ್ದೆಗಳು ಭರ್ತಿಯಾಗದೇ ಖಾಲಿ ಬಿದ್ದಿದ್ದು, ಸ್ಥಳಿಯೇತರ ಕೇಡರ್​ನಲ್ಲಿ ಅಸಂಖ್ಯಾತ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಕಾದು ಕೂತಿದ್ದಾರೆ. ಉದ್ಯೋಗ ಪಡೆಯುವುದು ಅತ್ಯಂತ ದುರ್ಲಭ ಎನ್ನುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದು, ಮುಂದೆ ನೇಮಕಾತಿ ನಡೆಯುವವರಿಗೆ ಬಹುತೇಕ ಅಭ್ಯರ್ಥಿಗಳು ಅನರ್ಹರಾಗುತ್ತಾರೆ. ಹೀಗಾಗಿ, ಇದೊಂದು ವಿಶೇಷ ಕ್ರಮ ಎಂದು ಪರಿಗಣಿಸಿ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಮಿತಿಗೊಳಿಸಿ ನ್ಯಾಯಾಲಯವು ಕೆಳಕಂಡ ನಿರ್ದೇಶನಗಳನ್ನು ನೀಡಿದೆ. ಸ್ಥಳಿಯೇತರ ಕೇಡರ್​ನಲ್ಲಿ ಆಯ್ಕೆಯಾಗಿರುವ ಹೈದರಾಬಾದ್ ಕರ್ನಾಟಕ ಭಾಗದ ಸ್ಥಳೀಯರು ಸ್ಥಳೀಯ ಕೇಡರ್ ಆಯ್ಕೆ ಮಾಡಿಕೊಳ್ಳುವ ಇಚ್ಛೆ ಹೊಂದಿದ್ದಾರೆಯೇ ಎಂದು ಕೇಳುವ ಮೂಲಕ ಹೊಸ ಆಯ್ಕೆ ಮಾಡುವಂತೆ ಹಾಗೂ ಈ ಪ್ರಕರಣವನ್ನು ಅಸಾಧಾರಣ ಪ್ರಕರಣ ಎಂದು ಪರಿಗಣಿಸುವಂತೆ ರಾಜ್ಯ ಸರ್ಕಾರ ಮತ್ತು ಕೆಪಿಟಿಸಿಎಲ್​ಗೆ ನ್ಯಾಯಾಲಯ ನಿರ್ದೇಶಿಸಿದೆ.

ಸ್ಥಳೀಯ ಅಭ್ಯರ್ಥಿಗಳು ಸ್ಥಳಿಯೇತರ ಕೇಡರ್​ಗೆ ಆಯ್ಕೆಯಾಗಲು ಬಯಸಿದರೆ ಮತ್ತು ಅವರು ಸ್ಥಳೀಯ ಕೇಡರ್ ಆಯ್ಕೆ ಮಾಡಿಕೊಳ್ಳುವಂತೆ ಬಲವಂತ ಮಾಡುವಂತಿಲ್ಲ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನಪಡೆದಿರುವ ಯಾವುದೇ ಸ್ಥಳೀಯ ವ್ಯಕ್ತಿಯನ್ನು ಬದಲಾವಣೆ ಮಾಡುವಂತಿಲ್ಲ. ಸ್ಥಳೀಯ ವ್ಯಕ್ತಿಯನ್ನು ಸ್ಥಳೀಯ ಕೇಡರ್ ಹುದ್ದೆಯಿಂದ ಬದಲಿಸಿದರೆ ಸ್ಥಳೀಯ ಕೇಡರ್ ಆಯ್ಕೆ ಮಾಡಿದ್ದ ಸ್ಥಳಿಯೇತರ ಕೇಡರ್ ವ್ಯಕ್ತಿಯನ್ನು ಸ್ಥಳಿಯೇತರ ಕೇಡರ್​ಲ್ಲೇ ಮುಂದುವರಿಸಬೇಕು.

ಸ್ಥಳೀಯ ವ್ಯಕ್ತಿಗಳು ಸ್ಥಳೀಯ ಕೇಡರ್ ಹುದ್ದೆಗಳಿಗೆ ಅರ್ಹತೆ ಹೊಂದಿಲ್ಲದಿದ್ದರೆ ಅವರನ್ನು ಅಗತ್ಯವಾಗಿ ಸ್ಥಳೀಯ ಕೇಡರ್ ಹುದ್ದೆಗಳಿಗೆ ವಿರುದ್ಧವಾಗಿ ಪರಿಗಣಿಸಬೇಕು. ಸ್ಥಳೀಯ ವ್ಯಕ್ತಿಗಳು ಸ್ಥಳೀಯ ಕೇಡರ್ ಆಯ್ಕೆ ಅವಕಾಶ ಮುಗಿದರೂ ಒಂದೊಮ್ಮೆ ಸ್ಥಳೀಯ ಕೇಡರ್ ಹುದ್ದೆಗಳು ಸೃಷ್ಟಿಯಾಗದಿದ್ದರೆ ಆ ಹುದ್ದೆಗಳನ್ನು ರಾಜ್ಯಪಾಲರ ಆದೇಶದಲ್ಲಿ ಹೇಳಿರುವಂತೆ ಬ್ಯಾಕ್ಲಾಗ್ ಹುದ್ದೆ ಮುಂದುವರಿಸಬೇಕು ಎಂದು ನ್ಯಾಯಾಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ?: 2022ರ ಜನವರಿ 24ರಂದು ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ರಾಜ್ಯ ಸರ್ಕಾರವು ನೇಮಕಾತಿ ಅಧಿಸೂಚನೆ ಹಿನ್ನೆಲೆಯಲ್ಲಿ ಅರ್ಜಿದಾರರು ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ (ಎಲೆಕ್ಟ್ರಿಕಲ್) ಅರ್ಜಿ ಹಾಕಿದ್ದರು. ಇದರ ಬೆನ್ನಲೆ, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಸಂವಿಧಾನದ 371ಜೆ ವಿಧಿಯಡಿ ಮೀಸಲಾತಿ ಉಲ್ಲೇಖಿಸಿರುವಂತೆ ಅನ್ವಯಿಸಬೇಕು ಎಂದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

ಅಲ್ಲದೆ, ಆಕ್ಷೇಪಾರ್ಹವಾದ ಸುತ್ತೋಲೆಯನ್ನು 2020ರ ಜೂನ್ 6ರ ನಂತರ ಮತ್ತು 2022ರ ಜೂನ್ 15ಕ್ಕೂ ಮುನ್ನ ಹೊರಡಿಸಿದ್ದು, 2020ರ ಜೂನ್ 6ರ ಸುತ್ತೋಲೆಯನ್ನು ಅನುಪಾಲಿಸಲಾಗಿದೆ. ಇದರಲ್ಲಿ ಮೀಸಲಾತಿ ಒಳಗೊಂಡ ಸ್ಥಳೀಯ ಮತ್ತು ಸ್ಥಳೀಯೇತರ ಹುದ್ದೆಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಸ್ಥಳೀಯ ಅಭ್ಯರ್ಥಿಗಳು ಸ್ಥಳೀಯ ಕೇಡರ್ ಆಯ್ಕೆ, ಅಭ್ಯರ್ಥಿಯು ಸ್ಥಳಿಯೇತರ ಕೇಡರ್​ನಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆಯೇ, ಎರಡರಲ್ಲೂ ಆಯ್ಕೆಯಾಗುವ ಅರ್ಹತೆ ಹೊಂದಿದ್ದರೆ ಅಭ್ಯರ್ಥಿಯು ಯಾವ ಕೇಡರ್ ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: ಸಿ ಜೆ ಹುನಗುಂದಗೆ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಸದಸ್ಯ ಸ್ಥಾನ ನೀಡಿದ್ದಕ್ಕೆ ಆಕ್ಷೇಪ: ಹೈಕೋರ್ಟ್ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.