ETV Bharat / state

ಫ್ಲೆಕ್ಸ್ ಬ್ಯಾನರ್ ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತೀವ್ರ ತರಾಟೆ

ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಳ್ಳದೆ ಇರುವುದು ನಿಜಕ್ಕೂ ಆಘಾತಕಾರಿ ಎಮದು ಹೈಕೋರ್ಟ್​ ಅಸಮಾಧಾನ ಹೊರಹಾಕಿದೆ.

High Court
ಹೈಕೋರ್ಟ್
author img

By

Published : Mar 20, 2023, 10:16 PM IST

ಬೆಂಗಳೂರು : ತಮ್ಮನ್ನು ತೋರ್ಪಡಿಸುವುದು ಅಥಾವ ಇತರರನ್ನು ಓಲೈಕೆ ಮಾಡಿಕೊಳ್ಳುವುದಕ್ಕಾಗಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್. ಹೋರ್ಡಿಂಗ್‌ಗಳನ್ನು ಹಾಕಿ ನಗರದ ಸೌಂದರ್ಯಕ್ಕೆ ಧಕ್ಕೆ ತರುವವರ ವಿರುದ್ಧ ಕಾನೂನಿನಡಿಯಲ್ಲಿ ಕ್ರಮ ಕೈಗೊಳದಿರುವುದು ನಿಜಕ್ಕೂ ಆಘಾತಕಾರಿ ಎಂದು ಬಿಬಿಎಂಪಿ ವಿರುದ್ಧ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಫ್ಲೆಕ್ಸ್ ಬ್ಯಾನರ್‌ಗಳ ಮೂಲಕ ನಗರದ ಸೌಂದರ್ಯವನ್ನು ಹಾಳು ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗ ಬಿಬಿಎಂಪಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ, ಪಾಲಿಕೆ ಕೇವಲ ನಾಮಕವಾಸ್ತೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿತು.

ನ್ಯಾಯಾಲಯದ ಆದೇಶ ಆದೇಶ ಪಾಲಿಸಿರುವ ಬಗ್ಗೆ ಬಿಬಿಎಂಪಿ ಮಾ.15 ರಂದು ಸಲ್ಲಿಸಿರುವ ಅನುಪಾಲನಾ ವರದಿ ಒಂದಿಷ್ಟು ಸಮಾಧಾನ ತಂದಿಲ್ಲ. ಆದ್ದರಿಂದ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಹಾಗೂ ಇತರೆ ಫಲಕಗಳನ್ನು ತೆರವುಗೊಳಿಸಿರುವ ಮತ್ತು ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕಾಗಿರುವ ಕ್ರಮಗಳ ಸಮಗ್ರ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಸರ್ಕಾರದ ಪರ ವಕೀಲರು ಪ್ರಮಾಣಪತ್ರ ಸಲ್ಲಿಕೆ : ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ, 2023ರ ಜನವರಿಯಿಂದ ಇಲ್ಲಿವರೆಗೆ ಅನಧಿಕೃತ ಫ್ಲೆಕ್ಸ್, ಬ್ಯಾನರ್ ವಿರುದ್ಧ ಕೈಗೊಂಡಿರುವ ಕ್ರಮಗಳ ವಿವರಗಳನ್ನು ನ್ಯಾಯಪೀಠಕ್ಕೆ ಒದಗಿಸಿದರು. ಅದರಂತೆ, 2023ರ ಜನವರಿಯಿಂದ ಇಲ್ಲಿವರೆಗೆ ಬಿಬಿಎಂಪಿಯ ಎಲ್ಲಾ ಎಂಟು ವಲಯಗಳಲ್ಲಿ ಒಟ್ಟಾರೆ 9,750 ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಹಾಗೂ ಇತರೆ ಪ್ರದರ್ಶನ ಫಲಕಗಳನ್ನು ಗುರುತಿಸಲಾಗಿದೆ. ಆ ಪೈಕಿ 9,040 ತೆರವುಗೊಳಿಸಲಾಗಿದ್ದು, 41 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ. 80 ದೂರುಗಳನ್ನು ದಾಖಲಿಸಿಕೊಂಡು ಆ ಪೈಕಿ 53 ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ಬಿಬಿಎಂಪಿಯ ಕ್ರಮ ಕೇವಲ ನಾಮಕಾವಾಸ್ತೆ : ಈ ಅಂಕಿ ಅಂಶಗಳನ್ನು ಗಮನಿಸಿದ ನ್ಯಾಯಪೀಠ, ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಿರುವುದು, ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದು, ಜನಸಾಮಾನ್ಯರು ದೂರು ನೀಡಲು ಅಧಿಕಾರಿಗಳ ಹೆಸರು ಮತ್ತು ಅವರ ಮೊಬೈಲ್ ನಂಬರ್‌ಗಳ ಪಟ್ಟಿ ಕೊಟ್ಟಿರುವ ಬಿಬಿಎಂಪಿ ಕ್ರಮ ಸ್ವಾಗತಾರ್ಹ. ಆದರೆ, ಅದು ಕಾರ್ಯಾಗತಗೊಂಡಿರುವುದು ಗಮನಿಸಿದರೆ, ಬಿಬಿಎಂಪಿಯ ಕ್ರಮ ಕೇವಲ ನಾಮಕಾವಾಸ್ತೆ ಎಂದು ಹೇಳದೆ ಬೇರೆ ದಾರಿಯಿಲ್ಲ ಎಂದು ತಿಳಿಸಿತು.

ಅಲ್ಲದೆ ಈವರೆಗೂ ಬೆಳಕಿಗೆ ಬಂದಿರುವ 9,750 ಪ್ರಕರಣಗಳಲ್ಲಿ ಕೇವಲ 53 ಎಫ್‌ಐಆರ್ ದಾಖಲಾಗಿದೆ. ವಲಯವಾರು ಗಮನಿಸಿದರೆ ಕನಿಷ್ಟ 448 ರಿಂದ ಗರಿಷ್ಟ 2,525 ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಪತ್ತೆ ಹಚ್ಚಲಾಗಿದೆ. ಎಫ್‌ಐಆರ್ ಮಾತ್ರ ಒಂದಂಕಿಯಲ್ಲಿದೆ. ಕನಿಷ್ಠ 6 ಮತ್ತು ಗರಿಷ್ಠ 30 ಎಫ್‌ಐಆರ್‌ಗಳಾಗಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಯಾಕಿಷ್ಟು ಹಿಂಜರಿಯುತ್ತಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿತು.

ಜನರಿಗೆ ಏಕೆ ಹೆಚ್ಚುವರಿ ತೆರಿಗೆ ? : ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವುಗೊಳಿಸಲು ಹೆಚ್ಚುವರಿ ಸಿಬ್ಬಂದಿ ಮತ್ತು ಯಂತ್ರಗಳು ಬೇಕಾಗುತ್ತದೆ. ಅದಕ್ಕಾಗಿ ಆರ್ಥಿಕ ವೆಚ್ಚವೂ ಇದೆ ಎಂದು ಬಿಬಿಎಂಪಿ ಹೇಳಿದೆ. ಆದರೆ, ತಪ್ಪಿತಸ್ಥರ ವಿರುದ್ಧ ದಂಡ ವಿಧಿಸಿರುವ ಬಗ್ಗೆ ಕೇಳಿದರೆ ಬಿಬಿಎಂಪಿ ಬಳಿ ಉತ್ತರವಿಲ್ಲ. ಹೀಗಿದ್ದಾಗ, ತಮ್ಮನ್ನು ತೋರ್ಪಡಿಸಿಕೊಳ್ಳುವುದು ಮತ್ತು ಮತ್ಯಾರನ್ನೋ ಓಲೈಸಲಿಕ್ಕೆ ಬ್ಯಾನರ್, ಫ್ಲೆಕ್ಸ್ ಹಾಕಿ ನಗರದ ಸೌಂದರ್ಯವನ್ನು ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಬೇಕು. ಅದು ಬಿಟ್ಟು ತೆರವು ಕಾರ್ಯಾಚರಣೆಗೆ ತಗಲುವ ವೆಚ್ಚ ಬಿಬಿಎಂಪಿ ಭರಿಸಿದರೆ ಅಂತಿಮವಾಗಿ ಅದು ತೆರಿಗೆ ಪಾವತಿಸುವ ಜನಸಾಮಾನ್ಯರ ಮೇಲೆ ಭಾರ ಹಾಕಿದಂತೆ ಆಗುತ್ತದೆ ಎಂದು ನ್ಯಾಯಪೀಠ ಇದೇ ವೇಳೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತು.

ಇದನ್ನೂ ಓದಿ :ನೆರೆಹೊರೆಯವರ ಹೇಳಿಕೆಗಳನ್ನೇ ಸಾಕ್ಷ್ಯಗಳನ್ನಾಗಿ ಪರಿಗಣಿಸಿ ಶಿಕ್ಷೆ ನೀಡಲಾಗದು : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.