ETV Bharat / state

ಇಸ್ಲಾಂನಲ್ಲಿ ವಿಚ್ಛೇದನ ನೀಡಿದಾಕ್ಷಣ ಜೀವನಾಂಶ ಕೊಡುವುದರಿಂದ ತಪ್ಪಿಸಿಕೊಳ್ಳಲಾಗದು: ಹೈಕೋರ್ಟ್ - ಜೀವನಾಂಶ ನೀಡುವ ವಿಚಾರದಲ್ಲಿ ಆದೇಶ ಹೊರಡಿಸಿದ ಹೈಕೋರ್ಟ್

ಇಸ್ಲಾಂ ಧರ್ಮದ ಪತ್ನಿಗೆ ಜೀವನಾಂಶ ನೀಡುವ ವಿಚಾರವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ ಇತ್ತೀಚೆಗೆ ನಡೆಸಿತು. ಈ ವೇಳೆ ಪತಿ, ಪತ್ನಿಗೆ ಜೀವನಾಂಶ ನೀಡುವ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

High court
ಹೈಕೋರ್ಟ್
author img

By

Published : Oct 20, 2021, 4:53 PM IST

Updated : Oct 20, 2021, 5:00 PM IST

ಬೆಂಗಳೂರು: ಇಸ್ಲಾಂನಲ್ಲಿ ಮದುವೆ ಒಂದು ಸಂಸ್ಕಾರವಲ್ಲ, ಒಪ್ಪಂದ. ಹಾಗೆಂದು ವಿಚ್ಛೇದನ ನೀಡಿದಾಕ್ಷಣ ಪತ್ನಿಗೆ ಜೀವನಾಂಶ ನೀಡುವ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.

ಪತ್ನಿಗೆ ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಎಜಾಜುರ್ ರೆಹಮಾನ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪೀಠ ತನ್ನ ಆದೇಶದಲ್ಲಿ ಮುಸ್ಲಿಂ ವಿವಾಹ ಒಂದು ಸಂಸ್ಕಾರವಲ್ಲ. ಎರಡು ಕುಟುಂಬಗಳ ನಡುವಿನ ಒಪ್ಪಂದದಂತೆ ಇಬ್ಬರು ವಿವಾಹ ಒಪ್ಪಂದಕ್ಕೆ ಒಳಪಡುತ್ತಾರೆ. ಇಂತಹ ವಿವಾಹವು ವಿಚ್ಛೇದನದಿಂದ ಬೇರ್ಪಟ್ಟಾಗ ಪತಿಯಾದ ವ್ಯಕ್ತಿ ತನ್ನೆಲ್ಲಾ ಬಾಧ್ಯತೆಗಳಿಂದ ಮುಕ್ತನಾಗುವುದಿಲ್ಲ. ಮೆಹರ್ ನೀಡಿದಾಕ್ಷಣ ಒಪ್ಪಂದ ಮುಕ್ತಾಯವಾಗುವುದಿಲ್ಲ. ಬದಲಿಗೆ ಕೆಲವು ನ್ಯಾಯಯುತ ಹೊಣೆಗಾರಿಕೆಗಳನ್ನು ಸೃಷ್ಟಿಸುತ್ತದೆ. ವಿಚ್ಛೇದನದಿಂದ ನಿರ್ಗತಿಕಳಾಗುವ ಮಾಜಿ ಪತ್ನಿಗೆ ಪತಿ ಜೀವನಾಂಶ ನೀಡಬೇಕಾಗುತ್ತದೆ ಎಂದು ಪೀಠ ಹೇಳಿದೆ.

ಕುರಾನ್ ಹಾಗೂ ಹದೀಸ್​​​ನಲ್ಲಿರುವ ಪದ್ಯವನ್ನು ಉಲ್ಲೇಖಿಸಿರುವ ಪೀಠ, ವಿಚ್ಛೇದಿತ ಪತ್ನಿ ಮರು ಮದುವೆಯಾಗದಿದ್ದರೆ ಅಥವಾ ಅಶಕ್ತಳಾಗಿದ್ದರೆ ಆಕೆಗೆ ಜೀವನಾಂಶ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದೇ ವೇಳೆ ಮೊದಲ ಪತ್ನಿಗೆ ತಲಾಕ್ ನೀಡುವ ವೇಳೆ ಮೆಹರ್ ನೀಡಿರುವುದರಿಂದ ಜೀವನಾಂಶ ನೀಡಲು ಸಾಧ್ಯವಿಲ್ಲ. ಎರಡನೇ ಪತ್ನಿ ಹಾಗೂ ಮಕ್ಕಳ ನಿರ್ವಹಣೆಗೆ ವೆಚ್ಚ ಭರಿಸಬೇಕು ಎಂಬ ಪತಿಯ ಕಾರಣಗಳನ್ನು ತಿರಸ್ಕರಿಸಿರುವ ಪೀಠ, ನಿಮ್ಮ ವಾದ ಸರಣಿ ನೈತಿಕತೆಗೆ ವಿರುದ್ಧವಾದುದು ಎಂದಿದೆ. ಜೊತೆಗೆ ಅರ್ಜಿದಾರ ಪತಿ ರೆಹಮಾನ್​ಗೆ 25 ಸಾವಿರ ದಂಡ ವಿಧಿಸಿ ಅದನ್ನು ಪತ್ನಿಗೆ ಕೊಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿ, ಅರ್ಜಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರಿನ ಭುವನೇಶ್ವರಿ ನಗರದ ಎಜಾಜುರ್ ರೆಹಮಾನ್ 1991ರಲ್ಲಿ ಸಾಯಿರಾಬಾನು ಎಂಬುವರನ್ನು ಮದುವೆಯಾಗಿದ್ದರು. 8 ತಿಂಗಳ ಬಳಿಕ 5 ಸಾವಿರ ಮೆಹರ್ ನೀಡಿ ತಲಾಕ್ ನೀಡಿದ್ದರು. ಕೆಲ ವರ್ಷಗಳ ಬಳಿಕ 2002ರ ಆಗಸ್ಟ್ 24ರಂದು ಸಾಯಿರಾಬಾನು ಜೀವನಾಂಶ ಕೋರಿ ಸಿವಿಲ್ ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನಗರದ ಕೌಟುಂಬಿಕ ನ್ಯಾಯಾಲಯ 2011ರ ಆಗಸ್ಟ್ 12ರಂದು ತಿಂಗಳಿಗೆ ಮೂರು ಸಾವಿರದಂತೆ ಜೀವನಾಂಶ ನೀಡಲು ರೆಹಮಾನ್​ಗೆ ಆದೇಶಿಸಿತ್ತು. ಜೀವನಾಂಶ ನೀಡಲು ನಿರಾಕರಿಸಿದ್ದ ರೆಹಮಾನ್ ಹೈಕೋರ್ಟ್​ಗೆ ​​ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ನಷ್ಟದ ಸುಳಿಯಲ್ಲಿ BMTC: ಶಾಂತಿನಗರ ಟಿಟಿಎಂಸಿ ಕಟ್ಟಡ ಬ್ಯಾಂಕ್​​ನಲ್ಲಿ ಅಡ!

Last Updated : Oct 20, 2021, 5:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.