ETV Bharat / state

ಟ್ವಿಟರ್ ಖಾತೆಗಳ ರದ್ದು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಟ್ವಿಟರ್‌ನಲ್ಲಿ ಹಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿದ್ದ ಕ್ರಮ ಪಶ್ನಿಸಿ ಐಎನ್​ಐ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Apr 21, 2023, 4:45 PM IST

ಬೆಂಗಳೂರು : ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಅಂತಿಮ ಆದೇಶ ಕಾಯ್ದಿರಿಸಿದೆ. ತನ್ನ ಗ್ರಾಹಕರ ಖಾತೆಗಳ ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಟ್ವಿಟರ್ ಐಎನ್‌ಸಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಅಂತಿಮ ಆದೇಶ ಕಾಯ್ದಿರಿಸಿ ಮುಂದೂಡಿದ್ದಾರೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮನು ಕುಲಕರ್ಣಿ, ಸಂವಿಧಾನದ 226ನೇ ವಿಧಿಯು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಗೆ ಯಾವುದೇ ಸೀಮಿತವಿಲ್ಲ. ತನ್ನ ಹಕ್ಕುಗಳ ಸ್ಥಾಪನೆಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಸಂವಿಧಾನದ ಅಡಿ ದೊರೆತಿರುವ 14ನೇ ವಿಧಿಯ ಅಡಿ ಹಕ್ಕು ಕೇಳಬಹುದಾಗಿದೆ. ಹೀಗಾಗಿ, 226ನೇ ವಿಧಿಯಡಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಬಂಧ ವಿಧಿಸಲಾಗಿಲ್ಲ.

ಅಲ್ಲದೇ, ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸುವ ಆದೇಶಕ್ಕೆ ಸರ್ಕಾರ ಸೂಕ್ತ ಕಾರಣಗಳನ್ನು ನೀಡಿದರೆ ನಿರ್ದಿಷ್ಟ ವ್ಯಕ್ತಿಗಳಿಗೆ ಹೈಕೋರ್ಟ್ ಮುಂದೆ ಹೇಗೆ ಅದನ್ನು ಪ್ರಶ್ನಿಸಬೇಕು ಎಂಬುದರ ಜ್ಞಾನ ದೊರೆಯುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಸಕಾರಣ ನೀಡದೇ ಸ್ವೇಚ್ಛೆಯ ನಿರ್ಧಾರ ಕೈಗೊಂಡಿದ್ದು, ವೈಯಕ್ತಿಕವಾಗಿ ಕಾರಣ ನೀಡದೇ ಖಾತೆ ರದ್ದು ಪಡಿಸಿದ್ದಾರೆ. ಹೀಗಾಗಿ ಟ್ವಿಟರ್ ಸಂಸ್ಥೆ ಅರ್ಜಿ ಸಲ್ಲಿಸಿದೆ. ಅದನ್ನು ಪರಿಗಣಿಸಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ್ದ ಸಹಾಯಕ ಸಾಲಿಸಿಟರ್ ಜನರಲ್ ಆರ್ ಶಂಕರ್​ನಾರಾಯಣ್, ಟ್ವಿಟರ್​ ವಿದೇಶಿ ಕಾರ್ಪೊರೇಟ್ ಸಂಸ್ಥೆಯಾಗಿರುವುದರಿಂದ ಸಂವಿಧಾನದ 19ನೇ ವಿಧಿಯಡಿ ಪರಿಹಾರ ಪಡೆಯಲು ಅರ್ಹವಾಗಿಲ್ಲ. 14ನೇ ವಿಧಿಯಡಿ ಯಾವುದೇ ಸ್ವೇಚ್ಛಾಚಾರ ನಡೆದಿಲ್ಲ ಮತ್ತು ಐಟಿ ನಿಯಮ 69 (ಎ) ಅನ್ನು ಸೂಕ್ತವಾದ ರೀತಿಯಲ್ಲಿ ಪಾಲಿಸಲಾಗಿದೆ. ಟ್ವಿಟರ್ ಖಾತೆ ಹೊಂದಿರುವವರಿಗೆ ನೋಟಿಸ್ ನೀಡದಿರುವುದು ಇಡೀ ಪ್ರಕ್ರಿಯೆಯನ್ನು ದುರ್ಬಲಗೊಳಿಸುವುದಿಲ್ಲ. ಹೀಗಾಗಿ, ಯಾವುದೇ ರೀತಿಯ ಪರಿಹಾರ ಪಡೆಯಲು ಟ್ವಿಟರ್ ಅರ್ಹವಾಗಿಲ್ಲ.

ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿ ಟ್ವಿಟರ್​​​​ ಪ್ರಮುಖ ಸಾಮಾಜಿಕ ಮಧ್ಯಸ್ಥಿಕೆ ಮಾಧ್ಯಮವಾಗಿದ್ದು, ನಿಯಮ 4ರ ಪ್ರಕಾರ ಹೆಚ್ಚುವರಿ ಕಾರ್ಯತತ್ಪರತೆ ತೋರಬೇಕಿದೆ. ಖಾತೆದಾರರ ಮಾಹಿತಿ ಒದಗಿಸುವುದು ಮಧ್ಯಸ್ಥಿಕೆದಾರರ ಕರ್ತವ್ಯವಾಗಿದೆ. ಸರ್ಕಾರದ ನೋಟಿಸ್‌ಗಳಿಗೆ ಟ್ವಿಟರ್​ ಪ್ರತಿಕ್ರಿಯಿಸಿಲ್ಲ. ಈ ಮಧ್ಯೆ, ದುಷ್ಕರ್ಮಿಗಳು ಪ್ರಚೋದನಾಕಾರಿ ಮಾಹಿತಿ ಹಾಕುವುದನ್ನು ಮುಂದುವರಿಸಿದ್ದಾರೆ.

ಅಲ್ಲದೇ, ಭಾರತ ಆಕ್ರಮಿತ ಕಾಶ್ಮೀರದ ಕುರಿತು ಯಾರೋ ಒಬ್ಬರು ಊಹಾತ್ಮಕವಾದ ಪಾಕಿಸ್ತಾನ ಸರ್ಕಾರದ ಹೆಸರಿನಲ್ಲಿ ಟ್ವೀಟ್ ಮಾಡುತ್ತಾರೆ. ಮತ್ಯಾರೋ ಪ್ರಭಾಕರನ್ ಹೀರೋ (ಹತರಾದ ಎಲ್‌ಟಿಟಿಇ ಮುಖಂಡ), ಅವರು ಮರಳಿ ಬರುತ್ತಿದ್ದಾರೆ ಎನ್ನುತ್ತಾರೆ. ಇದೆಲ್ಲವೂ ಅಪಾಯಕಾರಿಯಾಗಿದ್ದು, ಗಲಭೆ ಸೃಷ್ಟಿಸಬಹುದು. ಇದರ ಮೇಲೆ ನಿಗಾ ಇಡುವುದು ಸರ್ಕಾರಕ್ಕೆ ಕಷ್ಟವಾಗಿದ್ದು, ಸುದೀರ್ಘವಾದ ಪ್ರತಿವಾದ ಆಲಿಸಿರುವ ನ್ಯಾಯಪೀಠ, ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

ಇದನ್ನೂ ಓದಿ : ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿ ಚುನಾವಣೆ: ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ಆದೇಶ ಎತ್ತಿ ಹಿಡಿದ ದ್ವಿ ಸದಸ್ಯ ಪೀಠ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.