ETV Bharat / state

High Court news: ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿ 6 ವರ್ಷಗಳ ಬಳಿಕ ದೂರು; ಪ್ರಕರಣ ರದ್ದು

High Court news: 6 ವರ್ಷಗಳ ಕಾಲ ದೈಹಿಕ ಸಂಬಂಧವಿಟ್ಟುಕೊಂಡು ನಂತರ ಅತ್ಯಾಚಾರ ಎಸಗಿದ್ದಾರೆ ಎಂದರೆ ಅದು ಅತ್ಯಾಚಾರವಾಗುವುದಿಲ್ಲ ಎಂದು ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Aug 10, 2023, 10:57 PM IST

ಬೆಂಗಳೂರು : ಆರು ವರ್ಷಗಳ ಕಾಲ ಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿದ ನಂತರ ಅತ್ಯಾಚಾರವೆಸಗಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿದ್ದು, ಬೆಂಗಳೂರಿನ ವ್ಯಕ್ತಿಯೊಬ್ಬರ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರು. ಈ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ನಡೆಸಿತು. ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆ ಹಾಗೂ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳನ್ನು ರದ್ದುಗೊಳಿಸಿ ಆದೇಶಿಸಿದೆ.

ಅಲ್ಲದೆ, ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಪರಿಚಿತರಾದ ಅರ್ಜಿದಾರರು ಮತ್ತು ದೂರುದಾರರು ಒಂದಲ್ಲ, ಎರಡಲ್ಲ, 6 ವರ್ಷ ದೈಹಿಕ ಹಾಗೂ ಲೈಂಗಿಕ ಸಂಬಂಧ ಹೊಂದಿದ್ದಾರೆ. ಒಬ್ಬರ ನಡುವೆ ಸಂಬಂಧ ಹಳಸಿದ ನಂತರ 2019ರಲ್ಲಿ ಅತ್ಯಾಚಾರ ಆರೋಪ ಮಾಡಲಾಗಿದೆ. ಯಾವುದೇ ಸಾಕ್ಷ್ಯಗಳಿಲ್ಲದೆ ಈ ರೀತಿ ಸುಮ್ಮನೆ ಅತ್ಯಾಚಾರ ಆರೋಪ ಮಾಡುವುದು ಸರಿಯಲ. ಇದು ಕಾನೂನಿನ ದುರುಪಯೋಗಕ್ಕೆ ಉದಾಹರಣೆಯಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ : ಗಂಡನ ಮೈಬಣ್ಣ ಅವಮಾನಿಸಿದ ಪತ್ನಿಯ ಧೋರಣೆ ಕೌರ್ಯವೆಂದ ಹೈಕೋರ್ಟ್: ವಿಚ್ಛೇದನ ಮಂಜೂರು

6 ವರ್ಷಗಳ ಕಾಲ ದೈಹಿಕ ಸಂಬಂಧವಿಟ್ಟುಕೊಂಡು ನಂತರ ಅತ್ಯಾಚಾರ ಎಸಗಿದ್ದಾರೆ ಎಂದರೆ ಅದು ಅತ್ಯಾಚಾರವಾಗುವುದಿಲ್ಲ ಮತ್ತು ಅದಕ್ಕೆ ಸೆಕ್ಷನ್ 376 ಅಡಿ ಶಿಕ್ಷೆಯನ್ನೂ ನೀಡಲಾಗದು. ಇನ್ನು ಕ್ರಿಮಿನಲ್ ಪ್ರಕರಣಗಳನ್ನು ಮುಂದುವರಿಸಲು ಬಿಟ್ಟರೆ, ಇದು ನ್ಯಾಯಾಂಗದ ದುರ್ಬಳಕೆಯಾಗಲಿದೆ. ಇದು ಸುಪ್ರೀಂಕೋರ್ಟ್ ಈ ಕುರಿತಂತೆ ನೀಡಿರುವ ತೀರ್ಪಿಗೆ ವಿರುದ್ಧವಾಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ : 2013ರಲ್ಲಿ ಅರ್ಜಿದಾರರು ಮತ್ತು ದೂರುದಾರರು ಫೇಸ್ ಬುಕ್ ಮೂಲಕ ಪರಿಚಿತರಾಗಿದ್ದರು. ಅಲ್ಲದೆ, ಅಗ್ಗಾಗ್ಗೆ ಪರಸ್ಪರ ಭೇಟಿ ಮಾಡುತ್ತಿದ್ದರು. ಹಾಗೆಯೇ ಸ್ನೇಹ ಸಂಬಂಧ ಬೆಳೆದು ದೈಹಿಕ ಸಂಬಂಧವನ್ನೂ ಬೆಳೆಸಿಕೊಂಡಿದ್ದರು. ಆದರೆ ಆ ವ್ಯಕ್ತಿ ಮದುವೆಯಾಗುವುದಾಗಿ ನೀಡಿದ್ದ ಭರವಸೆಯನ್ನು ಪಾಲಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಮಹಿಳೆ ಆತನ ವಿರುದ್ಧ ಅತ್ಯಾಚಾರವೆಸಗಿದ್ದಾನೆಂದು ಇಂದಿರಾನಗರ ಠಾಣೆಯಲ್ಲಿ 2021ರ ಮಾ.8 ರಂದು ದೂರು ನೀಡಿದ್ದರು.

ಇದನ್ನೂ ಓದಿ : ಹೆಂಡತಿಗೆ 25 ಸಾವಿರ ಪರಿಹಾರ ನೀಡಲು ನಿರಾಕರಣೆ: ಪತಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್​

ಪ್ರಕರಣ ಸಂಬಂಧ ಜಾಮೀನು ಪಡೆದಿದ್ದ ಆರೋಪಿ ದಾವಣಗೆರೆಯಲ್ಲಿ ನೆಲೆಸಿದ್ದರು. ಈ ಮಾಹಿತಿ ಪಡೆದ ಮಹಿಳೆ ದಾವಣಗೆರೆಗೆ ತೆರಳಿ ಅಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿತರು ಮತ್ತು ಮತ್ತೊಬ್ಬ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ಎರಡೂ ಪ್ರಕರಣಗಳಲ್ಲೂ ಆರೋಪಪಟ್ಟಿ ಸಲ್ಲಿಸಿದ್ದರು. ಅರ್ಜಿದಾರರು ಎರಡೂ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ : ವಿವಾಹಿತ ಮಹಿಳೆ ವಿರೋಧಿಸದಿದ್ದರೆ ಅಂತಹ ಸಂಬಂಧಕ್ಕೆ ಅಸಮ್ಮತಿ ಇದೆ ಎನ್ನಲಾಗಲ್ಲ: ಅಲಹಾಬಾದ್​ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.