ETV Bharat / state

ನೆರೆಹೊರೆಯವರ ಹೇಳಿಕೆಗಳನ್ನೇ ಸಾಕ್ಷ್ಯಗಳನ್ನಾಗಿ ಪರಿಗಣಿಸಿ ಶಿಕ್ಷೆ ನೀಡಲಾಗದು : ಹೈಕೋರ್ಟ್ - ETV Bharath Kannada news

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿದ ಹೈಕೋರ್ಟ್ - ನೆರೆಹೊರೆಯರ ಹೇಳಿಕೆಗಳು ಸಾಕ್ಷ್ಯ ಆಗದು - ಪ್ರತ್ಯಕ್ಷ ಸಾಕ್ಷಿಗಳನ್ನು ಕೋರ್ಟ್​ಗೆ ಒದಗಿಸಬೇಕು ಎಂದು ಆದೇಶ

High Court quashed the life sentence imposed by the trial court
ನೆರೆಹೊರೆಯರ ಹೇಳಿಕೆಗಳು ಸಾಕ್ಷ್ಯಗಳನ್ನಾಗಿ ಪರಿಗಣಿಸಿ ಶಿಕ್ಷೆ ನೀಡಲಾಗದು
author img

By

Published : Mar 20, 2023, 6:16 PM IST

Updated : Mar 20, 2023, 10:18 PM IST

ಬೆಂಗಳೂರು: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣದಿಂದ ವ್ಯಕ್ತಿಯನ್ನು ಕೊಂದಿದ್ದಾರೆ ಎಂಬುದಾಗಿ ನೆರೆಹೊರೆಯವರು ನೀಡಿದ ಹೇಳಿಕೆಯನ್ನೇ ಸಾಕ್ಷ್ಯವನ್ನಾಗಿ ಪರಿಗಣಿಸಿ ವ್ಯಕ್ತಿಯೊಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದು ಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ ಶಾಸ್ತ್ರಿ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದೆ.

ಅಲ್ಲದೆ, ನೆರೆಹೊರೆಯರ ಕಿವಿಮಾತುಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲು ಸಾಧ್ಯವಾಗುವುದಿಲ್ಲ. ಘಟನೆಗೆ ಸೂಕ್ತ ಸಾಕ್ಷ್ಯಾಧಾರಗಳು ಅಗತ್ಯವಿದ್ದು, ತನಿಖಾಧಿಕಾರಿಗಳು ಈ ಸಂಬಂಧ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಆರೋಪಿಯ ವಿರುದ್ಧದ ಪ್ರಕರಣವನ್ನು ರದ್ದು ಮಾಡುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದಲ್ಲಿ ತನಿಖಾಧಿಕಾರಿಗಳು ಆರೋಪವನ್ನು ಪುಷ್ಟೀಕರಿಸಲು ನೆರೆಹೊರೆಯರು ಹಾಗು ಸ್ಥಳೀಯ ಜಮೀನುದಾರರ ಹೇಳಿಕೆಗಳನ್ನು ಪರಿಗಣಿಸಿದ್ದಾರೆ. ಆದರೆ, ಇವು ಪ್ರತ್ಯೇಕ್ಷ ಸಾಕ್ಷ್ಯಗಳಲ್ಲ. ಅಲ್ಲದೆ, ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಅಷ್ಟೇ ಅಲ್ಲದೆ, ಮೃತ ಆರೋಪಿಯ ಪತ್ನಿಯ ನಡುವಿನ ಅಕ್ರಮ ಸಂಬಂಧದ ಬಗ್ಗೆ ಸಾಕ್ಷಿ ಹೇಳಿರುವವರು ಮತ್ಯಾರೋ ಮಾತಾಡಿಕೊಂಡಿರುವುದನ್ನು ಕೇಳಿಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಆದರೆ, ಅವರ ಹೇಳಿಕೆಗಳು ಆರೋಪ ಸಾಬೀತು ಪಡಿಸಲು ಪುಷ್ಟೀಕರಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಜೊತೆಗೆ, ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಮನೆಯಲ್ಲಿದ್ದನು ಎಂಬುದನ್ನು ಸಾಬೀತು ಪಡಿಸಲು ತನಿಖಾಧಿಕಾರಿಗಳು ವಿಫಲರಾಗಿದ್ದಾರೆ. ಜತೆಗೆ, ಘಟನೆ ದಿನ ಆರೋಪಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಘಟನೆಗೆ ಆರೋಪಿಯೇ ಕಾರಣ ಎಂಬುದು ತಿಳಿಯಲು ಸಾಧ್ಯವಿಲ್ಲ. ಅಲ್ಲದೆ, ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ತಪ್ಪಾಗಿದೆ. ನ್ಯಾಯಾಧೀಶರ ಈ ಎಲ್ಲ ಅಂಶಗಳನ್ನು ಸಾಕ್ಷ್ಯಾಧಾರಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿಲ್ಲ. ಹೀಗಾಗಿ ಆರೋಪಿಯನ್ನು ಆರೋಪ ಮುಕ್ತರನ್ನಾಗಿ ಮಾಡಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು ?: 2016ರಲ್ಲಿ ಬಾಗಲಕೋಟೆಯ ಹುನ್ಡೇಕರ್ ಗಲ್ಲಿಯಲ್ಲಿ ವ್ಯಕ್ತಿಯೊಬ್ಬರ ಕೊಲೆ ನಡೆದಿತ್ತು. ಈ ಘಟನೆ ಅರ್ಜಿದಾರರ ಮನೆಯಲ್ಲಿಯೇ ನಡೆದಿತ್ತು. ಜೊತೆಗೆ, ಈ ಸಂದರ್ಭದಲ್ಲಿ ಮೃತನು ಅರ್ಜಿದಾರರ ಮನೆಯಲ್ಲಿ ಮಲಗಿದ್ದನು ಮತ್ತು ಮೃತ ವ್ಯಕ್ತಿ ಅರ್ಜಿದಾರನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ನೆರೆಹೊರೆಯರು ಶಂಕೆ ವ್ಯಕ್ತಪಡಿಸಿದ್ದರು. ಇದನ್ನೇ ನಂಬಿದ ವ್ಯಕ್ತಿ ಆತನ ತಲೆಯ ಮೇಲೆ ರುಬ್ಬುವ ಕಲ್ಲುನ್ನು ಎತ್ತಿ ಹಾಕಿ ಸಾಯಿಸಿದ್ದನು. ಈ ಘಟನೆ ನಡೆದ ಸಂದರ್ಭದಲ್ಲಿ ಆರೋಪಿಯ ಪತ್ನಿ ಸ್ನಾನಗೃಹದಲ್ಲಿದ್ದರು ಎಂಬುದಾಗಿ ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗೆ 2021ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಘಟನೆ ನಡೆದ ಸಂದರ್ಭದಲ್ಲಿ ಅರ್ಜಿದಾರರು ಮನೆಯಲ್ಲಿ ಇರಲಿಲ್ಲ. ಮೃತ ವ್ಯಕ್ತಿ ಬೀದಿಯಲ್ಲಿ ನಡೆದ ಜಗಳದಲ್ಲಿ ಗಾಯಗೊಂಡಿದ್ದರು. ಬಳಿಕ ಅರ್ಜಿದಾರರ ಮನೆಗೆ ಬಂದು ಮಲಗಿದ್ದರು. ಈ ವೇಳೆ ರಕ್ತಸ್ರಾವ ಹೆಚ್ಚಾಗಿ ಮೃತಪಟ್ಟಿದ್ದರು ಎಂದು ವಿವರಿಸಿದ್ದರು.

ಇದನ್ನೂ ಓದಿ: ಭಾರತೀಯ ಎಂದು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ : ಎನ್‌ಆರ್‌ಐ ಶುಲ್ಕ ಪಾವತಿಸಿ ಅಮೆರಿಕಕ್ಕೆ ಹಿಂದಿರುಗಲು ಹೈಕೋರ್ಟ್ ಸೂಚನೆ

Last Updated : Mar 20, 2023, 10:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.