ಬೆಂಗಳೂರು: ವಕೀಲರು ಖುದ್ದು ನ್ಯಾಯಾಲಯಕ್ಕೆ ತೆರಳಿ ಅರ್ಜಿ ದಾಖಲಿಸುವುದಕ್ಕೆ ಅನುಮತಿ ನೀಡಲು ಹೈಕೋರ್ಟ್ ತೀರ್ಮಾನಿಸಿದೆ.
ವಕೀಲರು ಖುದ್ದು ಕೋರ್ಟ್‌ಗೆ ತೆರಳಿ ಅರ್ಜಿ ದಾಖಲಿಸುವ ಪ್ರಕ್ರಿಯೆ ಮಾ. 24ರಂದು ಲಾಕ್ಡೌನ್ ಘೋಷಣೆಯಾದ ದಿನದಿಂದ ಸ್ಥಗಿತಗೊಂಡಿತ್ತು. ತುರ್ತು ಅರ್ಜಿಗಳನ್ನು ಇ-ಫೈಲಿಂಗ್ ಮೂಲಕ ದಾಖಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಲಾಕ್ಡೌನ್ ಸಡಿಲಿಕೆಯಾದ ಕಾರಣ ಮೇ 13ರಿಂದ ಈ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲು ಹೈಕೋರ್ಟ್ ತೀರ್ಮಾನಿಸಿದೆ. ಅದರಂತೆ ಮೇ 13, ಮೇ 14 ಮತ್ತು 15ರಂದು ಬೆಳಗ್ಗೆ 11ರಿಂದ ವಕೀಲರು, ವಕೀಲರ ಗುಮಾಸ್ತರು ಮತ್ತು ಪಾರ್ಟಿ ಇನ್ ಪರ್ಸನ್ಸ್ ನ್ಯಾಯಾಲಯಕ್ಕೆ ತೆರಳಿ ಅರ್ಜಿ ದಾಖಲಿಸಬಹುದಾಗಿದೆ. ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನಿರ್ದೇಶನದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ನೋಟಿಫಿಕೇಷನ್ ಹೊರಡಿಸಿದ್ದಾರೆ.
ಅರ್ಜಿಗಳನ್ನು ದಾಖಲಿಸುವ ಸಮಯ ನಿಗದಿಗೆ ಇ-ಮೇಲ್ ಮೂಲಕ ಅನುಮತಿ ಕೋರಬೇಕು. ಹೈಕೋರ್ಟ್ ಸಮಯ ನಿಗದಿಪಡಿಸಿ, ಆ ಕುರಿತು ಮಾಹಿತಿಯನ್ನು ಇ-ಮೇಲ್ ಮೂಲಕ ತಿಳಿಸಲಿದೆ. ಅರ್ಜಿ ದಾಖಲಿಸಲು ಬರುವವರಿಗೆ ಹೈಕೋರ್ಟ್ ಗೇಟ್ ಸಂಖ್ಯೆ-5ರಿಂದ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ ಹಾಗೂ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಇಲ್ಲದವರಿಗೆ ಮತ್ತು ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ. ಅರ್ಜಿ ದಾಖಲಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿದೆ.
ನೇರವಾಗಿ ಅರ್ಜಿ ಸಲ್ಲಿಸಲು ವಕೀಲರಿಗೆ ಹೈಕೋರ್ಟ್ ಅನುಮತಿ - ನೇರವಾಗಿ ಅರ್ಜಿ ಸಲ್ಲಿಸಲು ಹೈಕೋರ್ಟ್ ಅನುಮತಿ
ವಕೀಲರು ಖುದ್ದು ಕೋರ್ಟ್‌ಗೆ ತೆರಳಿ ಅರ್ಜಿ ದಾಖಲಿಸುವ ಪ್ರಕ್ರಿಯೆ ಮಾ. 24ರಂದು ಲಾಕ್ಡೌನ್ ಘೋಷಣೆಯಾದ ದಿನದಿಂದ ಸ್ಥಗಿತಗೊಂಡಿತ್ತು. ತುರ್ತು ಅರ್ಜಿಗಳನ್ನು ಇ-ಫೈಲಿಂಗ್ ಮೂಲಕ ದಾಖಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಲಾಕ್ಡೌನ್ ಸಡಿಲಿಕೆಯಾದ ಕಾರಣ ಮೇ 13ರಿಂದ ಈ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲು ಹೈಕೋರ್ಟ್ ತೀರ್ಮಾನಿಸಿದೆ.