ETV Bharat / state

ಅಪಘಾತದಲ್ಲಿ ಎರಡೂ ಕಾಲು ಮುರಿದ ವ್ಯಕ್ತಿಗೆ 19. 90 ಲಕ್ಷ ರೂ ಪರಿಹಾರ ನೀಡಲು ಹೈಕೋರ್ಟ್​ ಆದೇಶ - ಬಜಾಜ್ ಅಲೆಯಾನ್ಸ್ ಜನರಲ್ ಇನ್ಷೂರೆನ್ಸ್

ಮಹೇಂದ್ರ ಬೊಲೋರೊ ಸರಕು ಸಾಗಾಣೆ ವಾಹನ ಹಿಮ್ಮುಖವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಎರಡೂ ಕಾಲುಗಳನ್ನು ಕಳೆದುಕೊಂಡ ವೃದ್ದನ ನೆರವಿಗೆ ಬರುವಂತೆ ಹೈಕೋರ್ಟ್​ ವಿಮಾ ಕಂಪೆನಿಗೆ ಆದೇಶಿಸಿದೆ.

ಹೈಕೋರ್ಟ್​
ಹೈಕೋರ್ಟ್​
author img

By

Published : Sep 4, 2022, 10:58 PM IST

ಬೆಂಗಳೂರು: ಪರಿಚಿತರೊಬ್ಬರ ನಿವಾಸದಿಂದ ಮನೆಗೆ ಹಿಂದಿರುಗುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದು ಎರಡೂ ಕಾಲುಗಳು ಮುರಿದಿದ್ದ ವೃದ್ಧನ ನೆರವಿಗೆ ಮುಂದಾಗಿರುವ ಹೈಕೋರ್ಟ್ 16.90 ಲಕ್ಷ ರೂ. ಗಳ ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿ 14 ಲಕ್ಷ ರೂಗಳ ಪರಿಹಾರ ನೀಡುವಂತೆ ವಿಚಾರಣಾ ನ್ಯಾಯಾಲಯ ಆದೇಶ ಮಾಡಿರುವುದನ್ನ ಪ್ರಶ್ನಿಸಿ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದ ಡಂಕಣಾಚಾರಿ (81) ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾ. ಎನ್. ಎಸ್ ಸಂಜಯ್ ಗೌಡ ಅವರಿದ್ದ ನ್ಯಾಯಪೀಠ, ಹೆಚ್ಚುವರಿಯಾಗಿ 2 ಲಕ್ಷ ರೂಗಳನ್ನು ಪಾವತಿಸಲು ಸೂಚಿಸಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೆಚ್ಚವಾಗಿ 8. 90 ಲಕ್ಷ ರೂ ಆಸ್ಪತ್ರೆಯಲ್ಲಿ ಶುಶ್ರೂಷೆ ಮತ್ತು ಆಹಾರದ ವೆಚ್ಚವಾಗಿ 1 ಲಕ್ಷ ರೂ. ಘಟನೆಯಿಂದ ನೋವು ಅನುಭವಿಸಿದ ಪರಿಣಾಮ 2 ಲಕ್ಷ ರೂ. ಗಾಯದಿಂದ ಆಗಿರುವ ಅಂಗವೈಕಲ್ಯಕ್ಕೆ 2 ಲಕ್ಷ ಹಾಗೂ ಇತರೆ ವೆಚ್ಚಗಳಿಗೆ 2 ಲಕ್ಷ ರೂ ಸೇರಿ ಒಟ್ಟು 16,90,000 ಲಕ್ಷ ರೂ ಗಳನ್ನು ಪಾವತಿ ಮಾಡಲು ವಿಮಾ ಕಂಪೆನಿಗೆ ಸೂಚನೆ ನೀಡಿ ಹೈಕೋರ್ಟ್ ಆದೇಶಿಸಿದೆ.

ಡಂಕಣಾಚಾರಿ ಅವರು 2018 ಮಾರ್ಚ್ 3 ರಂದು ಪರಿಚಿತರಾದ ಸತ್ಯನಾರಾಯಣ ರಾವ್ ಎಂಬುವರ ಮನೆಯಿಂದ ತಮ್ಮ ನಿವಾಸದತ್ತ ಹಿಂದಿರುಗುತ್ತಿದ್ದರು. ಈ ಸಂದರ್ಭಲ್ಲಿ ಬಜಾಜ್ ಅಲೆಯಾನ್ಸ್ ಜನರಲ್ ಇನ್ಷೂರೆನ್ಸ್ ಹೊಂದಿದ್ದ ಮಹೇಂದ್ರ ಬೊಲೋರೊ ಸರಕು ಸಾಗಾಣೆ ವಾಹನ ವೇಗವಾಗಿ ಹಿಮ್ಮುಖವಾಗಿ ಬಂದು ಡಿಕ್ಕಿ ಹೊಡೆದಿದೆ.

ತಕ್ಷಣ ಡಂಕಣಾಚಾರಿ ನೆಲಕ್ಕೆ ಬಿದ್ದಿದ್ದು, ಎರಡೂ ಕಾಲುಗಳ ಮೇಲೆ ವಾಹನ ಚಕ್ರ ಹರಿದು ಮೂಳೆಗಳು ಮುರಿದಿದ್ದವು. ಬಳಿಕ ಡಂಕಣಾಚಾರಿಯವರನ್ನು ದೊಡ್ಡಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಆಸ್ಪತ್ರೆಗಳಲ್ಲಿ ಸುಮಾರು 25 ದಿನಕ್ಕೂ ಹೆಚ್ಚು ಕಾಲ ಚಿಕಿತ್ಸೆ ಕೊಡಿಸಲಾಗಿತ್ತು.

ಈ ನಡುವೆ ಪರಿಹಾರ ಕೋರಿ ಡಂಕಣಾಚಾರಿ ಮೋಟಾರು ವಾಹನ ಅಪಘಾತದ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ನ್ಯಾಯಾಧೀಶರು ಸಾಕ್ಷಾಧಾರಗಳನ್ನು ಪರಿಶೀಲಿಸಿ 14. 40 ಲಕ್ಷ ರೂಗಳನ್ನು ಪಾವತಿಸಲು ಸೂಚನೆ ನೀಡಿದ್ದರು. ಇದಕ್ಕೆ ತೃಪ್ತರಾಗದ ಡಂಕಣಾಚಾರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಹೆಚ್ಚುವರಿ ಪರಿಹಾರ ಕೊಡಿಸಲು ಮನವಿ ಮಾಡಿದ್ದರು. ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ 16,90,000 ರೂಗಳನ್ನು ಪರಿಹಾರ ರೂಪದಲ್ಲಿ ನೀಡಲು ವಿಮಾ ಕಂಪೆನಿಗೆ ಸೂಚನೆ ನೀಡಿ ಆದೇಶಿಸಿದೆ.

ಓದಿ: ಜಿಲ್ಲಾ ನ್ಯಾಯಾಧೀಶರುಗಳ ವರ್ಗಾವಣೆ: ಬೆಂಗಳೂರಿಗೆ ನ್ಯಾ.ರಾಮಚಂದ್ರ ಹುದ್ದಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.