ETV Bharat / state

ಬೆಳಗಾವಿಯಲ್ಲಿ ಎಸ್‌ಟಿಪಿ ಕಾಮಗಾರಿ ಸ್ಥಳಾಂತರ : ಲೋಕಾಯುಕ್ತ ತನಿಖೆಗೆ ವಹಿಸಿ ಹೈಕೋರ್ಟ್ ಆದೇಶ - High Court order to investigate STP to lokayukta

ಅಲರವಾಡದಲ್ಲಿ ಕಾಮಗಾರಿಗೆ 2.28 ಕೋಟಿ ರೂ. ಖರ್ಚು ಮಾಡಿದ ನಂತರ ಯೋಜನೆ ಸ್ಥಗಿತಗೊಳಿಸಿರುವುದನ್ನು ಆಕ್ಷೇಪಿಸಿದ್ದ ಪೀಠ, ಏಕೆ ಯೋಜನೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು ಎಂದು ಪ್ರಶ್ನಿಸಿತು..

high-court
ಹೈಕೋರ್ಟ್
author img

By

Published : Sep 27, 2021, 8:05 PM IST

ಬೆಂಗಳೂರು : ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅಲರವಾಡದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆಗೆ ಎರಡು ಕೋಟಿ ರೂ. ಖರ್ಚು ಮಾಡಿದ ನಂತರ ಕಾಮಗಾರಿ ಸ್ಥಗಿತಗೊಳಿಸಿ ಮತ್ತೊಂದು ಜಾಗದಲ್ಲಿ ಹೊಸ ಘಟಕ ಸ್ಥಾಪಿಸಲು ಕಾಮಗಾರಿ ಕೈಗೊಂಡ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಲೋಕಾಯುಕ್ತಕ್ಕೆ ವಹಿಸಿದೆ.

ಈ ವಿಚಾರವಾಗಿ ನಾರಾಯಣ ಬೈರು ಸಾವಂತ್ ಸೇರಿ ಐವರು ಸ್ಥಳೀಯರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಹಂಗಾಮಿ ಸಿಜೆ ಎಸ್ ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಪಾಲಿಕೆ ಆಯುಕ್ತರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹಣ ವೆಚ್ಚ ಮಾಡಿಲ್ಲ ಎಂದು ಹೇಳಲಾಗಿದೆ.

ಆದರೆ, ಬೇರೆ ದಾಖಲೆಗಳನ್ನು ಪರಿಶೀಲಿಸಿದರೆ ಹಣ ಖರ್ಚಾಗಿರುವುದು ಗೊತ್ತಾಗುತ್ತಿದೆ. ಇದೊಂದು ಗಂಭೀರ ವಿಚಾರ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ, ಹಣ ಖರ್ಚಾಗಿದ್ದರೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ನ.25ಕ್ಕೆ ಮುಂದೂಡಿತು.

ಅಲ್ಲದೇ, ಯೋಜನೆಯನ್ನು ಅಲಾರವಾಡದಿಂದ ಹಲಗೆ ಗ್ರಾಮಕ್ಕೆ ಸ್ಥಳಾಂತರ ಮಾಡಿದ್ದು ಏಕೆ? ಎಂಬ ಬಗ್ಗೆ ಪಾಲಿಕೆ ಆಯುಕ್ತರು ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಪೀಠ ಸೂಚನೆ ನೀಡಿತು.

ಅಲರವಾಡದಲ್ಲಿ ಕಾಮಗಾರಿಗೆ 2.28 ಕೋಟಿ ರೂ. ಖರ್ಚು ಮಾಡಿದ ನಂತರ ಯೋಜನೆ ಸ್ಥಗಿತಗೊಳಿಸಿರುವುದನ್ನು ಆಕ್ಷೇಪಿಸಿದ್ದ ಪೀಠ, ಏಕೆ ಯೋಜನೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಆ 2.28 ಕೋಟಿ ರೂ. ಸರ್ಕಾರದ ಹಣ ವ್ಯರ್ಥವಾಗಲಿಲ್ಲವೇ?. ಸಾರ್ವಜನಿಕರ ಹಣವನ್ನು ಹೀಗೆ ಪೋಲು ಮಾಡುವುದು ಎಷ್ಟು ಸೂಕ್ತ?. ಘಟಕ ಸ್ಥಾಪನೆಗೆ ಯಾವುದು ಸೂಕ್ತ ಸ್ಥಳ ಎಂಬ ಬಗ್ಗೆ ಪರಿಶೀಲಿಸದೆ ಯೋಜನೆ ಕೈಗೊಳ್ಳಲಾಯಿತೇ?. ಆ ಬಗ್ಗೆ ಪಾಲಿಕೆ ವಿವೇಚನೆ ಬಳಸಲಿಲ್ಲವೇ? ಎಂದು ಪ್ರಶ್ನಿಸಿತು.

ಓದಿ: ದಿವ್ಯಾಂಗರಿಗೆ ಶೇ.5ರಷ್ಟು ನಿವೇಶನ ಮೀಸಲು : ಬಿಡಿಎ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.