ETV Bharat / state

ಸಿಇಟಿ ಅಂಕಗಳ ಗೊಂದಲ: ಸರಾಸರಿ ಅಂಕ ಕಡಿಮೆ ಮಾಡಿ ಫಲಿತಾಂಶ ಪ್ರಕಟಿಸಿ ಎಂದ ಹೈಕೋರ್ಟ್ - ಕೆಇಎ

2022-23ನೇ ಸಾಲಿನ ಸಿಇಟಿ ಅಂಕಗಳ ಗೊಂದಲ ವಿಚಾರದಲ್ಲಿ 2020-21ನೇ ಸಾಲಿನ ಪುನರಾವರ್ತಿತ ಅಭ್ಯರ್ಥಿಗಳ ಒಟ್ಟು ಪಡೆದ ಅಂಕದಲ್ಲಿ ಕಡಿತ ಮಾಡಿ ಪಿಯುಸಿ ಮತ್ತು ಸಿಇಟಿಯ ಅಂಕಗಳಲ್ಲಿ 50:50ರಂತೆ ಪರಿಗಣಿಸುವಂತೆ ಹೈಕೋರ್ಟ್ ಸೂಚಿಸಿದೆ.

high-court-order-on-cet-marks-issue
ಸಿಇಟಿ ಅಂಕಗಳ ಗೊಂದಲ: ಸರಾಸರಿ ಅಂಕ ಕಡಿಮೆ ಮಾಡಿ ಫಲಿತಾಂಶ ಪ್ರಕಟಿಸಿ ಎಂದ ಹೈಕೋರ್ಟ್
author img

By

Published : Sep 23, 2022, 12:36 PM IST

Updated : Sep 23, 2022, 1:20 PM IST

ಬೆಂಗಳೂರು: 2022-23ನೇ ಸಾಲಿನ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಗೆ ಹಾಜರಾದ 2020-21ನೇ ಸಾಲಿನ ಪುನರಾವರ್ತಿತ ಅಭ್ಯರ್ಥಿಗಳ ಒಟ್ಟು ಪಡೆದ ಅಂಕದಲ್ಲಿ ಸರಾಸರಿ 6 ಅಂಕಗಳನ್ನು ಕಡಿತ ಮಾಡಿ ಪಿಯುಸಿ ಮತ್ತು ಸಿಇಟಿಯ ಅಂಕಗಳಲ್ಲಿ 50:50ರಂತೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಸೂಚನೆ ನೀಡಿದೆ.

ಸಿಇಟಿ ಪರೀಕ್ಷೆಗೆ ಪುನರಾವರ್ತಿತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಅಂಕಗಳನ್ನು ಪರಿಗಣಿಸುವಂತೆ ಏಕ ಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಆಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.

2020-21ನೇ ಸಾಲಿನಲ್ಲಿ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದಲ್ಲಿ 6, ರಸಾಯನಶಾಸ್ತ್ರದಲ್ಲಿ 5 ಮತ್ತು ಗಣಿತಶಾಸ್ತ್ರದಲ್ಲಿ 7 ಅಂಕಗಳನ್ನು ಕಡಿತ ಮಾಡಬೇಕು. ಇದು ಒಟ್ಟು ಅಂಕಗಳಲ್ಲಿ ಸರಾಸರಿ 6 ಅಂಕಗಳು ಕಡಿಮೆ ಆಗಲಿದೆ. ಆ ಬಳಿಕ ಪಿಯುಸಿಯಲ್ಲಿ ಪಡೆದ ಅಂಕಗಳಲ್ಲಿ ಶೇ.50 ಮತ್ತು ಸಿಇಟಿಯಲ್ಲಿ ಪಡೆದ ಶೇ.50ರಂತೆ ಪರಿಗಣಿಸಿ ಫಲಿತಾಂಶ ಪ್ರಕಟಿಸಬೇಕು. ಅದರಂತೆ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಬೇಕು ಎಂದು ಪೀಠ ಸೂಚಿಸಿದೆ.

ಅಲ್ಲದೇ, ಈ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಐಟಿ ಸಂಬಂಧಿತ ವಿಷಯದಲ್ಲಿ ಕಳೆದ ಸಾಲಿನಲ್ಲಿದ್ದ ಸೀಟುಗಳನ್ನು ಈ ವರ್ಷ ಶೇ.10ರಷ್ಟು ಹೆಚ್ಚಳ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಈ ಅಂಶವನ್ನು ಜಾರಿಗೊಳಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ತಿಳಿಸಿದೆ.

ಸಮಿತಿ ರಚಿಸಿದ್ದ ಸರ್ಕಾರ: ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಬಿ. ತಿಮ್ಮೇಗೌಡರ ಅಧ್ಯಕ್ಷತೆಯ ಐವರ ಸಮಿತಿ ರಚನೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಈ ಸಮಿತಿ ವರದಿ ನೀಡಿತ್ತು. ವರದಿಯಲ್ಲಿನ ಎರಡನೇ ಸಲಹೆಯನ್ನು ನ್ಯಾಯಪೀಠ ಪರಿಗಣಿಸಿದೆ.

ಪ್ರಕರಣದ ಹಿನ್ನೆಲೆ: ಕೊರೊನಾ ಸಾಂಕ್ರಾಮಿಕದ ಕಾರಣದಿಂದ 2020-21ನೇ ಸಾಲಿನಲ್ಲಿ ಪಿಯುಸಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳನ್ನು 2021-22ನೇ ಸಾಲಿನ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಟಿಪ್ಪಣಿ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಈಶ್ವರ್​ ಆರ್​. ಸೇರಿ ಮತ್ತಿತರರು ಹೈಕೋರ್ಟ್​ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಕೆಇಎ ಟಿಪ್ಪಣಿ ರದ್ದುಪಡಿಸಿತ್ತು.

ಅಲ್ಲದೇ, ಸಿಇಟಿ ರಿಪೀಟರ್ಸ್​ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಶೇ.50ರಷ್ಟು ಅಂಕ ಮತ್ತು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇ.50ರಷ್ಟು ಅಂಕಗಳನ್ನು ಪರಿಗಣಿಸಿ ಸಿಇಟಿ ರ‍್ಯಾಂಕಿಂಗ್​ ಪಟ್ಟಿ ಪ್ರಕಟಿಸುವಂತೆ ಕೆಇಎಗೆ ಹೈಕೋರ್ಟ್​ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮತ್ತು ಕೆಇಎ ಮೇಲ್ಮನವಿ ಸಲ್ಲಿಸಿತ್ತು.

ಇದನ್ನೂ ಓದಿ: ಲಂಚ ಪ್ರಕರಣದ ತನಿಖೆಗೆ ತಡೆ ನೀಡಿದ ಸುಪ್ರೀಂಕೋರ್ಟ್​.. ಬಿಎಸ್​​ವೈಗೆ ತಾತ್ಕಾಲಿಕ ರಿಲೀಫ್​

Last Updated : Sep 23, 2022, 1:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.