ETV Bharat / state

ಹೈ.ಕ ಮೀಸಲು ಅಡಿ ಬಡ್ತಿ ಪ್ರಶ್ನಿಸಿ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - ಬೆಂಗಳೂರು ಲೇಟೆಸ್ಟ್​ ಅಪ್ಡೇಟ್​ ನ್ಯೂಸ್​

ಸಂವಿಧಾನದ ವಿಧಿ 371(ಜೆ)(2) (98ನೇ ತಿದ್ದುಪಡಿ) ಮೂಲಕ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಮೀಸಲು ಅಡಿಯಲ್ಲಿ ಉದ್ಯೋಗ ನೇಮಕಾತಿ ಮತ್ತು ಬಡ್ತಿ ನೀಡುವ ಕ್ರಮ ಪ್ರಶ್ನಿಸಿ ಕೆಪಿಸಿಎಲ್ ಎಂಜಿನಿಯರ್​​ಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

High Court notice to state Govt
ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
author img

By

Published : Dec 29, 2020, 3:04 PM IST

ಬೆಂಗಳೂರು: ಹೈದರಾಬಾದ್ ಕರ್ನಾಟಕ ಮೀಸಲು ಅಡಿಯಲ್ಲಿ ಬಡ್ತಿ ನೀಡಿರುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ(ಕೆಪಿಸಿಎಲ್) ಕಾರ್ಯ ನಿರ್ವಹಿಸುತ್ತಿರುವ 119 ಎಂಜಿನಿಯರ್​ಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸಂವಿಧಾನದ ವಿಧಿ 371(ಜೆ)(2) (98ನೇ ತಿದ್ದುಪಡಿ) ಮೂಲಕ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಮೀಸಲು ಅಡಿಯಲ್ಲಿ ಉದ್ಯೋಗ ನೇಮಕಾತಿ ಮತ್ತು ಬಡ್ತಿ ನೀಡುವ ಕ್ರಮ ಪ್ರಶ್ನಿಸಿ ಕೆಪಿಸಿಎಲ್ ಎಂಜಿನಿಯರ್​​ಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಆರ್. ದೇವದಾಸ್ ಅವರಿದ್ದ ಪೀಠ ಈ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ಹೈ.ಕ ಮೀಸಲು ಅಡಿ 110 ಮಂದಿ ಎಂಜಿನಿಯರ್​​ಗಳಿಗೆ ನೀಡಿರುವ ಬಡ್ತಿಯು ಅರ್ಜಿ ಸಂಬಂಧ ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಮಧ್ಯಂತರ ಆದೇಶ ಮಾಡಿದೆ.

ಓದಿ: 2020ರಲ್ಲಿ ಹೈಕೋರ್ಟ್ ನೀಡಿದ ಪ್ರಮುಖ ಮತ್ತು ಗಮನಾರ್ಹ ತೀರ್ಪುಗಳ ಸಂಪೂರ್ಣ ಮಾಹಿತಿ

ಅರ್ಜಿದಾರರು, ಸಂವಿಧಾನದ ವಿಧಿ (16)(4) 16(4ಎ) 16(4ಬಿ) ಅಡಿಯಲ್ಲಿ ಎಸ್​ಸಿ, ಎಸ್​ಟಿ ಮತ್ತು ಒಬಿಸಿ ವರ್ಗಕ್ಕೆ ಮೀಸಲು ಕಲ್ಪಿಸಲಾಗಿದೆ. ಈ ನಿಯಮಗಳ ಅಡಿಯಲ್ಲಿಯೇ ನೇಮಕಾತಿ ಮತ್ತು ಬಡ್ತಿಯಲ್ಲಿ ಮೀಸಲು ಕಲ್ಪಿಸಲಾಗುತ್ತಿದೆ. ಇವೇ ನಿಯಮಗಳ ಅಡಿಯಲ್ಲಿ ಪ್ರಾದೇಶಿಕವಾಗಿ ಹೈ.ಕ. ವಲಯದಿಂದ ಆಯ್ಕೆಯಾದ ನೌಕರರಿಗೆ ಸೇವಾ ಹಿರಿತನ ಬದಿಗಿಟ್ಟು ಬಡ್ತಿ ನೀಡುವುದು ಸಂವಿಧಾನದ ವಿಧಿ 14 ಮತ್ತು 15ಕ್ಕೆ ವಿರುದ್ಧವಾಗಿದೆ. ಆದ್ದರಿಂದ ಕೆಪಿಸಿಎಲ್ ಉದ್ಯೋಗಿಗಳಿಗೆ ನೀಡಿರುವ ಬಡ್ತಿಯನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.