ETV Bharat / state

ಮ್ಯಾನ್​ಹೋಲ್​ ಶುಚಿಗೊಳಿಸುತ್ತಿದ್ದ ಪತಿ ಸಾವು: ನಿವೇಶನ ಹಿಂಪಡೆದ ಗ್ರಾ,ಪಂಗೆ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

author img

By

Published : Feb 18, 2023, 9:44 PM IST

ಯಲಹಂಕದ ಜಲಮಂಡಳಿಯ ಮ್ಯಾನ್ಯುಯಲ್ ಸ್ಕ್ಯಾವೇಂಜಿಂಗ್ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕ ಉಸಿರುಗಟ್ಟಿ ಸಾವು ಪ್ರಕರಣ - ಮೃತರ ಪತ್ನಿಗೆ ದೊಡ್ಡಬೆಳವಂಗಲ ಗ್ರಾಪಂ ನಿವೇಶನ ಮಂಜೂರು ಮಾಡಿ, ರದ್ದುಗೊಳಿಸಿತ್ತು- ಗ್ರಾಮ ಪಂಚಾಯಿತಿ ಕ್ರಮಕ್ಕೆ ಹೈಕೋರ್ಟ್​ ತರಾಟೆ

high court
ಹೈಕೋರ್ಟ್

ಬೆಂಗಳೂರು: ಮ್ಯಾನ್ ಹೋಲ್ ಶುಚಿಗೊಳಿಸುವಾಗ ಕಾರ್ಮಿಕನೊಬ್ಬ ಸಾವಿಗೀಡಾದ ಪ್ರಕರಣದಲ್ಲಿ ಮೃತನ ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳವಂಗಲ ಗ್ರಾಮ ಪಂಚಾಯ್ತಿಯನ್ನೂ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮೃತ ಕಾರ್ಮಿಕ ನರಸಿಂಹಯ್ಯನ ಪತ್ನಿ ನಾಗಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಆಲಿಸಿದ ನ್ಯಾ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ಮೃತರ ಪತ್ನಿಗೆ ಮನೆ ಸಹಿತ ನಿವೇಶನ ಮರು ಮಂಜೂರು ಮಾಡುವಂತೆ ಸೂಚನೆ ನೀಡಿದೆ. ಅಲ್ಲದೇ, ಉಳ್ಳವರು ಮತ್ತು ಉಳ್ಳದವರ ನಡುವಿನ ಹಕ್ಕುಗಳ ಕುರಿತು ಪ್ರಸ್ತಾಪಿಸಿ, ಉಳ್ಳವರು ಉಳ್ಳದವರ ಹಕ್ಕುಗಳನ್ನು ದಮನ ಮಾಡುವುದನ್ನು ಕೈಬಿಡಬೇಕು ಎಂದು ಸೂಚನೆ ನೀಡಿದೆ.

ಜಿಲ್ಲಾಧಿಕಾರಿ ಪಿಡಿಒಗೆ ದಂಡ: ಅರ್ಜಿದಾರರಿಗೆ ಕಟ್ಟಿದ ಮನೆಯನ್ನೇ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಜತೆಗೆ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೂವರು ಸೇರಿ 50 ಸಾವಿರ ರೂ. ಮತ್ತು ಗ್ರಾಮ ಪಂಚಾತಿ 50 ಸಾವಿರ ರೂಪಾಯಿಗಳನ್ನು ಸೇರಿಸಿ 1 ಲಕ್ಷ ರೂ.ಗಳನ್ನು ಅರ್ಜಿದಾರರಾರಿಗೆ ನೀಡಬೇಕು ಎಂದು ನ್ಯಾಯಾಲಯ ನಿರ್ದೆಶನ ನೀಡಿದೆ.

ಪಂಚಾಯಿತಿ ಕ್ರಮಕ್ಕೆ ನ್ಯಾಯಪೀಠ ಅಸಮಾಧಾನ: ನಿವೇಶನದಲ್ಲಿ ಮನೆ ಕಟ್ಟಿಲ್ಲವೆಂದು ಹಂಚಿಕೆ ರದ್ದು ಪಡಿಸಿದ್ದ ಗ್ರಾಮ ಪಂಚಾಯಿತಿ ಕ್ರಮಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿ, ಬಿಡಬ್ಲು ಎಸ್‌ಎಸ್‌ಬಿ ನಿರ್ಲಕ್ಷ್ಯದಿಂದ ನರಸಿಂಹಯ್ಯ ಸಾವನ್ನಪ್ಪಿದ್ದಾರೆ. ಅದರೆ ಅವರಿಗೆ ನೀಡಿರುವ ನಿವೇಶನ ರದ್ದು ಮಾಡಿರುವ ಬಗ್ಗೆ ಗ್ರಾ. ಪಂ ಧೋರಣೆ ನ್ಯಾಯಸಮ್ಮತವಲ್ಲ ಎಂದು ತಿಳಿಸಿದೆ.

ಅರ್ಜಿದಾರರನ್ನು ಅವರ ಸ್ವತ್ತಿನಿಂದ (ನಿವೇಶನ)ದಿಂದ ಒಕ್ಕಲೆಬ್ಬಿಸಬಾರದು ಮತ್ತು ಅವರಿಗೆ ಮ್ಯಾನ್ಯುಯಲ್ ಸ್ಕ್ಯಾವೇಂಜರ್ಸ್‌ ಪುನರ್ ವಸತಿ ಕಾಯಿದೆ ಸೆಕ್ಷನ್ 13ರ ಪ್ರಕಾರ ಮ್ಯಾನ್ ಹೋಲ್ ಶುಚಿಗೊಳಿಸಲು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ನಿಷೇಧವಿದೆ. ಆದರೂ ನೇಮಕ ಮಾಡಿಕೊಂಡಿದ್ದಕ್ಕಾಗಿ ಅರ್ಜಿದಾರರಿಗೆ ಆರ್ಥಿಕ ನೆರವನ್ನು ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

2008ರ ನ.14ರಂದು ಬೆಂಗಳೂರಿನ ಯಲಹಂಕದಲ್ಲಿ ಜಲಮಂಡಳಿಯ ಯೋಜನೆಯೊಂದರಲ್ಲಿ ಮ್ಯಾನ್ಯುಯಲ್ ಸ್ಕ್ಯಾವೇಂಜಿಂಗ್ ಕೆಲಸದಲ್ಲಿ ತೊಡಗಿದ್ದಾಗ ಅರ್ಜಿದಾದರರ ಪತಿ ಉಸಿರುಗಟ್ಟಿ ಸಾವಿಗೀಡಾಗಿದ್ದರು. ಹಾಗಾಗಿ ಮೃತರ ಪತ್ನಿಗೆ ನಿವೇಶನ ಹಂಚಿಕೆ ಮಾಡುವುದಲ್ಲದೇ, ಆಕೆಗೆ ಮನೆ ಕಟ್ಟಿಸಿಕೊಳ್ಳಲು ಆರ್ಥಿಕ ನೆರವು ನೀಡುವುದೂ ಸಹ ಸಂಬಂಧಿಸಿದ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಆ ಕುರಿತು ಸೆಕ್ಷನ್ 13ರಲ್ಲಿ ಅತ್ಯಂತ ಸ್ಪಷ್ಟವಾಗಿದೆ. ಅದನ್ನು ಪಾಲನೆ ಮಾಡಲೇಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು? ನರಸಿಂಹಯ್ಯ 2008ರಲ್ಲಿ ಮೃತಪಟ್ಟ ನಂತರ ಹೈಕೋರ್ಟ್ ನಿರ್ದೇಶನದಂತೆ ಅವರ ಪತ್ನಿ ನಾಗಮ್ಮಗೆ 2012ರಲ್ಲಿ ದೊಡ್ಡಬೆಳವಂಗಲ ಗ್ರಾಮ ಪಂಚಾಯ್ತಿ 1200 ಚದರ್​ ಅಡಿಯ ನಿವೇಶನವನ್ನು ಮಂಜೂರು ಮಾಡಿತ್ತು. ಆದರೆ ಅವರು ಮನೆ ಕಟ್ಟಲಿಲ್ಲ ಎಂಬ ಕಾರಣಕ್ಕೆ ಅವರಿಗೆ ನೀಡಿದ್ದ ನಿವೇಶವನ್ನು ಗ್ರಾಮ ಪಂಚಾಯಿತಿ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂಓದಿ:ಪಿಎಸ್‌ಐ ವಿರುದ್ಧ ಅತ್ಯಾಚಾರ ಆರೋಪ: ವಿದ್ಯಾರ್ಥಿನಿಯಿಂದ ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.