ETV Bharat / state

ಮೂರು ತಿಂಗಳಲ್ಲಿ ಬೆಂಗಳೂರಿನ ಎಲ್ಲ ಟ್ರಾನ್ಸ್​ಫಾರ್ಮರ್​​ ಸ್ಥಳಾಂತರಿಸಿರುವ ವರದಿ ಸಲ್ಲಿಸಿ: ಬೆಸ್ಕಾಂಗೆ ಹೈಕೋರ್ಟ್ ಸೂಚನೆ - Bengaluru transformer issue

ಮುಂದಿನ ಮೂರು ತಿಂಗಳಲ್ಲಿ ಬೆಂಗಳೂರು ವ್ಯಾಪ್ತಿಯ ಎಲ್ಲ ಟ್ರಾನ್ಸ್​ಫಾರ್ಮರ್​​ ಸ್ಥಳಾಂತರಿಸಿರುವ ಕುರಿತು ವರದಿ ಸಲ್ಲಿಸುವಂತೆ ಬೆಸ್ಕಾಂಗೆ ಹೈಕೋರ್ಟ್ ಸೂಚನೆ ನೀಡಿದೆ.

ಬೆಸ್ಕಾಂಗೆ ಹೈಕೋರ್ಟ್ ಸೂಚನೆ
ಬೆಸ್ಕಾಂಗೆ ಹೈಕೋರ್ಟ್ ಸೂಚನೆ
author img

By

Published : Sep 12, 2022, 8:24 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿರುವ ಎಲ್ಲ ಟ್ರಾನ್ಸ್​ಫಾರ್ಮರ್​​ಗಳನ್ನು ಮುಂದಿನ ಮೂರು ತಿಂಗಳಲ್ಲಿ ಸ್ಥಳಾಂತರಿಸಿರುವ ವರದಿ ಸಲ್ಲಿಸಬೇಕು ಎಂದು ಬೆಸ್ಕಾಂಗೆ ಹೈಕೋರ್ಟ್ ಸೂಚನೆ ನೀಡಿದೆ. ಬೆಂಗಳೂರು ನಗರದ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿರುವ ಟ್ರಾನ್ಸ್​ಫಾರ್ಮರ್ ತೆರವು ಮಾಡುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠ ಸೂಚನೆ ನೀಡಿತು.

ಪಾದಚಾರಿ ಮಾರ್ಗದಲ್ಲಿರುವ ಟ್ರಾನ್ಸ್​ಫಾರ್ಮರ್​ ತೆರವು ಮಾಡುವ ಕಾರ್ಯ ಮುಂದುವರೆಸಬೇಕು. ಈ ಸಂಬಂಧ ವರದಿ ಸಲ್ಲಿಸಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿತು. ಅಲ್ಲದೇ, ಮುಂದಿನ ಮೂರು ತಿಂಗಳಲ್ಲಿ ಎಲ್ಲ ಟ್ರಾನ್ಸ್​ಫಾರ್ಮರ್​​ ತೆರವು ಮಾಡಬೇಕು. ಜೊತೆಗೆ, ಅನುಷ್ಠಾನ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿತು.

ಬೆಸ್ಕಾಂನಿಂದ ಪ್ರಮಾಣ ಪತ್ರ: ಬೆಂಗಳೂರು ನಗರದಲ್ಲಿ 5,784 ಟ್ರಾನ್ಸ್​ಫಾರ್ಮರ್​​ಗಳು ಪಾದಚಾರಿ ಮಾರ್ಗದಲ್ಲಿದ್ದವು. ಅವುಗಳನ್ನು ಹಂತ ಹಂತವಾಗಿ ಬೇರೊಂದು ಸ್ಥಳಗಳಿಗೆ ಸ್ಥಳಾಂತರಿಸುವುದು ಮತ್ತು ಕಂಬಗಳ ಮೇಲೆ ಇರಿಸಲಾಗುತ್ತಿದೆ. 2017ರಲ್ಲಿ 3,194 ಟ್ರಾನ್ಸ್​ಫಾರ್ಮರ್​​ಗಳನ್ನು ಸ್ಥಳಾಂತರಿಸಲಾಗಿದೆ. 2019ರಲ್ಲಿ 2ನ್ನು (ಒಟ್ಟು 3196) ಸ್ಥಳಾಂತರಿಸಲಾಗಿದೆ ಎಂದು ವಿವರಿಸಿದರು.

ಇನ್ನುಳಿದ 2,588 ಟ್ರಾನ್ಸ್​ಫಾರ್ಮರ್​​ಗಳಲ್ಲಿ 2022ರ ಆಗಸ್ಟ್ ಅಂತ್ಯದ ವೇಳೆಗೆ 1155ನ್ನು ತೆರವು ಮಾಡಲಾಗಿದೆ. ಮತ್ತು 1433 ಟ್ರಾನ್ಸ್​ಫಾರ್ಮರ್​​ಗಳನ್ನು 2023ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸ್ಥಳಾಂತರ ಮಾಡಲಾಗುವುದು ಎಂದು ಬೆಸ್ಕಾಂ ಪ್ರಮಾಣ ಪತ್ರದಲ್ಲಿ ವಿವರಿಸಿದೆ.

(ಇದನ್ನೂ ಓದಿ: ಗುತ್ತಿಗೆದಾರರಿಗೆ ಬಿಡುಗಡೆಯಾಗದ ಹಣ.. ಹೈಕೋರ್ಟ್​ನಿಂದ ಕೆಎಸ್​ಟಿಡಿಸಿಗೆ ಬಿತ್ತು ದಂಡ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.