ETV Bharat / state

ಮಕ್ಕಳ ಪೋಷಣೆಗೆ ಮೆಕ್ಸಿಕೋ ಪತ್ನಿ - ಭಾರತದ ಪತಿ ನಡುವೆ ಸಂಧಾನ ಮಾಡಿದ ಹೈಕೋರ್ಟ್

ದಂಪತಿ ನಡುವೆ ಉಂಟಾದ ಕೌಟುಂಬಿಕ ಕಲಹ ಪ್ರಕರಣದಲ್ಲಿ ಅವರ ಅಪ್ರಾಪ್ತ ಮಕ್ಕಳ ಭವಿಷ್ಯವನ್ನು ಹೈಕೋರ್ಟ್​ ಪರಿಗಣಿಸಿದೆ. ಮಕ್ಕಳು ಇಬ್ಬರೂ ಪೋಷಕರಿಗೆ ಸಲ್ಲುವಂತಾಗಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

high-court-did-compromise-for-children-between-couple
ಮಕ್ಕಳ ಪೋಷಣೆಗೆ ಮೆಕ್ಸಿಕೋ ಪತ್ನಿ-ಭಾರತದ ಪತಿ ನಡುವೆ ಸಂದಾನ ಮಾಡಿದ ಹೈಕೋರ್ಟ್
author img

By

Published : Oct 20, 2022, 7:40 AM IST

ಬೆಂಗಳೂರು: ಮೆಕ್ಸಿಕೋ ದೇಶದ ಪತ್ನಿ ಮತ್ತು ಭಾರತೀಯ ಪತಿಯ ನಡುವೆ ಉಂಟಾದ ಕೌಟುಂಬಿಕ ಕಲಹದಿಂದ ಅವರ ಅಪ್ರಾಪ್ತ ಮಕ್ಕಳ ಭವಿಷ್ಯವನ್ನು ಪರಿಗಣಿಸಿರುವ ಹೈಕೋರ್ಟ್​, ವಾರದ ನಾಲ್ಕು ದಿನ ತಾಯಿ ಮತ್ತು ಮೂರು ದಿನ ತಂದೆಯೊಂದಿಗೆ ಮಕ್ಕಳನ್ನು ಉಳಿಸಿಕೊಳ್ಳುವಂತೆ ಮನವರಿಕೆ ಮಾಡಿದೆ.

ತನಗೆ ಯಾವುದೇ ಮಾಹಿತಿ ನೀಡದೇ ಮಕ್ಕಳನ್ನು ಭಾರತಕ್ಕೆ ಕರೆತರಲಾಗಿದ್ದು, ಮಕ್ಕಳನ್ನು ಹುಡುಕಿಕೊಡುವಂತೆ ಕೋರಿ ಮೆಕ್ಸಿಕೋ ಮೂಲದ ಡೇನಿಲಯ್​ ಲೈರಾ ನ್ಯಾನಿ ಸಲ್ಲಿಸಿದ್ದ ಹೆಬಿಯಾಸ್​ ಕಾರ್ಪಸ್​ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವೀರಪ್ಪ ಮತ್ತು ನ್ಯಾ. ಕೆ.ಎಸ್​. ಹೇಮಲೇಖಾ ಅವರಿದ್ದ ನ್ಯಾಯಪೀಠ, ದಂಪತಿಗೆ ಮನವರಿಕೆ ಮಾಡಿ, ಇಬ್ಬರೂ ಮಕ್ಕಳ ಪೋಷಣೆ ಮಾಡಲು ಸೂಚಿಸಿದ್ದಾರೆ.

ಅದರಂತೆ, ಮಕ್ಕಳು ಭಾನುವಾರ ಸಂಜೆ 6ರಿಂದ ಶುಕ್ರವಾರ ಮಧ್ಯಾಹ್ನ 1:30ರವರೆಗೆ ತಾಯಿಯ ಜೊತೆ, ಶುಕ್ರವಾರ ಮಧ್ಯಾಹ್ನ 1.30ರಿಂದ ಭಾನುವಾರ ಸಂಜೆ 6ರವರೆಗೆ ತಂದೆಯೊಂದಿಗೆ ಇರಬೇಕು. ಈ ಸಂದರ್ಭದಲ್ಲಿ ಪತ್ನಿ ನೆಲೆಸುವುದಕ್ಕೆ ಪ್ರತ್ಯೇಕ ಮನೆ ಹಾಗೂ ಮಕ್ಕಳ ಪೋಷಣೆಗೆ ಮಾಸಿಕ 10 ಸಾವಿರ ರೂ.ಗಳನ್ನು ನೀಡಬೇಕು ಎಂದು ಪತಿ ಬ್ಯಾನರ್ಜಿಗೆ ಹೈಕೋರ್ಟ್​ ಸೂಚನೆ ನೀಡಿದೆ. ಜೊತೆಗೆ, ಈ ಸಂಬಂಧ ಜಂಟಿ ಮೆಮೋ ಸಹ ಪಡೆದುಕೊಂಡಿದೆ.

ಪ್ರಕರಣದಲ್ಲಿ ಮಕ್ಕಳನ್ನು ವಶಕ್ಕೆ ಪಡೆಯುವ ವಿಚಾರ ಎದುರಾಗಿದೆ. ಈ ರೀತಿಯ ಪ್ರಕರಣಗಳಲ್ಲಿ ಮಾನವೀಯ ಅಂಶಗಳು ಒಳಗೊಂಡಿದ್ದು, ಅತ್ಯಂತ ಜಟಿಲವಾಗಿರುತ್ತದೆ. ನೇರವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳು ಇಬ್ಬರೂ ಪೋಷಕರಿಗೆ ಸಲ್ಲುವಂತಾಗಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಜೊತೆಗೆ, ವಿಚ್ಛೇದನ ಕೋರಿ ದಂಪತಿ ಸಲ್ಲಿಸಿರುವ ವಿಚಾರಣೆ ಕೌಟುಂಬಿಕ ನ್ಯಾಯಾಲಯದಲ್ಲಿ ಆದೇಶ ಹೊರ ಬೀಳುವವರೆಗೂ ಇದೇ ಪದ್ಧತಿಯನ್ನು ಮುಂದುವರೆಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಮಕ್ಕಳನ್ನು ರಾಜ್ಯದಿಂದ ಹೊರ ಭಾಗಗಳಿಗೆ ಕರೆದುಕೊಂಡು ಹೋಗುವಂತಿಲ್ಲ ಎಂದು ನ್ಯಾಯಪೀಠ ನಿರ್ಬಂಧ ವಿಧಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರರಾದ ಡೇನಿಲಯ್​ ಲೈರಾ ನ್ಯಾನಿ ಮತ್ತು ಭಾರತೀಯರಾದ ಪ್ರಶಾಂತ್​ ಬ್ಯಾನರ್ಜಿ 2018ರ ಮಾರ್ಚ್​​ 1ರಂದು ಹಿಂದೂ ಧಾರ್ಮಿಕ ಪದ್ಧತಿಯಂತೆ ಚೆನ್ನೈನಲ್ಲಿ ವಿವಾಹವಾಗಿದ್ದರು. ಜೀವನ ರೂಪಿಸಿಕೊಳ್ಳುವುದಕ್ಕಾಗಿ ಇಬ್ಬರೂ ಬೆಂಗಳೂರಿಗೆ ಸ್ಥಳಾಂತರವಾಗಿದ್ದರು. ಈ ನಡುವೆ 2019ರ ಜನವರಿ 1ರಂದು ದಂಪತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಬಳಿಕ 2022ರ ಮೇ ತಿಂಗಳಲ್ಲಿ ಮೆಕ್ಸಿಕೋ ದೇಶಕ್ಕೆ ತೆರಳಿದ್ದರು. ನಂತರ 2022ರ ಜುಲೈ 20ರಂದು ಮಕ್ಕಳೊಂದಿಗೆ ಪಾರ್ಕ್​ನಲ್ಲಿ ವಾಯುವಿಹಾರಕ್ಕೆ ಹೋಗುವುದಾಗಿ ಬಂದ ಬ್ಯಾನರ್ಜಿ ಮತ್ತೆ ಹಿಂದಿರುಗಿರಲಿಲ್ಲ. ಬಳಿಕ ಪತ್ನಿಗೆ ಸಂದೇಶ ರವಾನಿಸಿದ್ದ ಬ್ಯಾನರ್ಜಿ ಮಕ್ಕಳೊಂದಿಗೆ ಭಾರತಕ್ಕೆ ತೆರಳಿರುವುದಾಗಿ ತಿಳಿಸಿದ್ದರು.

ಇದರಿಂದ ನೊಂದ ಡೇನಿಲಯ್​ ಲೈರಾ ನ್ಯಾನಿ ಬೆಂಗಳೂರಿಗೆ ಬಂದು, ಮಕ್ಕಳನ್ನು ಹಿಂದಿರುಗಿಸುವಂತೆ ನಗರದ ಅಮೃತಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ, ಪೊಲೀಸರು ದೂರನ್ನು ಸ್ವೀಕರಿಸಿರಲಿಲ್ಲ. ಜೊತೆಗೆ ಪರ್ಯಾಯ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದ್ದರು. ಆ ನಂತರ ಮಕ್ಕಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಹೆಬಿಯಾಸ್​ ಕಾರ್ಪ​ಸ್​ ಅರ್ಜಿ ಸಲ್ಲಿಸಿದ್ದರು.

ಅರ್ಜಿಗೆ ಸಂಬಂಧಿಸಿದಂತೆ ಪತ್ನಿ ಬ್ಯಾನರ್ಜಿ ಆಕ್ಷೇಪಣೆ ಸಲ್ಲಿಸಿ, ಪತ್ನಿಗೆ ತಿಳಿಯದೇ ಮಕ್ಕಳನ್ನು ಕರೆದುಕೊಂಡು ಹೋಗಿರುವ ಆರೋಪ ನಿರಾಕರಿಸಿದ್ದರು. ನಾವಿಬ್ಬರು ಗಂಡ ಹೆಂಡತಿ, 2018ರಿಂದ 2022ರವರೆಗಗೆ ಒಟ್ಟಾಗಿ ಸಹಜೀವನ ನಡೆಸಿದ್ದೇವೆ ಎಂದು ವಿವರಿಸಿದ್ದರು.

2022ರ ಮಾರ್ಚ್​ ತಿಂಗಳಲ್ಲಿ ಕುಟುಂಬ ಸಹಿತ ಸ್ವಂತ ದೇಶಕ್ಕೆ ತೆರಳಿ ತಮ್ಮ ಸಂಬಂಧಿಗಳೊಂದಿಗೆ ನೆಲೆಸಲು ಪತ್ನಿ ಇಚ್ಚಿಸಿದ್ದರು. ಇದೇ ಕಾರಣದಿಂದ ಬ್ಯಾನರ್ಜಿ ಮಕ್ಕಳೊಂದಿಗೆ ಟೂರಿಸ್ಟ್​ ವೀಸಾ ಪಡೆದು ಮೆಕ್ಸಿಕೋಗೆ ತೆರಳಿದ್ದೆ. ಆದರೆ, 3.8 ವರ್ಷದ ಮಕ್ಕಳನ್ನು ಬೆಂಗಳೂರಿನಲ್ಲಿ ಫ್ರೀ ನರ್ಸರಿಗೆ ಸೇರಿಸಲಾಗಿತ್ತು. ಜೊತೆಗೆ, ಮಕ್ಕಳಿಗೆ ಮೊದಲ ಕಂತಿನ ಶಾಲಾ ಶುಲ್ಕ ಪಾವತಿಸಲಾಗಿದೆ. ಮಕ್ಕಳ ಭವಿಷ್ಯ ರೂಪಿಸುವ ಹಂತವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಕರೆತಂದಿದ್ದೇನೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ಆವೇಶದಿಂದ ನಡೆದ ಹಲ್ಲೆಯಿಂದ ಪತ್ನಿ ಸತ್ತರೆ ಕೊಲೆ ಎಂದು ಪರಿಗಣಿಸಲಾಗದು: ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.