ETV Bharat / state

ಶಿಯೋಮಿ ಕಂಪೆನಿಯ 3700 ಕೋಟಿ ರೂ. ವಶಕ್ಕೆ ಪಡೆಯುವ ಆದೇಶ ರದ್ದು ಪಡಿಸಿದ ಹೈಕೋರ್ಟ್ - ಈಟಿವಿ ಭಾರತ್​ ಕನ್ನಡ

ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಶಿಯೋಮಿ ಕಂಪೆನಿಯ 3700ಕೋಟಿ ರೂಗಳ ವಶಕ್ಕೆ ಪಡೆಯುವ ಆದೇಶವನ್ನು ಷರತ್ತುಗಳೊಂದಿಗೆ ರದ್ದು ಪಡಿಸಿದ ಹೈಕೋರ್ಟ್
High Court cancels order to seize Rs 3700 crore from Xiaomi company with conditions
author img

By

Published : Dec 21, 2022, 9:58 AM IST

ಬೆಂಗಳೂರು: ಶಿಯೋಮಿ ಸಂಸ್ಥೆಯ ನಿಶ್ಚಿತ ಠೇವಣಿ (ಎಫ್‌ಡಿ)ಗಳಿಂದ 3700 ಕೋಟಿ ರೂ.ಗಳ ವಶಕ್ಕೆ ಪಡೆಯುವ ಸಂಬಂಧ ಬೆಂಗಳೂರು ಆದಾಯ ತೆರಿಗೆ ಇಲಾಖೆ ಉಪ ಆಯುಕ್ತರು ಜಾರಿಗೊಳಿಸಿದ್ದ ನೋಟಿಸ್‌ನ್ನು ಹೈಕೋರ್ಟ್ ರದ್ದು ಪಡಸಿದೆ.

ಈ ಸಂಬಂಧ 2022ರ ಆಗಸ್ಟ್ 11 ರಂದು ಬೆಂಗಳೂರು ಆದಾಯ ತೆರಿಗೆ ಇಲಾಖೆ ಉಪ ಆಯುಕ್ತರು ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ, ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಚೀನಾ ಕಂಪನಿಗಳಿಗೆ ಪರಿಹಾರ ನೀಡುವಾಗ ನ್ಯಾಯಾಲಯವು ಕೆಲವು ಷರತ್ತುಗಳನ್ನು ನಿಗದಿ ಪಡಿಸಿದೆ. ಅಲ್ಲದೆ, ಭಾರತದ ಹೊರಗಿನ ಯಾವುದೇ ಕಂಪೆನಿಗಳು ಸ್ಥಿರ ಠೇವಣಿ ಖಾತೆಗಳಿಂದ ರಾಯಧನ ರೂಪದಲಿ ಪಾವತಿ ಮಾಡಲು ಅರ್ಹತೆ ಹೊಂದಿರುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಅಲ್ಲದೆ, ಪ್ರತಿವಾದಿಯಾಗಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿಯೋಮಿ ಸಂಸ್ಥೆಯ 2019-20, 2020-21, ಮತ್ತು 2022-23ರ ಆರ್ಥಿಕ ವರ್ಷಸ ಆದಾಯದ ಮೌಲ್ಯಮಾಪನ ಪ್ರಕ್ರಿಯೆಗಳನ್ನು 2023ರ ಮಾರ್ಚ್ 31ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ: ಬಯೋಡೇಟಾ ಕಳಿಸಿ ಕೆಲಸ ತಗೊಳ್ಳಿ: ನಿರುದ್ಯೋಗ ಮುಕ್ತ ರಾಣೆಬೆನ್ನೂರಿಗೆ ಪಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.