ETV Bharat / state

ರೇಣುಕಾಚಾರ್ಯ, ಪ್ರತಾಪ್ ಸಿಂಹ ವಿರುದ್ದದ ಪ್ರಕರಣ ಹಿಂಪಡೆದ ಸರ್ಕಾರ: ಮಾಹಿತಿ ನೀಡಲು ಹೈಕೋರ್ಟ್ ಸೂಚನೆ - ಸರ್ಕಾರಕ್ಕೆ ವಿವರ ಕೇಳಿದ ಹೈಕೋರ್ಟ್​

ರೇಣುಕಾಚಾರ್ಯ ಮತ್ತು ಪ್ರತಾಪ್ ಸಿಂಹ ವಿರುದ್ದದ ಪ್ರಕರಣ ಹಿಂಪಡೆದ ಸರ್ಕಾರಕ್ಕೆ ಮಾಹಿತಿ ನೀಡಲು ಹೈಕೋರ್ಟ್ ಸೂಚನೆ ನೀಡಿದೆ.

Renukacharya and Pratap simha case, High court ask to government, Karnataka high court news, ರೇಣುಕಾಚಾರ್ಯ ಮತ್ತು ಪ್ರತಾಪ್ ಸಿಂಹ ಪ್ರಕರಣ, ಸರ್ಕಾರಕ್ಕೆ ವಿವರ ಕೇಳಿದ ಹೈಕೋರ್ಟ್​, ಕರ್ನಾಟಕ ಹೈಕೋರ್ಟ್​ ಸುದ್ದಿ,
ರೇಣುಕಾಚಾರ್ಯ, ಪ್ರತಾಪ್ ಸಿಂಹ ವಿರುದ್ದದ ಪ್ರಕರಣ ಹಿಂಪಡೆದ ಸರ್ಕಾರ
author img

By

Published : Mar 8, 2022, 2:30 PM IST

ಬೆಂಗಳೂರು: ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರೇಣುಕಾಚಾರ್ಯ ವಿರುದ್ದದ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯದಿಂದ ಹಿಂಪಡೆದಿರುವ ಸಂಬಂಧ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ಧ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಪ್ರಕರಣದ ಅಮೈಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಆದಿತ್ಯ ಸೋಂಧಿ, ಸುಪ್ರೀಂಕೋರ್ಟ್ 2021ರ ಆಗಸ್ಟ್ 10ರಂದು ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರ್ಕಾರಗಳು ಮನಬಂದಂತೆ ಹಿಂಪಡೆಯುತ್ತಿರುವ ಹಿನ್ನೆಲೆ ಮೇಲ್ವಿಚಾರಣೆ ನಡೆಸುವಂತೆ ಹೈಕೋರ್ಟ್​ಗಳಿಗೆ ಸೂಚಿಸಿದೆ. ಅದರಂತೆ 2020ರ ಸೆಪ್ಟೆಂಬರ್ 16ರಿಂದ ಈಚೆಗೆ ಯಾವುದೇ ಶಾಸಕ, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹೈಕೋರ್ಟ್ ಸಮ್ಮತಿಯಿಲ್ಲದೆ ಹಿಂಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದರು.

ಈ ಅಂಶ ಪರಿಗಣಿಸಿರುವ ಪೀಠ, ರಾಜ್ಯ ಸರ್ಕಾರ 2020ರ ಸೆಪ್ಟೆಂಬರ್ 16ರಿಂದ ಈಚೆಗೆ ಸಂಸದ ಪ್ರತಾಪ್ ಸಿಂಹ ವಿರುದ್ಧದ 1 ಪ್ರಕರಣ ಹಾಗೂ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ದ 3 ಪ್ರಕರಣಗಳನ್ನು ಹಿಂಪಡೆದಿರುವುದಾಗಿ ತಿಳಿಸಿದೆ. ಪ್ರಕರಣಗಳನ್ನು ಹಿಂಪಡೆದಿರುವ ಬಗ್ಗೆ ಮಾತ್ರವೇ ಸರ್ಕಾರ ತಿಳಿಸಿದೆಯೇ ಹೊರತು ಪ್ರಕರಣ ಹಿಂಪಡೆಯಲು ಅರ್ಜಿ ಸಲ್ಲಿಸಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಪ್ರಕರಣಗಳನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿರುವ ದಾಖಲೆಗಳನ್ನು ಕೂಡ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಇದೇ ವೇಳೆ 2020ರ ಸೆಪ್ಟೆಂಬರ್ 20ಕ್ಕೆ ಮೊದಲು ಮತ್ತು ನಂತರ ರಾಜ್ಯ ಸರ್ಕಾರ ಎಷ್ಟು ಪ್ರಕರಣಗಳನ್ನು ಹಿಂಪಡೆಯಲು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 321ರ ಅಡಿ ಅರ್ಜಿ ಸಲ್ಲಿಸಿದೆ. ಅವುಗಳಲ್ಲಿ ಬಾಕಿ ಇರುವ ಪ್ರಕರಣಗಳೆಷ್ಟು ಎಂಬುದರ ಬಗ್ಗೆಯೂ ಮಾಹಿತಿ ನೀಡುವಂತೆ ಹೈಕೋರ್ಟ್, ತನ್ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.