ETV Bharat / state

ಎಂ ಬಿ ಪಾಟೀಲ್ ಕೈ ಇನ್ನಷ್ಟು ಬಲಪಡಿಸಿದ ಹೈಕಮಾಂಡ್: ಪ್ರಚಾರ ಸಮಿತಿಗೆ ಇನ್ನಷ್ಟು ನಾಯಕರ ನೇಮಕ - kannada top news

ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಗೆ ಪ್ರಚಾರದ ವಿಚಾರವಾಗಿ ಇನ್ನಷ್ಟು ಬಲ - ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಹಂಬಲ.

high-command-strengthened-by-mb-patil-more-leaders-appointed-to-campaign-committee
ಎಂ ಬಿ ಪಾಟೀಲ್ ಕೈ ಇನ್ನಷ್ಟು ಬಲಪಡಿಸಿದ ಹೈಕಮಾಂಡ್: ಪ್ರಚಾರ ಸಮಿತಿಗೆ ಇನ್ನಷ್ಟು ನಾಯಕರ ನೇಮಕ
author img

By

Published : Jan 14, 2023, 11:03 PM IST

ಬೆಂಗಳೂರು: ಕೆಪಿಸಿಸಿ ( ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ) ಪ್ರಚಾರ ಸಮಿತಿಯ ವಿವಿಧ ಜವಾಬ್ದಾರಿ ಹಂಚಿಕೆ ಮಾಡಿ ಎಐಸಿಸಿ (ಅಖಿಲ ಭಾರತೀಯ ಕಾಂಗ್ರೆಸ್​ ಸಮಿತಿ) ಆದೇಶ ಹೊರಡಿಸಿದೆ. ಅಖಿಲ ಕರ್ನಾಟಕ ಸಂಘಟನಾ ಸಹ ಅಧ್ಯಕ್ಷರಾಗಿ ಬಿ ಎಲ್ ಶಂಕರ್ ನೇಮಕಗೊಂಡಿದ್ದಾರೆ. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ನೇಮಕಗೊಂಡ ಬಳಿಕ ಬಹುತೇಕ ಚಿತ್ರಕಲಾ ಪರಿಷತ್ತಿಗೆ ಹಾಗೂ ಅದರ ಚಟುವಟಿಕೆಗೆ ಸೀಮಿತರಾಗಿದ್ದ ಬಿ ಎಲ್ ಶಂಕರ್ ಮತ್ತೊಮ್ಮೆ ಪಕ್ಷದ ಕಾರ್ಯಕ್ರಮಕ್ಕೆ ನಿಯೋಜನೆಗೊಂಡಿದ್ದಾರೆ.

ಮುಂಬರುವ ದಿನಗಳಲ್ಲಿ ಹೊಸದಾಗಿ ನೇಮಕಗೊಂಡಿರುವ ಸದಸ್ಯರು ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಗೆ ಪ್ರಚಾರದ ವಿಚಾರವಾಗಿ ಇನ್ನಷ್ಟು ಬಲ ತುಂಬಲಿದ್ದಾರೆ.
ವಿಭಾಗವಾರು ಕೋ ಚೇರ್ ಮನ್​ಗಳ ನೇಮಿಸಿ ಆದೇಶ ಮಾಡಲಾಗಿದ್ದು, ಕಲಬುರ್ಗಿ ವಿಭಾಗ- ಡಾ.ಶರಣಪ್ರಕಾಶ್ ಪಾಟೀಲ್, ಬೆಳಗಾವಿ ವಿಭಾಗ- ಸಂತೋಷ್ ಲಾಡ್, ಬೆಂಗಳೂರು ವಿಭಾಗ- ರಿಜ್ವಾನ್ ಅರ್ಷದ್, ಮೈಸೂರು ವಿಭಾಗ- ಡಾ. ಯತೀಂದ್ರ ಸಿದ್ದರಾಮಯ್ಯ, ಮಧ್ಯ ಕರ್ನಾಟಕ ವಿಭಾಗ- ಚಂದ್ರಪ್ಪ, ಕರಾವಳಿ ಕರ್ನಾಟಕ- ಮಂಜುನಾಥ್ ಭಂಡಾರಿ ಇವರಿಗೆ ಪ್ರಚಾರ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಮುಖ್ಯ ಸಂಯೋಜಕರನ್ನಾಗಿ, ಶಕ್ತಿ ಬಂದಂತಾಗಿದೆ. ಪ್ರಸಾದ ಅಬ್ಬಯ್ಯ, ನಾಗೇಂದ್ರ, ಆನಂದ್​ ನ್ಯಾಮಗೌಡ, ಡಾ. ಅಂಜಲಿ ನಿಂಬಾಲ್ಕರ್, ಸೌಮ್ಯ ರೆಡ್ಡಿ, ಲಕ್ಷ್ಮೀ ಹೆಬ್ಬಾಲ್ಕರ್, ರೂಪ ಶಶಿಧರ್,​ ಗಣೇಶ್​ ಹುಕ್ಕೇರಿ, ಡಾ. ರಂಗನಾಥ್​, ಪ್ರಕಾಶ್​ ರಾಥೋಡ್, ಈ ಎಲ್ಲಾ ಶಾಸಕರನ್ನು ಮುಖ್ಯ ಸಂಯೋಜಕರನ್ನಾಗಿ ನೇಮಿಸಿದ್ದಾರೆ.​

ಎಂ ಬಿ ಪಾಟೀಲ್ ಕೈ ಇನ್ನಷ್ಟು ಬಲಪಡಿಸಿದ ಹೈಕಮಾಂಡ್: ಪ್ರಚಾರ ಸಮಿತಿಗೆ ಇನ್ನಷ್ಟು ನಾಯಕರ ನೇಮಕ
ಎಂ ಬಿ ಪಾಟೀಲ್ ಕೈ ಇನ್ನಷ್ಟು ಬಲಪಡಿಸಿದ ಹೈಕಮಾಂಡ್: ಪ್ರಚಾರ ಸಮಿತಿಗೆ ಇನ್ನಷ್ಟು ನಾಯಕರ ನೇಮಕ

ಇವರ ಜೊತೆ ಮುಖ್ಯ ಸಮನ್ವಯಕಾರರನ್ನಾಗಿ 32 ಮಂದಿಯನ್ನು ನೇಮಿಸಲಾಗಿದೆ. ಇದರಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಇನ್ನಿತರ ಹಲವು ಮುಖಂಡರು ಇದ್ದಾರೆ. ಇದಲ್ಲದೆ ಸಮನ್ವಯ ಕಾರರನ್ನಾಗಿ 66 ಮಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ತಾಲೂಕು ಪಂಚಾಯಿತಿ ಮುಖಂಡರು ಮತ್ತು ಇತರೆ ನಾಯಕರು ಇದ್ದಾರೆ.

ಇವರ ಜೊತೆ 37 ಮಂದಿ ಜಂಟಿ ಸಮನ್ವಯ ಕಾರರನ್ನ, ಮಾಧ್ಯಮ ವಿಭಾಗಕ್ಕೆ 9 ಮಂದಿ, 10 ಮಂದಿ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯರು, 29 ಮಂದಿ ಜಿಲ್ಲಾ ಅಧ್ಯಕ್ಷರುಗಳು ಈ ಸಮಿತಿಯಲ್ಲಿ ಇದ್ದು ಪ್ರಚಾರ ಸಮಿತಿಯ ಕಾರ್ಯ ವೈಖರಿಯನ್ನ ಇನ್ನಷ್ಟು ಉತ್ಕೃಷ್ಟ ಗೊಳಿಸಲಿದ್ದಾರೆ. ಮುಂಬರುವ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಸಂದರ್ಭ ಪಕ್ಷವನ್ನ ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸದಸ್ಯರು ಪ್ರಚಾರ ಸಮಿತಿ ಅಧ್ಯಕ್ಷರಿಗೆ ಬಲವಾಗಿ ನಿಲ್ಲಲಿದ್ದಾರೆ.

ಈಗಾಗಲೇ ಪಕ್ಷದ ಹೈಕಮಾಂಡ್ ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಹಂಬಲ ಹೊಂದಿದ್ದು ಈ ನಿಟ್ಟಿನಲ್ಲಿ ಅಗತ್ಯ ಸಹಕಾರವನ್ನು ನೀಡುತ್ತಿದೆ. ಇದೀಗ ಪ್ರಚಾರ ಸಮಿತಿಗೆ ಇನ್ನಷ್ಟು ಪದಾಧಿಕಾರಿಗಳನ್ನು ನೇಮಿಸಿದ್ದು ಎಂಬಿ ಪಾಟೀಲ್​ಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ.

ಇದನ್ನೂ ಓದಿ: ದೇವೇಗೌಡರ ಮಾನಸ ಪುತ್ರ ಕೈ ತೆಕ್ಕೆಗೆ; ಮಾಜಿ ಸಚಿವ ಎಚ್ ನಾಗೇಶ್​​​​ಗೂ ಸಂಕ್ರಾಂತಿ ಸಿಹಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.