ETV Bharat / state

ಹೀರೋ ಕಂಪನಿಯಿಂದ ಎರಡು ನೂತನ ಎಲೆಕ್ಟ್ರಿಕ್ ಸ್ಕೂಟರ್ಸ್​ ಬಿಡುಗಡೆ - Hero electric CEO Sohinder singh Gill

ಹೀರೋ ಎಲೆಕ್ಟ್ರಿಕ್ ತನ್ನ ಎರಡು ಹೊಸ ಇ-ಸ್ಕೂಟರ್​ಗಳಾದ ಆಪ್ಟಿಮಾ ಇಆರ್ ಮತ್ತು ಎನ್‍ವೈಎಕ್ಸ್ ಇಆರ್ (ವಿಸ್ತರಿತ ಶ್ರೇಣಿ) ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೂಲಕ ಹೆವಿ ಡ್ಯೂಟಿ ಮತ್ತು ಹೆಚ್ಚು ವೇಗದ ಇ-ಸ್ಕೂಟರ್​ಗ​ಳನ್ನು ಭಾರತದಲ್ಲಿ ಬಿಡುಗಡೆ ಮಾಡಿದಂತಾಗಿದೆ.

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಮತ್ತು ಎನ್‍ವೈಎಕ್ಸ್ ಇ-ಸ್ಕೂಟರ್ ಬಿಡುಗಡೆ
author img

By

Published : Aug 19, 2019, 8:56 PM IST

ಬೆಂಗಳೂರು: ಹೀರೋ ಎಲೆಕ್ಟ್ರಿಕ್ ತನ್ನ ಎರಡು ಹೊಸ ಇ-ಸ್ಕೂಟರ್​ಗಳಾದ ಆಪ್ಟಿಮಾ ಇಆರ್ ಮತ್ತು ಎನ್‍ವೈಎಕ್ಸ್ ಇಆರ್ (ವಿಸ್ತರಿತ ಶ್ರೇಣಿ) ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಮೂಲಕ ಹೆವಿ ಡ್ಯೂಟಿ ಮತ್ತು ಹೆಚ್ಚು ವೇಗದ ಇ-ಸ್ಕೂಟರ್​ಗ​ಳನ್ನು ಭಾರತದಲ್ಲಿ ಬಿಡುಗಡೆ ಮಾಡಿದಂತಾಗಿದೆ ಹೀರೋ ಕಂಪನಿ. ಆಪ್ಟಿಮಾ ಇಆರ್ ಮತ್ತು ಎನ್‍ವೈಎಕ್ಸ್ ಇಆರ್ ದೇಶದ ಎಲ್ಲಾ ಹೀರೋ ಎಲೆಕ್ಟ್ರಿಕ್ ಡೀಲರ್​ಶಿಪ್‍ಗಳಲ್ಲಿ ಲಭ್ಯವಿವೆ. ಇವುಗಳ ಬೆಲೆ ಕ್ರಮವಾಗಿ 68,721 ರೂ. ಮತ್ತು 69,754 ರೂ. ಗಳಾಗಿವೆ (ಎಕ್ಸ್ ಶೋರೂಂ ಬೆಲೆ).

ದಕ್ಷಿಣ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಕಂಪನಿಯು ಬೆಂಗಳೂರಿನಲ್ಲಿ ಹೊಸ ಕಾರ್ಪೊರೇಟ್ ಕಚೇರಿಯನ್ನು ಆರಂಭಿಸುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿದೆ. ದಕ್ಷಿಣ ಭಾರತದಲ್ಲಿ ತನ್ನ ಕಾರ್ಯಾಚರಣೆ ಮತ್ತು ಕಾರ್ಯತಂತ್ರ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೊಸ ಗ್ರಾಹಕ ಟಚ್‍ಪಾಯಿಂಟ್‍ಗಳನ್ನು ಆರಂಭಿಸಲಿದೆ. ಪ್ರಸ್ತುತ ಹೀರೋ ಎಲೆಕ್ಟ್ರಿಕ್ ಕಂಪನಿಯು ದೇಶದಲ್ಲಿ 615 ಟಚ್‍ಪಾಯಿಂಟ್‍ಗಳನ್ನು ಹೊಂದಿದ್ದು, 2020 ರ ವೇಳೆಗೆ ಇವುಗಳ ಸಂಖ್ಯೆಯನ್ನು 1000 ಕ್ಕೆ ಹೆಚ್ಚಿಸುವ ಗುರಿ ಹಾಕಿಕೊಂಡಿದೆ.

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಮತ್ತು ಎನ್‍ವೈಎಕ್ಸ್ ಇ-ಸ್ಕೂಟರ್ ಬಿಡುಗಡೆ

ಈ ಮೂಲಕ ದೇಶದ ಗ್ರಾಮೀಣ ಪ್ರದೇಶಗಳಲ್ಲಿಯೂ ಬ್ರ್ಯಾಂಡ್ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿದೆ. ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಹೀರೋ ಕಂಪನಿಯು ಇ-ಸ್ಕೂಟರ್ ಉತ್ಪಾದನೆ ಪ್ರಮಾಣವನ್ನು ವಾರ್ಷಿಕ 5 ಲಕ್ಷ ಸ್ಕೂಟರ್ ಉತ್ಪಾದನೆಗೆ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಿದೆ.

ಎನ್‍ವೈಎಕ್ಸ್ ಇಆರ್ ಬಿಡುಗಡೆಯೊಂದಿಗೆ ಕಂಪನಿಯು ಬಿ2ಬಿ ಕ್ಷೇತ್ರದ ಅಗತ್ಯತೆಗಳನ್ನು ಪೂರೈಸಲು ಬೇಕಾದ ಹೆವಿಡ್ಯೂಟಿ ಉತ್ಪನ್ನಗಳನ್ನು ಪರಿಚಯಿಸಲು ವಿಸ್ತಾರವಾದ ಯೋಜನೆಗಳನ್ನು ರೂಪಿಸುತ್ತಿರುವ ಕಂಪನಿಯು, ವಾಣಿಜ್ಯ ಕ್ಷೇತ್ರಕ್ಕೂ ವಿಸ್ತರಣೆ ಮಾಡಲಿದೆ. ಕಡಿಮೆ ಬಂಡವಾಳ ಅಗತ್ಯವಿರುವ ಈ ಹೀರೋ ಎಲೆಕ್ಟ್ರಿಕ್ ಉತ್ಪನ್ನಗಳು ವಾಣಿಜ್ಯ ಬಳಕೆಗೆ ಸೂಕ್ತ ಎನಿಸಲಿವೆ ಮತ್ತು ಶೂನ್ಯ ಕಾರ್ಬನ್ ಮಾಲಿನ್ಯ ಹೊಂದಿವೆ.

ಭಾರತದಲ್ಲಿ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಹೀರೋ ಎಲೆಕ್ಟ್ರಿಕ್, ದೇಶದಲ್ಲಿ ಎಲೆಕ್ಟ್ರಿಕ್ ಸಾರಿಗೆಯನ್ನು ಉತ್ತೇಜಿಸುವುದು ಮತ್ತು ಅಳವಡಿಕೆಯತ್ತ ದೂರದೃಷ್ಟಿ ಹೊಂದಿರುವ ಸರ್ಕಾರಕ್ಕೆ ಬೆಂಬಲವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಕಂಪನಿಯು ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಪೂರಕವಾದ ಸಂಶೋಧನೆ ನಡೆಸುವ ಸಂಬಂಧ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಂಡವಾಳ ಹೂಡುತ್ತಿದೆ. ಈ ಮೂಲಕ ಪರ್ಯಾಯ ವಾಹನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಿದೆ.

ಹೀರೋ ಎಲೆಕ್ಟ್ರಿಕ್‍ನ ಈ ಹೈಸ್ಪೀಡ್ ವಾಹನಗಳು ಎಫ್‍ಎಎಂಇ II ಪ್ರಯೋಜನಗಳನ್ನು ಪಡೆಯಲು ಅರ್ಹತೆ ಹೊಂದಿವೆ. ಕಡಿಮೆ ಜಿಎಸ್‍ಟಿ ದರವನ್ನು ಹೊಂದಿವೆ. ಇದರಿಂದ ಗ್ರಾಹಕರು ಹೀರೋ ಎಲೆಕ್ಟ್ರಿಕ್ ವಾಹನಗಳನ್ನು ಆಕರ್ಷಕ ಮತ್ತು ಕೈಗೆಟುಕುವ ದರದಲ್ಲಿ ಪಡೆಯಬಹುದಾಗಿದೆ. ದ್ವಿಚಕ್ರ ವಾಹನಗಳನ್ನು ಖರೀದಿಸುವ ಆಕಾಂಕ್ಷೆ ಹೊಂದಿರುವವರಿಗೆ ಮತ್ತು ಪರಿಸರ ಕಾಳಜಿಯ ಸಾರಿಗೆಯನ್ನು ಬಯಸುವವರಿಗೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್​ಗಳು ಸೂಕ್ತವೆನಿಸುತ್ತವೆ. ಹಗುರವಾದ ಮತ್ತು ಹೈಸ್ಪೀಡ್ ಕಾರ್ಯಕ್ಷಮತೆಯನ್ನು ಹೊಂದಿರುವ ಇ-ಸ್ಕೂಟರ್​ಗಳನ್ನು ಅವರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Intro:VISUALS CAMERABody:ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಮತ್ತು ಎನ್‍ವೈಎಕ್ಸ್ ಇ-ಸ್ಕೂಟರ್ ಬಿಡುಗಡೆ

ಬೆಂಗಳೂರು: ಹೀರೋ ಎಲೆಕ್ಟ್ರಿಕ್ ತನ್ನ ಎರಡು ಹೊಸ ಇ-ಸ್ಕೂಟರ್‍ಗಳಾದ ಆಪ್ಟಿಮಾ ಇಆರ್ ಮತ್ತು ಎನ್‍ವೈಎಕ್ಸ್ ಇಆರ್ (ವಿಸ್ತರಿತ ಶ್ರೇಣಿ) ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಈ ಮೂಲಕ ಹೆವಿ ಡ್ಯೂಟಿ ಮತ್ತು ಹೆಚ್ಚು ವೇಗದ ಇ-ಸ್ಕೂಟರ್‍ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದಂತಾಗಿದೆ. ಆಪ್ಟಿಮಾ ಇಆರ್ ಮತ್ತು ಎನ್‍ವೈಎಕ್ಸ್ ಇಆರ್ ದೇಶದ ಎಲ್ಲಾ ಹೀರೋ ಎಲೆಕ್ಟ್ರಿಕ್ ಡೀಲರ್‍ಶಿಪ್‍ಗಳಲ್ಲಿ ಲಭ್ಯವಿವೆ. ಇವುಗಳ ಬೆಲೆ ಕ್ರಮವಾಗಿ 68,721 ರೂಪಾಯಿ ಮತ್ತು 69,754ರೂಪಾಯಿಗಳಾಗಿವೆ(ಎಕ್ಸ್ ಶೋರೂಂ ಬೆಲೆ).

ದಕ್ಷಿಣ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಕಂಪನಿಯು ಬೆಂಗಳೂರಿನಲ್ಲಿ ಹೊಸ
ಕಾರ್ಪೊರೇಟ್ ಕಚೇರಿಯನ್ನು ಆರಂಭಿಸುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿತು. ದಕ್ಷಿಣ ಭಾರತದಲ್ಲಿ ತನ್ನ
ಕಾರ್ಯಾಚರಣೆ ಮತ್ತು ಕಾರ್ಯತಂತ್ರ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೊಸ
ಗ್ರಾಹಕ ಟಚ್‍ಪಾಯಿಂಟ್‍ಗಳನ್ನು ಆರಂಭಿಸಲಿದೆ. ಪ್ರಸ್ತುತ ಹೀರೋ ಎಲೆಕ್ಟ್ರಿಕ್ ಕಂಪನಿಯು ದೇಶದಲ್ಲಿ 615
ಟಚ್‍ಪಾಯಿಂಟ್‍ಗಳನ್ನು ಹೊಂದಿದ್ದು, 2020 ರ ವೇಳೆಗೆ ಇವುಗಳ ಸಂಖ್ಯೆಯನ್ನು 1000 ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.

ಈ ಮೂಲಕ ದೇಶದ ಗ್ರಾಮೀಣ ಪ್ರದೇಶಗಳಲ್ಲಿಯೂ ಬ್ರ್ಯಾಂಡ್ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿದೆ.
ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಕಂಪನಿಯು ಇ-ಸ್ಕೂಟರ್ ಉತ್ಪಾದನೆ ಪ್ರಮಾಣವನ್ನು ವಾರ್ಷಿಕ 5 ಲಕ್ಷ ಸ್ಕೂಟರ್ ಉತ್ಪಾದನೆಗೆ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಿದೆ.

ಎನ್‍ವೈಎಕ್ಸ್ ಇಆರ್ ಬಿಡುಗಡೆಯೊಂದಿಗೆ ಕಂಪನಿಯು ಬಿ2ಬಿ ಕ್ಷೇತ್ರದ ಅಗತ್ಯತೆಗಳನ್ನು ಪೂರೈಸಲು ಬೇಕಾದ ಹೆವಿ
ಡ್ಯೂಟಿ ಉತ್ಪನ್ನಗಳನ್ನು ಪರಿಚಯಿಸಲು ವಿಸ್ತಾರವಾದ ಯೋಜನೆಗಳನ್ನು ರೂಪಿಸುತ್ತಿರುವ ಕಂಪನಿಯು, ವಾಣಿಜ್ಯ
ಕ್ಷೇತ್ರಕ್ಕೂ ವಿಸ್ತರಣೆ ಮಾಡಲಿದೆ. ಕಡಿಮೆ ಬಂಡವಾಳ ಅಗತ್ಯವಿರುವ ಈ ಹೀರೋ ಎಲೆಕ್ಟ್ರಿಕ್ ಉತ್ಪನ್ನಗಳು ವಾಣಿಜ್ಯ
ಬಳಕೆಗೆ ಸೂಕ್ತ ಎನಿಸಲಿವೆ. ಮತ್ತು ಶೂನ್ಯ ಕಾರ್ಬನ್ ಮಾಲಿನ್ಯ ಹೊಂದಿವೆ.

ಭಾರತದಲ್ಲಿ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಹೀರೋ ಎಲೆಕ್ಟ್ರಿಕ್, ದೇಶದಲ್ಲಿ ಎಲೆಕ್ಟ್ರಿಕ್ ಸಾರಿಗೆಯನ್ನು ಉತ್ತೇಜಿಸುವುದು ಮತ್ತು ಅಳವಡಿಕೆಯತ್ತ ದೂರದೃಷ್ಟಿ ಹೊಂದಿರುವ ಸರ್ಕಾರಕ್ಕೆ ಬೆಂಬಲವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಕಂಪನಿಯು ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಪೂರಕವಾದ
ಸಂಶೋಧನೆ ನಡೆಸುವ ಸಂಬಂಧ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಂಡವಾಳ ಹೂಡುತ್ತಿದೆ. ಈ ಮೂಲಕ ಐಸ್
ವಾಹನಗಳಿಗೆ ಪರ್ಯಾಯ ವಾಹನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಿದೆ. ಹೀರೋ ಎಲೆಕ್ಟ್ರಿಕ್‍ನ ಈ ಹೈಸ್ಪೀಡ್ ವಾಹನಗಳು ಎಫ್‍ಎಎಂಇ II ಪ್ರಯೋಜನಗಳನ್ನು ಪಡೆಯಲು ಅರ್ಹತೆ ಹೊಂದಿವೆ ಮತ್ತು ಕಡಿಮೆ ಜಿಎಸ್‍ಟಿ ದರವನ್ನು ಹೊಂದಿವೆ. ಇದರಿಂದ ಗ್ರಾಹಕರು ಹೀರೋ ಎಲೆಕ್ಟ್ರಿಕ್ ವಾಹನಗಳನ್ನು ಆಕರ್ಷಕ ಮತ್ತು ಕೈಗೆಟುಕುವ ದರಲ್ಲಿ ಪಡೆಯಬಹುದಾಗಿದೆ. ದ್ವಿಚಕ್ರ ವಾಹನಗಳನ್ನು ಖರೀದಿಸುವ ಆಕಾಂಕ್ಷೆ ಹೊಂದಿರುವವರಿಗೆ ಮತ್ತು ಪರಿಸರ ಕಾಳಜಿಯ ಸಾರಿಗೆಯನ್ನು ಬಯಸುವವರಿಗೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್‍ಗಳು ಸೂಕ್ತವೆನಿಸುತ್ತವೆ. ಹಗುರವಾದ ಮತ್ತು ಹೈಸ್ಪೀಡ್ ಕಾರ್ಯಕ್ಷಮತೆಯನ್ನು ಹೊಂದಿರುವ ಈ ಸ್ಕೂಟರ್‍ಗಳನ್ನು ಅವರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.